ಮೌಂಟ್ ಮೌಂಗನಿ: ಆತಿಥೇಯ ನ್ಯೂಜಿಲ್ಯಾಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಬುಧವಾರ 8 ವಿಕೆಟ್ ಗಳ ಐತಿಹಾಸಿಕ ಗೆಲುವನ್ನು ಸಾಧಿಸಿದೆ.
ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ದಾಖಲಿಸಿದ ಮೊದಲ ಟೆಸ್ಟ್ ಜಯ ಇದಾಗಿದೆ.ನ್ಯೂಜಿಲ್ಯಾಂಡ್ ವಿರುದ್ಧ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಬಾಂಗ್ಲಾ ದಾಖಲಿಸಿದ ಮೊದಲ ಗೆಲುವಾಗಿದೆ. ಭರ್ಜರಿ ಗೆಲುವಿನ ನಂತರ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಬಾಂಗ್ಲಾ ಐದನೇ ಸ್ಥಾನಕ್ಕೆ ಜಿಗಿದಿದೆ.
ಎಬಾಡೋಟ್ ಹೊಸೈನ್ ಆರು ವಿಕೆಟ್ ಪಡೆದು ಗಮನ ಸೆಳೆದರು. ಹೊಸೈನ್ ತನ್ನ ಮೊದಲ ಓವರ್‌ನಲ್ಲಿ ರಾಸ್ ಟೇಲರ್ ಅವರನ್ನು ಔಟ್ ಮಾಡಿ ಚೊಚ್ಚಲ ಐದು ವಿಕೆಟ್ ಗಳಿಸಿದರು. ಆತಿಥೇಯರು ತಮ್ಮ ರಾತ್ರಿಯ ಸ್ಕೋರ್ 147/5 ಗೆ ಕೇವಲ 22 ರನ್ ಸೇರಿಸುವಲ್ಲಿ ಯಶಸ್ವಿಯಾದರು, ಬಾಂಗ್ಲಾದೇಶಕ್ಕೆ ಗೆಲ್ಲಲು ಕೇವಲ 40 ರನ್‌ಗಳ ಅಲ್ಪ ಗುರಿ ನೀಡಿದರು. ಬೆನ್ನಟ್ಟಿದ ಬಾಂಗ್ಲಾದೇಶವು ಶದ್ಮನ್ ಇಸ್ಲಾಮ್ ಅನ್ನು ಬೇಗನೆ ಕಳೆದುಕೊಂಡಿತಾದರೂ ನಾಯಕ ಮೊಮಿನುಲ್ ಹಕ್ ಮತ್ತು ನಜ್ಮುಲ್ ಹೊಸೈನ್ ಅವರ ಸಮಗ್ರ ಜೊತೆಯಾಟವು ಬಾಂಗ್ಲಾದೇಶವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದಿತು. ಶಾಂಟೊ 17 ರನ್ ಗಳಿಸಿ ಔಟಾದರು.
ಬಾಂಗ್ಲಾದೇಶ ನ್ಯೂಜಿಲೆಂಡ್‌ನಲ್ಲಿ ತನ್ನ ಹಿಂದಿನ 43 ಪಂದ್ಯಗಳಲ್ಲಿ(ಎಲ್ಲಾ ಸ್ವರೂಪ) ಗೆದ್ದಿರಲಿಲ್ಲ. ಬಾಂಗ್ಲಾದೇಶದ ದಿಗ್ಗಜ ಆಟಗಾರರಾದ ತಮೀಮ್ ಇಕ್ಬಾಲ್, ಶಕೀಬ್ ಅಲ್ ಹಸನ್ ಮತ್ತು ಇತ್ತೀಚೆಗೆ ನಿವೃತ್ತರಾದ ಮಹಮ್ಮದುಲ್ಲಾ ಅವರಿಲ್ಲದೆ ಇದ್ದರೂ ತಂಡ ಸಾಮರ್ಥ್ಯ ತೋರಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್
328 & 169
ಬಾಂಗ್ಲಾದೇಶ
458 & 42/2