Advertisement

ಸೋತ ಆಫ್ರಿಕಾ; ಬಾಂಗ್ಲಾ ಬೊಂಬಾಟ್‌ ವಿಜಯ

10:08 AM Jun 03, 2019 | sudhir |

ಲಂಡನ್‌: ಬೊಂಬಾಟ್‌ ಪ್ರದರ್ಶನ ನೀಡಿದ ಬಾಂಗ್ಲಾದೇಶ ತೀವ್ರ ಒತ್ತಡದಲ್ಲಿದ್ದ ದಕ್ಷಿಣ ಆಫ್ರಿಕಾ ಮೇಲೆ ಸವಾರಿ ಮಾಡಿ ಅಮೋಘ ಜಯವೊಂದನ್ನು ಒಲಿಸಿಕೊಂಡಿದೆ. ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ
ವಳಿಯ ರವಿವಾರದ ಓವಲ್‌ ಮೇಲಾಟ ದಲ್ಲಿ ಮೊರ್ತಜ ಬಳಗ 21 ರನ್ನುಗಳಿಂದ ಆಫ್ರಿಕಾವನ್ನು ಉರುಳಿಸಿ ಉಳಿದ ತಂಡಗಳಿಗೆ ಬಲವಾದ ಎಚ್ಚರಿಕೆಯೊಂದನ್ನು ರವಾನಿ ಸಿದೆ. ಇತ್ತ ಎರಡೂ ಪಂದ್ಯಗಳನ್ನು ಸೋತ ಹರಿಣಗಳ ಪಡೆ ತೀವ್ರ ಸಂಕಟಕ್ಕೆ ಸಿಲುಕಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾ ದೇಶ 6 ವಿಕೆಟಿಗೆ 330 ರನ್‌ ಸೂರೆಗೈದು ತನ್ನ ಏಕದಿನ ಚರಿತ್ರೆಯ ಸರ್ವಾಧಿಕ ಮೊತ್ತ ದಾಖಲಿಸಿತು. ಜವಾಬಿತ್ತ ದಕ್ಷಿಣ ಆಫ್ರಿಕಾ 8 ವಿಕೆಟಿಗೆ 309 ರನ್‌ ಗಳಿಸಿ ಮುಖಭಂಗ ಅನುಭವಿಸಿತು.

ಬೃಹತ್‌ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ದಕ್ಷಿಣ ಆಫ್ರಿಕಾ ಅಬ್ಬರದ ಆರಂಭ ಕಾಣುವಲ್ಲಿ ವಿಫ‌ಲವಾಯಿತು. ಆರಂಭಿಕರು 10ನೇ ಓವರ್‌ ತನಕ ಕ್ರೀಸ್‌ ಕಾಯ್ದುಕೊಂಡರೂ ಒಟ್ಟುಗೂಡಿದ್ದು 49 ರನ್‌ ಮಾತ್ರ. ಆಗ 23 ರನ್‌ ಮಾಡಿದ ಡಿ ಕಾಕ್‌ ರನೌಟ್‌ ಆದರು.

ದ್ವಿತೀಯ ವಿಕೆಟಿಗೆ ಜತೆಗೂಡಿದ ಮಾರ್ಕ್‌ ರಮ್‌-ಡು ಪ್ಲೆಸಿಸ್‌ ಸರಿಯಾಗಿ 10 ಓವರ್‌ ನಿಭಾಯಿಸಿದರು. ಒಟ್ಟುಗೂಡಿದ್ದು 53 ರನ್‌. ಎಚ್ಚರಿಕೆಯಿಂದ ಆಡುತ್ತಿದ್ದ ಮಾರ್ಕ್‌ರಮ್‌ 20ನೇ ಓವರಿನಲ್ಲಿ ಶಕಿಬ್‌ ತಂತ್ರವನ್ನರಿಯದೆ ಬೌಲ್ಡ್‌ ಆದರು. ಮಾರ್ಕ್‌ರಮ್‌ ಗಳಿಕೆ 56 ಎಸೆತಗಳಿಂದ 45 ರನ್‌ (4 ಬೌಂಡರಿ). ಇದರೊಂದಿಗೆ ಶಕಿಬ್‌ ಏಕದಿನದಲ್ಲಿ 5 ಸಾವಿರ ರನ್‌ ಹಾಗೂ 250 ವಿಕೆಟ್‌ ಪೂರ್ತಿಗೊಳಿಸಿದ ವಿಶ್ವದ 5ನೇ, ಬಾಂಗ್ಲಾದ ಮೊದಲ ಆಲ್‌ರೌಂಡರ್‌ ಎನಿಸಿದರು.

