Advertisement

ಹಸೀನಾ ಹತ್ಯೆಗೆ ಯತ್ನ ಕೇಸ್; 25 ವರ್ಷಗಳ ನಂತ್ರ ತೀರ್ಪು, 9 ಮಂದಿಗೆ ಮರಣದಂಡನೆ ಶಿಕ್ಷೆ

10:11 AM Jul 05, 2019 | Nagendra Trasi |

ಢಾಕಾ: 25 ವರ್ಷಗಳ ಹಿಂದೆ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರನ್ನು ಹತ್ಯೆಗೈಯಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ವಿರೋಧ ಪಕ್ಷದ 9 ಆರೋಪಿಗಳಿಗೆ ಬಾಂಗ್ಲಾದೇಶ ಕೋರ್ಟ್ ಮರಣದಂಡನೆ ಹಾಗೂ ಉಳಿದ 25 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಾಗಿ ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.

Advertisement

1994ರಲ್ಲಿ ಹಸೀನಾ ಅವರು ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ದಾಳಿ ನಡೆಸಲು ಶಾಮೀಲಾಗಿದ್ದ 13 ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ಅಮಿನುಲ್ ಇಸ್ಲಾಂ ಮಾಹಿತಿ ನೀಡಿದ್ದಾರೆ.

1994ರಲ್ಲಿ ಹಸೀನಾ ವಿರೋಧ ಪಕ್ಷದ ಪ್ರಬಲ ನಾಯಕಿಯಾಗಿದ್ದರು. ಕಟ್ಟಾ ವಿರೋಧಿ ಖಲೀದಾ ಝಿಯಾ ಅಂದು ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು. ಪ್ರಸ್ತುತ ಝಿಯಾ ಮತ್ತು ಆಕೆಯ ಬಾಂಗ್ಲಾದೇಶ್ ನ್ಯಾಶನಲಿಸ್ಟ್ ಪಾರ್ಟಿ(ಬಿಎನ್ ಪಿ) ಪ್ರಮುಖ ವಿರೋಧಪಕ್ಷದ ಸ್ಥಾನದಲ್ಲಿದೆ!

ಅಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹಸೀನಾ ಅವರನ್ನು ಕೊಲ್ಲಲು ಬಾಂಬ್ ಗಳನ್ನು ಎಸೆದು, ಕೋಚ್ ಗೆ ಬೆಂಕಿ ಹಚ್ಚಿದ್ದರು. ಈ ಘಟನೆ ಢಾಕಾದಿಂದ 160 ಕಿ.ಮೀಟರ್ ದೂರದಲ್ಲಿ ನಡೆದಿತ್ತು ಎಂದು ಕೋರ್ಟ್ ಹೊರಗೆ ಇಸ್ಲಾಂ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next