Advertisement
ಮಂಗಳವಾರದ ಈ ಮಳೆಪೀಡಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 7 ವಿಕೆಟಿಗೆ 359 ರನ್ ಪೇರಿಸಿದರೆ, ಬಾಂಗ್ಲಾದೇಶ 49.3 ಓವರ್‌ಗಳಲ್ಲಿ 264ಕ್ಕೆ ಆಲೌಟ್ ಆಯಿತು. ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ತಲಾ 3 ವಿಕೆಟ್ ಹಾರಿಸಿ ಬಾಂಗ್ಲಾ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. 2 ವಿಕೆಟ್ ಜಸ್‌ಪ್ರೀತ್ ಬುಮ್ರಾ ಪಾಲಾದರೆ, ಒಂದನ್ನು ರವೀಂದ್ರ ಜಡೇಜ ಉರುಳಿಸಿದರು.
ಬಾಂಗ್ಲಾ ಸರದಿಯಲ್ಲಿ ಆರಂಭಕಾರ ಲಿಟನ್ ದಾಸ್ ಮತ್ತು ಮುಶ್ಫಿಕರ್ ರಹೀಮ್ ಉತ್ತಮ ಬ್ಯಾಟಿಂಗ್ ಹೋರಾಟ ಸಂಘಟಿಸಿದರು. ದಾಸ್ 73 ರನ್ ಹೊಡೆದರೆ (90 ಎಸೆತ, 10 ಬೌಂಡರಿ), ರಹೀಮ್ 90 ರನ್ ಬಾರಿಸಿದರು (94 ಎಸೆತ, 8 ಬೌಂಡರಿ, 2 ಸಿಕ್ಸರ್). ಕೆಳ ಕ್ರಮಾಂಕದ ಆಟಗಾರರಾದ ಸೈಫುದ್ದೀನ್ (18) ಮತ್ತು ಮಿರಾಜ್ (27) ಇನ್ನಿಂಗ್ಸ್ ಬೆಳೆಸಿದ್ದರಿಂದ ಬಾಂಗ್ಲಾದ ಮೊತ್ತ 250ರ ಗಡಿ ದಾಟಿತು. ತಂಡದ 8 ವಿಕೆಟ್ 216 ರನ್ನಿಗೆ ಉರುಳಿತ್ತು.
Related Articles
Advertisement
ಸಂಕ್ಷಿಪ್ತ ಸ್ಕೋರ್: ಭಾರತ-7 ವಿಕೆಟಿಗೆ 359. ಬಾಂಗ್ಲಾದೇಶ-49.3 ಓವರ್‌ಗಳಲ್ಲಿ 264 (ರಹೀಮ್ 90, ದಾಸ್ 73, ಮಿರಾಜ್ 27, ಕುಲದೀಪ್ 47ಕ್ಕೆ 3, ಚಾಹಲ್ 65ಕ್ಕೆ 3, ಬುಮ್ರಾ 25ಕ್ಕೆ 2).