Advertisement

ಮಾನಹಾನಿ ಪ್ರಕರಣ: ಸಂಪಾದಕನನ್ನು ಜೈಲಿಗಟ್ಟಿದ ಬಾಂಗ್ಲಾ ಕೋರ್ಟ್‌

05:04 PM Oct 23, 2018 | Team Udayavani |

ಢಾಕಾ : ಬಾಂಗ್ಲಾದೇಶದ ನ್ಯಾಯಾಲಯವೊಂದು 78ರ ಹರೆಯದ ವಿಪಕ್ಷ ಪರ ಸಂಪಾದರೊಬ್ಬರನ್ನು ಮಾನಹಾನಿ ಪ್ರಕರಣವೊಂದರಲ್ಲಿ ಜಾಮೀನು ತಿರಸ್ಕರಿಸಿ ಜೈಲಿಗಟ್ಟಿರುವುದಾಗಿ ವರದಿಯಾಗಿದೆ.

Advertisement

ಸಂಪಾದಕ ಮೊಯಿನುಲ್‌ ಹುಸೇನ್‌ ಅವರು ಕೆಲ ದಿನಗಳ ಹಿಂದಷ್ಟೇ ಪತ್ರಕರ್ತೆಯೊಬ್ಬಳನ್ನು “ಶೀಲಗೆಟ್ಟವಳು’ ಎಂದು ಟಿವಿ ಟಾಕ್‌ ಶೋ ನಲ್ಲಿ ಆರೋಪಿಸಿ ಆಡಿದ ಮಾತುಗಳಿಗೆ ವ್ಯಾಪಕ ಖಂಡನೆ, ಪ್ರತಿಭಟನೆ ವ್ಯಕ್ತವಾಗಿತ್ತು. 

ಢಾಕಾದ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟಾನ್‌ ಮ್ಯಾಜಿಸ್ಟ್ರೇಟ್‌ ಕೈಸರುಲ್‌ ಇಸ್ಲಾಂ ಅವರು ಆರೋಪಿ ಸಂಪಾದಕ ಮೊಯಿನುಲ್‌ ಹುಸೇನ್‌ ಅವರ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next