ಕಪ್ತಾನನ ಆಟವಾಡಿದ ಡು ಪ್ಲೆಸಿಸ್‌ ಅವರಿಂದ 62 ರನ್‌ ಕೊಡುಗೆ ಸಂದಾಯ ವಾಯಿತು (53 ಎಸೆತ, 5 ಬೌಂಡರಿ, 1 ಸಿಕ್ಸರ್‌). 4ನೇ ವಿಕೆಟಿಗೆ ಜತೆಗೂಡಿದ ಮಿಲ್ಲರ್‌-ಡುಸೆನ್‌ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಅಷ್ಟರಲ್ಲಿ ಮುಸ್ತಫಿಜುರ್‌ ದೊಡ್ಡ ಬೇಟೆಯಾಡಿ ಮಿಲ್ಲರ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಮಿಲ್ಲರ್‌ ಗಳಿಕೆ 43 ಎಸೆತಗಳಿಂದ 38 ರನ್‌ (2 ಬೌಂಡರಿ). ಡುಸೆನ್‌ 41 ರನ್‌, ಡ್ಯುಮಿನಿ 45 ರನ್‌ ಮಾಡಿದರು.

Advertisement

ಬ್ಯಾಟಿಂಗ್‌ಗೆ ಸಹಕಾರಿಯಾಗಿದ್ದ ಪಿಚ್‌ನ ಸಂಪೂರ್ಣ ಲಾಭವೆತ್ತಿದ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳು “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ರನ್‌ ಮಳೆಯನ್ನೇ ಹರಿಸಿದರು. ಆಫ್ರಿಕಾದ ದಿಗ್ಗಜ ಬೌಲರ್‌ಗಳೆನಿಸಿಕೊಂಡ ಎನ್‌ಗಿಡಿ, ರಬಾಡ ಸೇರಿದಂತೆ ಎಲ್ಲರೂ ಚೆನ್ನಾಗಿಯೇ ದಂಡಿಸಿಕೊಂಡರು. ಟಾಸ್‌ ಗೆದ್ದ ಡು ಪ್ಲೆಸಿಸ್‌ ಮೊದಲು ಬೌಲಿಂಗ್‌ ಆಯ್ದುಕೊಳ್ಳುವ ನಿರ್ಧಾರ ತಲೆ ಕೆಳಗಾಯಿತು.

ಏಕದಿನದ ಸರ್ವಾಧಿಕ ಸ್ಕೋರ್‌
ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿದ ಬಾಂಗ್ಲಾದೇಶ ತನ್ನ ಏಕದಿನ ಇತಿಹಾಸದಲ್ಲೇ ಸರ್ವಾಧಿಕ ಸ್ಕೋರ್‌ ದಾಖಲಿಸಿ ಮೆರೆದಾಡಿತು. 2015ರಲ್ಲಿ ಪಾಕಿಸ್ಥಾನ ವಿರುದ್ಧದ ಢಾಕಾ ಪಂದ್ಯದಲ್ಲಿ 9ಕ್ಕೆ 329 ರನ್‌ ಪೇರಿಸಿದ್ದು ಬಾಂಗ್ಲಾದ ಈವರೆಗಿನ ಅತ್ಯಧಿಕ ಮೊತ್ತವಾಗಿತ್ತು.

