Advertisement

ಕ್ಲೀನರ್‌ ಮೇಲೆ ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್‌ ಹಲ್ಲೆ?

01:47 AM Jun 02, 2020 | Sriram |

ಢಾಕಾ: ಬಾಂಗ್ಲಾ ಬ್ಯಾಟ್ಸ್‌ಮನ್‌ ಶಬ್ಬೀರ್‌ ರೆಹಮಾನ್‌ ಕಸ ಸಾಗಿಸುತ್ತಿದ್ದ ವಾಹನ ವೊಂದರ ಕ್ಲೀನರ್‌ ಮೇಲೆ ಹಲ್ಲೆ ಮಾಡಿದ್ದಾಗಿ ವರದಿಯಾಗಿದೆ.

Advertisement

ತಮ್ಮ ಮನೆಯ ಎದುರು ನಿಂತಿದ್ದ ಕಸದ ವಾಹನ ವೊಂದರ ಕ್ಲೀನರ್‌ ಮೇಲೆ ಶಬ್ಬೀರ್‌ ಹಲ್ಲೆ ನಡೆಸಿದರೆಂದೂ, ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು ಎಂಬುದಾಗಿ ವರದಿಯಾಗಿದೆ. ಆದರೆ ತಾನು ಯಾರ ಮೇಲೂ ಹಲ್ಲೆ ನಡೆಸಿಲ್ಲ ಎಂಬುದಾಗಿ ಶಬ್ಬೀರ್‌ ಸ್ಪಷ್ಟಪಡಿಸಿದ್ದಾರೆ.

ಪತ್ನಿಯೊಂದಿಗೆ ಬರುವಾಗ ನಡು ರಸ್ತೆಯಲ್ಲಿ ಕಸದ ವಾಹನವನ್ನು ನಿಲ್ಲಿಸಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ, ಸ್ವಲ್ಪ ಬದಿಗೆ ನಿಲ್ಲಿಸಿ ಎಂದು ವಿನಂತಿಸಿಕೊಂಡೆ. ಒಮ್ಮೆ ಆ ವಾಹನದ ಹಾರ್ನ್ ಮಾಡಿದೆ. ಒಬ್ಬ ಗುರಾಯಿಸುತ್ತ ಬಂದ. ನಡೆದದ್ದು ಇಷ್ಟೇ… ಎಂಬುದಾಗಿ ಶಬ್ಬೀರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next