Advertisement
ಘಟನೆ ಹಿನ್ನೆಲೆ: ಉತ್ತರ ಪ್ರದೇಶದ ಮೊರಾದಾಬಾದ್ ಮೂಲದ ಅಜಯ್ ಎಂಬಾತ ತನ್ನ ಫೇಸ್ ಬುಕ್ ನಲ್ಲಿ ಜೂಲಿ ಎಂಬ ವಿವಾಹಿತ ಮಹಿಳೆಯೊಂದಿಗೆ ಚಾಟಿಂಗ್ ಮಾಡಲು ಆರಂಭಿಸಿದ್ದಾನೆ. ಇಬ್ಬರು ಚಾಟ್ ಮಾಡುತ್ತಲೇ ಆತ್ಮೀಯರಾಗಿ ಪ್ರೀತಿಸಲು ತೊಡಗಿದ್ದಾರೆ. ಏನೇ ಆದರೂ ತಾನು ಅಜಯ್ ಅವರನ್ನೇ ಮದುವೆಯಾಗಬೇಕೆಂದು ಜೂಲಿ ಉತ್ತರ ಪ್ರದೇಶದ ಮೊರಾದಾಬಾದ್ ಗೆ ತನ್ನ 11 ವರ್ಷದ ಮಗಳೊಂದಿಗೆ ಬಂದು ಹಿಂದೂ ಧರ್ಮಕ್ಕೆ ಮತಾಂತರವಾಗಿ ವಿವಾಹವಾಗಿದ್ದಾರೆ.
Related Articles
Advertisement
“ಜೂಲಿಯ ಪಾಸ್‌ಪೋರ್ಟ್ ಮತ್ತು ವೀಸಾ ಅವಧಿ ಮುಗಿಯಲಿದೆ, ಆದ್ದರಿಂದ ಅವಳು ತನ್ನೊಂದಿಗೆ ಬಾಂಗ್ಲಾದೇಶದ ಗಡಿಯವರೆಗೆ ಬರುವಂತೆ ಅಜಯ್ ನನ್ನು ಕರೆದುಕೊಂಡು ಹೋಗಿದ್ದಾಳೆ. ಪಾಸ್‌ಪೋರ್ಟ್ ಮತ್ತು ವೀಸಾವನ್ನು ನವೀಕರಿಸಿ ಹಿಂತಿರುಗುವುದಾಗಿ ಅವಳು ಹೇಳಿದ್ದಳು. ನನ್ನ ಮಗ ಅವಳನ್ನು ಬಾಂಗ್ಲಾದೇಶದ ಗಡಿಗೆ ಕರೆದೊಯ್ದು 10-15 ದಿನಗಳಲ್ಲಿ ಹಿಂತಿರುಗುವುದಾಗಿ ಹೇಳಿದ್ದ. ಹೀಗೆ ಹೇಳಿ ಸುಮಾರು ಎರಡು ತಿಂಗಳುಗಳು ಕಳೆದಿವೆ ಎಂದು ಅಜಯ್ ತಾಯಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರದ ಮೂಲಕ ಮಗನನ್ನು ಕರೆತರುವಂತೆ ಮನವಿ ಮಾಡಿದ್ದಾರೆ.
ಜೂಲಿ ಮತ್ತು ಅವಳ ಸಹಚರರು ನನ್ನ ಮಗನಿಗೆ ಏನಾದರೂ ಕೆಟ್ಟದ್ದನ್ನು ಮಾಡಿರಬಹುದು ಎನ್ನುವ ಅನುಮಾನ ನನಗಿದೆ. ನನ್ನ ಮಗನನ್ನು ಭಾರತಕ್ಕೆ ಕರೆತರಲು ಮತ್ತು ಅವರಿಗೆ ನೆರವು ನೀಡಲು ನಾನು ಮನವಿ ಮಾಡುತ್ತೇನೆ, ”ಎಂದು ಪತ್ರದಲ್ಲಿ ಬರೆಯಲಾಗಿದೆ.