ಸಹಜವಾಗಿ ವಿಶ್ವಕಪ್‌ನಲ್ಲೂ ಇದು ಬಾಂಗ್ಲಾದೇಶದ ಅತೀ ಹೆಚ್ಚಿನ ಗಳಿಕೆ ಯಾಗಿದೆ. ಕಳೆದ ವಿಶ್ವಕಪ್‌ ಕೂಟದ ನೆಲ್ಸನ್‌ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ 4ಕ್ಕೆ 322 ರನ್‌ ಗಳಿಸಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.

ಶಕಿಬ್‌, ರಹೀಮ್‌ ಭರ್ಜರಿ ಆಟ
ಬಾಂಗ್ಲಾದೇಶದ ಈ ದಾಖಲೆ ಮೊತ್ತದಲ್ಲಿ ಎಲ್ಲರೂ ಪಾಲು ದಾರರು. ಇವರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವವರು ಅನುಭವಿಗಳಾದ ಶಕಿಬ್‌ ಅಲ್‌ ಹಸನ್‌, ಮುಶ್ಫಿಕರ್‌ ರಹೀಮ್‌. ಇಬ್ಬರೂ 70 ಪ್ಲಸ್‌ ರನ್‌ ಪೇರಿಸಿದರು. 3ನೇ ವಿಕೆಟಿಗೆ 142 ರನ್‌ ಒಟ್ಟುಗೂಡಿಸಿದರು.

ಇಬ್ಬರದೂ ಒಂದೇ ರೀತಿಯ ಬ್ಯಾಟಿಂಗ್‌ ಆಗಿತ್ತು. ವನ್‌ಡೌನ್‌ನಲ್ಲಿ ಬಂದ ಶಕಿಬ್‌ 84 ಎಸೆತ ನಿಭಾಯಿಸಿ 75 ರನ್‌ ಹೊಡೆದರು (8 ಬೌಂಡರಿ, 1 ಸಿಕ್ಸರ್‌). ರಹೀಮ್‌ 80 ಎಸೆತಗಳಿಂದ 78 ರನ್‌ ಬಾರಿಸಿದರು. ಇದರಲ್ಲಿ 8 ಬೌಂಡರಿ ಸೇರಿತ್ತು. 40ರ ಗಡಿ ದಾಟಿದ ಆರಂಭಕಾರ ಸೌಮ್ಯ ಸರ್ಕಾರ್‌, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ ಮಹಮದುಲ್ಲ ಅವರ ಬ್ಯಾಟಿಂಗ್‌ ಹೆಚ್ಚು ಬಿರುಸಿನಿಂದ ಕೂಡಿತ್ತು. ಸರ್ಕಾರ್‌ 30 ಎಸೆತ ಎದುರಿಸಿ 42 ರನ್‌ ಮಾಡಿದರು.

ಸ್ಕೋರ್‌ ಪಟ್ಟಿ
ಬಾಂಗ್ಲಾದೇಶ
ತಮಿಮ್‌ ಇಕ್ಬಾಲ್‌ ಸಿ ಡಿ ಕಾಕ್‌ ಬಿ ಫೆಲುಕ್ವಾಯೊ 16
ಸೌಮ್ಯ ಸರ್ಕಾರ್‌ ಸಿ ಡಿ ಕಾಕ್‌ ಬಿ ಮಾರಿಸ್‌ 42
ಶಕಿಬ್‌ ಅಲ್‌ ಹಸನ್‌ ಸಿ ತಾಹಿರ್‌ 75
ಮುಶ್ಫಿಕರ್‌ ರಹೀಮ್‌ ಸಿ ಡ್ಯುಸೆನ್‌ ಬಿ ಫೆಲುಕ್ವಾಯೊ 78
ಮೊಹಮ್ಮದ್‌ ಮಿಥುನ್‌ ಬಿ ತಾಹಿರ್‌ 21
ಮಹಮದುಲ್ಲ ಔಟಾಗದೆ 46
ಮೊಸದ್ದೆಕ್‌ ಹೊಸೈನ್‌ ಸಿ ಫೆಲುಕ್ವಾಯೊ ಬಿ ಮಾರಿಸ್‌ 26
ಮೆಹಿದಿ ಹಸನ್‌ ಔಟಾಗದೆ 5
ಇತರ 21
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 330
ವಿಕೆಟ್‌ ಪತನ: 1-60, 2-75, 3-217, 4-242, 5-250, 6-316.
ಬೌಲಿಂಗ್‌:
ಲುಂಗಿ ಎನ್‌ಗಿಡಿ 4-0-34-0
ಕಾಗಿಸೊ ರಬಾಡ 10-0-57-0
ಆ್ಯಂಡಿಲ್‌ ಫೆಲುಕ್ವಾಯೊ 10-1-52-2
ಕ್ರಿಸ್‌ ಮಾರಿಸ್‌ 10-0-73-2
ಐಡನ್‌ ಮಾರ್ಕ್‌ರಮ್‌ 5-0-38-0
ಇಮ್ರಾನ್‌ ತಾಹಿರ್‌ 10-0-57-2
ಜೆ.ಪಿ. ಡುಮಿನಿ 1-0-10-0

