Advertisement

Bangladesh ಕ್ಯಾತೆ: ದುರ್ಗಾ ಪೂಜೆಗೆ ಹಿಲ್ಸಾ ಮೀನಿಲ್ಲ!

12:44 AM Sep 14, 2024 | Team Udayavani |

ಕೋಲ್ಕತಾ: ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ದುರ್ಗಾ ಪೂಜೆ ವೇಳೆ ಅತೀ ಅಪರೂಪದ ಹಿಲ್ಸಾ ಮೀನಿನ ರಫ್ತಿಗೆ ಬಾಂಗ್ಲಾದೇಶದ ನೂತನ ಮಧ್ಯಾಂತರ ಸರಕಾರ ನಿಷೇಧ ಹೇರಿದ್ದು, ಇದರಿಂದ ಈ ಬಾರಿ ಪಶ್ಚಿಮ ಬಂಗಾಲದಲ್ಲಿ ದುರ್ಗಾ ಪೂಜೆಯ ವೇಳೆ ಮೀನಿನ ಖ್ಯಾದ್ಯಕ್ಕೆ ಬರ ಬರಲಿದೆ.

Advertisement

ಅತೀ ಅಪರೂಪದ ಮತ್ತು ದುಬಾರಿ ಬೆಲೆಯ ಹಿಲ್ಸಾ ಮೀನು ಬಾಂಗ್ಲಾದೇಶದಲ್ಲಿ ಹರಿಯುವ ಪದ್ಮಾ ನದಿಯಲ್ಲಿ(ಗಂಗಾ) ಸಿಗುತ್ತದೆ. ಅತೀ ರುಚಿಕರ ಖಾದ್ಯಕ್ಕೆ ಹೆಸರುವಾಸಿಯಾದ ಈ ಮೀನಿಗೆ ದುರ್ಗಾ ಪೂಜೆ ವೇಳೆ ಕೋಲ್ಕತಾದಲ್ಲಿ ಹೆಚ್ಚು ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರು ಪ್ರತೀ ವರ್ಷ ಹಿಲ್ಸಾ ಮೀನು ಭಾರತಕ್ಕೆ ರಫ್ತು ಮಾಡಲು ಕಳೆದ 5 ವರ್ಷದಿಂದ ಅವಕಾಶ ನೀಡಿದ್ದರು. ಅದರಂತೆ ಪ್ರತೀ ವರ್ಷವೂ ದುರ್ಗಾ ಪೂಜೆ ವೇಳೆ ಸಾವಿರ ಟನ್‌ಗೂ ಅಧಿಕ ಹಿಲ್ಸಾ ಮೀನು ಭಾರತಕ್ಕೆ ರಫ್ತಾಗುತ್ತಿತ್ತು. ಆದರೆ ಈ ಬಾರಿ ಅಲ್ಲಿನ ಮಧ್ಯಾಂತರ ಸರಕಾರ, ಮೀನಿನ ಕೊರತೆ ನೆಪವೊಡ್ಡಿ ಭಾರತಕ್ಕೆ ರಫ್ತು ನಿರ್ಬಂಧ ಹೇರಿದೆ. ಈ ಮೂಲಕ ಭಾರತದ ಜತೆ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next