ಢಾಕಾ: ತಮೀಮ್ ಇಕ್ಬಾಲ್ ಅವರಿಂದ ತೆರವಾದ ತಂಡದ ನಾಯಕನ ಸ್ಥಾನಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ. ಟೆಸ್ಟ್ ಮತ್ತು ಟಿ20 ತಂಡದ ನಾಯಕ, ಹಿರಿಯ ಆಟಗಾರ ಶಕೀಬ್ ಅಲ್ ಹಸನ್ ಅವರನ್ನು ಮತ್ತೆ ಏಕದಿನ ಕ್ಯಾಪ್ಟನ್ ಮಾಡಲಾಗಿದೆ.
ಶಕೀಬ್ ಅಲ್ ಹಸನ್ ಅವರು ಬಾಂಗ್ಲಾದೇಶ ತಂಡವನ್ನು ಮುಂಬರುವ ಏಷ್ಯಾಕಪ್ ಮತ್ತು ವಿಶ್ವಕಪ್ ನಲ್ಲಿ ಮುನ್ನಡೆಸಲಿದ್ದಾರೆ.
ಎರಡು ಮಹಾ ಕೂಟಗಳ ಹೊರತಾಗಿ, ಬಾಂಗ್ಲಾದೇಶವು ಅಕ್ಟೋಬರ್ 5 ರಂದು ಪ್ರಾರಂಭವಾಗುವ ಕ್ರಿಕೆಟ್ ವಿಶ್ವಕಪ್ 2023 ಗಾಗಿ ಭಾರತಕ್ಕೆ ಪ್ರಯಾಣಿಸುವ ಮೊದಲು ಸೆಪ್ಟೆಂಬರ್ ಅಂತ್ಯದಲ್ಲಿ ವೈಟ್ ಬಾಲ್ ಸರಣಿಯಲ್ಲಿ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ.
“ನಾವು ಏಷ್ಯಾಕಪ್ ಮತ್ತು ವಿಶ್ವಕಪ್‌ಗೆ ಶಕೀಬ್ ಅವರನ್ನು ನಾಯಕರನ್ನಾಗಿ ನೇಮಿಸಿದ್ದೇವೆ. ವಿಶ್ವಕಪ್ ಮತ್ತು ಏಷ್ಯಾಕಪ್ ತಂಡಗಳನ್ನು ನಾಳೆ ಪ್ರಕಟಿಸಲಾಗುವುದು. ಆಯ್ಕೆಗಾರರು 17 ಸದಸ್ಯರ ತಂಡವನ್ನು ಆಯ್ಕೆ ಮಾಡುತ್ತಾರೆ” ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್ ಹೇಳಿದ್ದಾರೆ.
ಈ ಹಿಂದೆ ನಾಯಕರಾಗಿದ್ದ ತಮೀಮ್ ಇಕ್ಬಾಲ್ ಅವರು ಬೆನ್ನುನೋವಿನ ಕಾರಣದಿಂದ ಏಷ್ಯಾಕಪ್ ನಿಂದ ಹೊರಬಿದ್ದಿದ್ದಾರೆ. ಅಲ್ಲದೆ ಅವರು ನಾಯಕತ್ವವನ್ನೂ ತೊರೆದಿದ್ದಾರೆ. ಇದೀಗ ಶಕೀಬ್ ಎಲ್ಲಾ ಮೂರು ಮಾದರಿಯ ಪಂದ್ಯಗಳಲ್ಲಿ ಬಾಂಗ್ಲಾದೇಶದ ನಾಯಕರಾಗಿದ್ದಾರೆ. ಅವರು ಕಳೆದ ವರ್ಷದ ಆರಂಭದಿಂದಲೂ ತಂಡದ ಟೆಸ್ಟ್ ಮತ್ತು ಟಿ20 ನಾಯಕರಾಗಿದ್ದಾರೆ.