ದಕ್ಷಿಣ ಆಫ್ರಿಕಾ
ಕ್ವಿಂಟನ್‌ ಡಿ ಕಾಕ್‌ ರನೌಟ್‌ 23
ಐಡನ್‌ ಮಾರ್ಕ್‌ರಮ್‌ ಬಿ ಶಕಿಬ್‌ 45
ಫಾ ಡು ಪ್ಲೆಸಿಸ್‌ ಬಿ ಮೆಹಿದಿ 62
ಡೇವಿಡ್‌ ಮಿಲ್ಲರ್‌ ಸಿ ಮೆಹಿದಿ ಬಿ ಮುಸ್ತಫಿಜುರ್‌ 38
ವಾನ್‌ ಡರ್‌ ಡುಸೆನ್‌ ಬಿ ಸೈಫ‌ುದ್ದೀನ್‌ 41
ಜೆ.ಪಿ. ಡ್ಯುಮಿನಿ ಬಿ ಮುಸ್ತಫಿಜುರ್‌ 45
ಆ್ಯಂಡಿಲ್‌ ಫೆಲುಕ್ವಾಯೊ ಸಿ ಶಕಿಬ್‌ ಬಿ ಸೈಫ‌ುದ್ದೀನ್‌ 8
ಕ್ರಿಸ್‌ ಮಾರಿಸ್‌ ಸಿ ಸರ್ಕಾರ್‌ ಬಿ ಮುಸ್ತಫಿಜುರ್‌ 10
ಕಾಗಿಸೊ ರಬಾಡ ಔಟಾಗದೆ 13
ಇಮ್ರಾನ್‌ ತಾಹಿರ್‌ ಔಟಾಗದೆ 10
ಇತರ 14
ಒಟ್ಟು (50 ಓವರ್‌ಗಳಲ್ಲಿ 8 ವಿಕೆಟಿಗೆ) 309
ವಿಕೆಟ್‌ ಪತನ: 1-49, 2-102, 3-147, 4-202, 5-228, 6-252, 7-275, 8-287.
ಬೌಲಿಂಗ್‌:
ಮುಸ್ತಫಿಜುರ್‌ ರಹಮಾನ್‌ 10-0-67-3
ಮೆಹಿದಿ ಹಸನ್‌ ಮಿರಾಜ್‌ 10-0-44-1
ಮೊಹಮ್ಮದ್‌ ಸೈಫ‌ುದ್ದೀನ್‌ 8-1-57-2
ಶಕಿಬ್‌ ಅಲ್‌ ಹಸನ್‌ 10-0-50-1
ಮಶ್ರಫೆ ಮೊರ್ತಜ 6-0-49-0
ಮೊಸದ್ದೆಕ್‌ ಹೊಸೈನ್‌ 6-0-38-0

Advertisement

Udayavani is now on Telegram. Click here to join our channel and stay updated with the latest news.

Next