Advertisement

ಅಫ್ಘಾನ್‌ ಬೌಲಿಂಗ್‌ ದಾಳಿ; ಅಪಾಯದಲ್ಲಿ ಬಾಂಗ್ಲಾ

01:17 AM Sep 09, 2019 | Team Udayavani |

ಚಿತ್ತಗಾಂಗ್‌: ಅಫ್ಘಾನಿಸ್ಥಾನ ಐತಿಹಾಸಿಕ ಗೆಲುವಿನ ಬಾಗಿಲಲ್ಲಿ ನಿಂತಿದೆ. ಚಿತ್ತಗಾಂಗ್‌ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶವನ್ನು ಹಣಿಯಲು ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಸೋಮವಾರ ಮಳೆ ಸಹಕರಿಸಿದರೆ ರಶೀದ್‌ ಖಾನ್‌ ಪಡೆ ಇದರಲ್ಲಿ ಯಶಸ್ಸು ಕಾಣುವುದರಲ್ಲಿ ಅನುಮಾನವಿಲ್ಲ.

Advertisement

ಗೆಲುವಿಗೆ 398 ರನ್ನುಗಳ ದೊಡ್ಡ ಗುರಿ ಪಡೆದಿರುವ ಬಾಂಗ್ಲಾದೇಶ, ಮಳೆಯಿಂದ 4ನೇ ದಿನದಾಟ ಬೇಗನೇ ಕೊನೆಗೊಂಡಾಗ 6 ವಿಕೆಟಿಗೆ 136 ರನ್‌ ಗಳಿಸಿ ತೀವ್ರ ಸಂಕಟದಲ್ಲಿತ್ತು. ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು, ಉಳಿದ 4 ವಿಕೆಟ್‌ಗಳಿಂದ 262 ರನ್‌ ಗಳಿಸಬೇಕಿದೆ ಅಥವಾ ಕೆಲವು ವಿಕೆಟ್‌ ಉಳಿಸಿಕೊಂಡು ಪಂದ್ಯವನ್ನು ಡ್ರಾಗೊಳಿಸಬೇಕಿದೆ. ಈಗಿನ ಸ್ಥಿತಿಯಲ್ಲಿ ಬಾಂಗ್ಲಾ ಪಾಲಿಗೆ ಇದೆರಡೂ ಕಠಿನ ಸವಾಲೇ ಆಗಿದೆ. ನಾಯಕ ಶಕಿಬ್‌ ಅಲ್‌ ಹಸನ್‌ (39) ಮತ್ತು ಸೌಮ್ಯ ಸರ್ಕಾರ್‌ (0) ಬ್ಯಾಟಿಂಗ್‌ ಕಾಯ್ದುಕೊಂಡಿದ್ದು, ಇವರ ಹೋರಾಟ ಎಲ್ಲಿಯ ತನಕ ಜಾರಿಯಲ್ಲಿರುತ್ತದೆ ಎಂಬುದರ ಮೇಲೆ ಬಾಂಗ್ಲಾ ತಂಡದ ಭವಿಷ್ಯ ಅಡಗಿದೆ.

137 ರನ್ನುಗಳ ಉತ್ತಮ ಮುನ್ನಡೆ ಗಳಿಸಿದ ಅಫ್ಘಾನಿಸ್ಥಾನ, ದ್ವಿತೀಯ ಸರದಿಯಲ್ಲಿ 260 ರನ್‌ ಗಳಿಸಿತು. ಬಾಂಗ್ಲಾ 398 ರನ್‌ ಗುರಿ ಪಡೆಯಿತು. ಘಾತಕ ಬೌಲಿಂಗ್‌ ಪ್ರದರ್ಶಿಸಿದ ರಶೀದ್‌ ಖಾನ್‌ (46ಕ್ಕೆ 3) ಮತ್ತು ಜಹೀರ್‌ ಖಾನ್‌ (36ಕ್ಕೆ 2) ಆತಿಥೇಯರಿಗೆ ಸಿಂಹಸ್ವಪ್ನರಾಗಿ ಕಾಡಿದ್ದಾರೆ.ಆರಂಭಕಾರ ಶದ್ಮಾನ್‌ ಇಸ್ಲಾಮ್‌ 41 ರನ್‌ ಹೊರತುಪಡಿಸಿ ಉಳಿದ ವಿಕೆಟ್‌ಗಳು ಅಗ್ಗಕ್ಕೆ ಉರುಳಿವೆ.

ಸಂಕ್ಷಿಪ್ತ ಸ್ಕೋರ್‌
ಅಫ್ಘಾನಿಸ್ಥಾನ-342 ಮತ್ತು 260. ಬಾಂಗ್ಲಾದೇಶ-205 ಮತ್ತು 6 ವಿಕೆಟಿಗೆ 136 (ಶದ್ಮಾನ್‌ 41, ರಹೀಂ 23, ಶಕಿಬ್‌ ಬ್ಯಾಟಿಂಗ್‌ 39, ರಶೀದ್‌ 46ಕ್ಕೆ 3, ಜಹೀರ್‌ 36ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next