Advertisement

Bangladesh; 2025ರ ಅಂತ್ಯ ಇಲ್ಲವೇ 2026ಕ್ಕೆ ಚುನಾವಣೆ: ಯೂನುಸ್‌

01:05 AM Dec 17, 2024 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ 2025ರ ಅಂತ್ಯದೊಳಗೆ ಅಥವಾ 2026ರ ಮೊದಲಾರ್ಧದಲ್ಲಾಗಬಹುದು ಎಂದು ಮಧ್ಯಾಂ­­­­­­­ತರ ಸರಕಾರದ ಮುಖ್ಯಸ್ಥ ಮೊಹ­ಮ್ಮದ್‌ ಯೂನುಸ್‌ ಹೇಳಿ­ದ್ದಾರೆ. ಬಾಂಗ್ಲಾ ವಿಮೋಚನೆ ಪಡೆದ ದಿನ -ವಿಜಯ್‌ ದಿವಸ್‌ ಪ್ರಯುಕ್ತ, ದೂರದ­ರ್ಶ­ನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಯೂನುಸ್‌ ಮಾತನಾಡಿದ್ದಾರೆ. “ಇದಕ್ಕಾಗಿ ರಾಜಕೀಯ ಪಕ್ಷಗಳ ನಡುವಣ ಒಮ್ಮತ ಅಗತ್ಯವಿದೆ. ದೋಷರಹಿತ ಮತದಾರ ಪಟ್ಟಿ ಸಿದ್ಧಪಡಿಸಬೇಕಾಗಿದೆ. ಜಗತ್ತಿನ ಅತೀ ಕೆಟ್ಟ ನಿರಂಕುಶ ಸರಕಾರ ಪತನಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿಯ ವಿಜಯ್‌ ದಿವಸ್‌ ವಿಶಿಷ್ಟವಾದದ್ದು ಎಂದೂ ಅವರು ಬಣ್ಣಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next