Advertisement

ಬಂಗ್ಲೆಗುಡ್ಡೆ ದರೋಡೆ: ಮತ್ತಿಬ್ಬರ ಬಂಧನ

09:38 AM Feb 22, 2018 | |

ಕಾರ್ಕಳ:  ಬಂಗ್ಲೆಗುಡ್ಡೆಯಲ್ಲಿ ಫೆ. 3ರಂದು ರಾತ್ರಿ ದಂಪತಿಗೆ ಹಲ್ಲೆಗೈದು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಫೆ. 20ರಂದು ಶಿರ್ವದಲ್ಲಿ ಬಂಧಿಸಲಾಗಿದೆ. 

Advertisement

ಅಜರುದ್ದೀನ್‌ ಯಾನೆ ಮಂಚಕಲ್‌ ಅಜರುದ್ದೀನ್‌(32) ಹಾಗೂ ಕಾಪು ಅಜರು ದ್ದೀನ್‌(25)ಬಂಧಿತರು.  ಬಂಧಿತ ಅಜರುದ್ದೀನ್‌ನಿಂದ  ದರೋಡೆ ನಡೆಸಿದ್ದ 21 ಸಾವಿರ ರೂ. ಮೌಲ್ಯದ ಚಿನ್ನದ ಬೆಂಡೋಲೆ ಹಾಗೂ ಕಾಪು ಸಮೀಪ ಸರ ಕಳ್ಳತನಕ್ಕಾಗಿ ಬಳಸಿದ 2 ಲಕ್ಷ ರೂ. ಮೌಲ್ಯದ ನಿಂಜಾ ಬೈಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಭಟ್ಕಳ, ಕುಂದಾಪುರ, ಉಡುಪಿ ಮತ್ತು ಕಾರ್ಕಳದಲ್ಲಿ ಕಳ್ಳತನ ನಡೆಸಿದ್ದಲ್ಲದೆ, ಈ ಹಿಂದೆ ನಡೆದಿದ್ದ ಹೆದ್ದಾರಿ ದರೋಡೆ ಪ್ರಕರಣಗಳಲ್ಲೂ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲ, ಮಂಕಿ, ಭಟ್ಕಳ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ, ಮಣಿಪಾಲ, ಕಾಪು, ಹಿರಿಯಡಕ ಮತ್ತು ಮಂಗಳೂರು ನಗರದ ಬಂದರು ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕಳ್ಳತನಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ವಾರಂಟ್‌ ಹೊರಡಿಸಿದ್ದರೂ  ಮೂರ್‍ನಾಲ್ಕು ವರ್ಷಗಳಿಂದ  ಹಾಜರಾಗದೆ ತಲೆಮರೆಸಿ ಕೊಂಡಿದ್ದರು.

ಅಕ್ಕ-ಅಮ್ಮನ ಬಂಧನ
ಈ ನಡುವೆ ಕಾಪು ಅಜರುದ್ದೀನ್‌ನ ತಾಯಿ ಕೈರುನ್ನೀಸ ಹಾಗೂ ಅಕ್ಕ ಮುಮ್ತಾಸ್‌ನನ್ನು ಫೆ. 16ರಂದು ಬಂಧಿ ಸಲಾಗಿದ್ದು,  ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಜರುದ್ದೀನ್‌ ಕಳವುಗೈದ ಚಿನ್ನಾಭರಣವನ್ನು ಇವರು  ಅಡವಿಟ್ಟು ಸಾಲ ಪಡೆದಿದ್ದರು.

Advertisement

ಒಟ್ಟು 8 ಆರೋಪಿಗಳ ಬಂಧನ
ಉತ್ತರಕನ್ನಡ ಜಿಲ್ಲೆ ಹಾಗೂ ಕಾರ್ಕಳ ಬಂಗ್ಲೆಗುಡ್ಡೆ  ಸಹಿತ ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ದರೋಡೆ ಪ್ರಕರಣಗಳಿಗೆ ಸಂಬಂಧಿಸಿ ಇದುವರೆಗೆ 8 ಆರೋಪಿ ಗಳನ್ನು ಬಂಧಿಸಲಾಗಿದ್ದು, 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಬಂಗ್ಲೆಗುಡ್ಡೆ  ಪ್ರಕರಣದ ಮತ್ತೋರ್ವ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಬಹುಮಾನ ಘೋಷಣೆ
ಹಲವು ವರ್ಷಗಳಿಂದ  ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ್ದ ಆರೋಪಿಗಳನ್ನು ಬಂಧಿಸಿದ ಕಾರ್ಕಳ ಹಾಗೂ ಕಾಪು ಪೊಲೀಸ್‌ ಅಪರಾಧ ತಂಡಕ್ಕೆ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಲಕ್ಷ್ಮಣ ಬ. ನಿಂಬರಗಿ ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next