Advertisement

ರೈಲ್ವೆ ಅಂಡರ್‌ಪಾಸ್‌ ಜಲಾವೃತ, ಸಂಚಾರ ಅಸ್ತವ್ಯಸ್ತ

01:55 PM Jun 05, 2019 | Team Udayavani |

ಬಂಗಾರಪೇಟೆ: ಬಂಗಾರಪೇಟೆ-ಕೋಲಾರ ರೈಲ್ವೆ ಮುಖ್ಯ ರಸ್ತೆಯ ತಿಮ್ಮಾಪುರ ಗೇಟ್ ಬಳಿಯ ಅಂಡರ್‌ಪಾಸ್‌ ಜಲಾವೃತವಾಗಿದ್ದು, ರೈತರು ಹಾಗೂ ಜನಸಾಮಾನ್ಯರು ಓಡಾಡಲು ತೀವ್ರ ಕಷ್ಟಕರವಾಗಿದೆ.

Advertisement

ಬಂಗಾರಪೇಟೆ-ಕೋಲಾರ ರೈಲ್ವೆ ಮಾರ್ಗದಲ್ಲಿ ಬರುವ ಬಹುತೇಕ ಅಂಡರ್‌ಪಾಸ್‌ಗಳಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಗಂಗಮ್ಮನಪಾಳ್ಯ, ಕುಂಬಾರಪಾಳ್ಯ, ತಿಮ್ಮಾಪುರ, ಬಾವರಹಳ್ಳಿ, ಹುದುಕುಳ ಗ್ರಾಮಗಳ ಬಳಿ ಇರುವ ಅಂಡರ್‌ಪಾಸ್‌ಗಳು ಕಳಪೆ ಕಾಮಗಾರಿಯಿಂದ ಕೂಡಿದ್ದು, ಮಳೆ ಬಂದರೇ ಜಲಾವೃತಗೊಂಡು ಜನ ಓಡಾಡಲು ಕಷ್ಟಪಡುವಂತಾಗಿದೆ.

ರೈತ ಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್‌ ಮಾತನಾಡಿ, ರೈಲ್ವೆ ಇಲಾಖೆಯು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಅಂಡರ್‌ಪಾಸ್‌ನಲ್ಲಿ ಶನಿವಾರ ಬಿದ್ದ ಭಾರೀ ಮಳೆ ನೀರು ಹೊರಗೆ ಹೋಗದೆ ಮಡುಗಟ್ಟಿದೆ. ವಾಹನಗಳ ಜೊತೆಗೆ ಸಾರ್ವಜನಿಕರೂ ಓಡಾಡಲು ತೀವ್ರ ಕಷ್ಟವೇ ಆಗಿ ಎಂದು ದೂರಿದರು. ಬಂಗಾರಪೇಟೆಯಿಂದ ಕೋಲಾರದ ಮಾರ್ಗದ ರೈಲ್ವೆ ಹಳಿಯ ಮೇಲೆ ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ. ಹೀಗಾಗಿ ಪಟ್ಟಣದ ಗಂಗಮ್ಮನಪಾಳ್ಯ, ಕುಂಬಾರಪಾಳ್ಯಕ್ಕೆ, ಹುದುಕುಳ, ಚಿಕ್ಕಅಂಕಂಡಹಳ್ಳಿ ಹಾಗೂ ಬಾವರಹಳ್ಳಿ ಗ್ರಾಮಗಳಿಗೆ ಹಾದು ಹೋಗಲು ಅಂಡರ್‌ಪಾಸ್‌ ನಿರ್ಮಾಣ ಮಾಡಲಾಗಿದೆ. ಆದರೆ, ಅವು ಅವೈಜ್ಞಾನಿಕವಾಗಿವೆ ಎಂದು ಆರೋಪಿಸಿದರು.

ನಾಲ್ಕು ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ರೈಲ್ವೆ ಅಂಡರ್‌ಪಾಸ್‌ಗಳನ್ನು ಕಾಟಾಚಾರಕ್ಕೆ ಮಾಡಲಾಗಿದೆ. ರೈಲ್ವೆ ಹಳಿಗಳ ಕೆಳಗೆ ಭಾರೀ ವಾಹನಗಳು ಓಡಾಡಲು ಕಷ್ಟವಾಗುತ್ತಿದೆ. ಮಳೆ ನೀರು ಶೇಖರಣೆ ಆದ ನಂತರ ಅದನ್ನು ಬೇರೆಡೆಗೆ ಸಾಗಿಸಲು ಯಾವುದೇ ಕ್ರಮಕೈಗೊಂಡಿಲ್ಲ. ನೀರು ಬೇಗ ಹೀರಿಕೊಳ್ಳದ ಕಾರಣ ಸಾರ್ವಜನಿಕರು ಬದಲಿ ಮಾರ್ಗದಲ್ಲಿ ಓಡಾಡಬೇಕಿದೆ. ಗುತ್ತಿಗೆದಾರರ ಆಮಿಷಕ್ಕೆ ಒಳಾಗಾಗಿರುವ ರೈಲ್ವೆ ಇಲಾಖೆಯವರು, ಈ ಕೂಡಲೆ ರಸ್ತೆಗೆ ಅಡ್ಡಲಾಗಿರುವ ಪಟ್ಟಿಗಳನ್ನು ತೆರವುಗೊಳಿಸಿ ಸುಗಮವಾಗಿ ರಸ್ತೆ ಮಾರ್ಗ ಮಾಡಿಕೊಡಲು ಮನವಿ ಮಾಡಿದರು.

ರೈಲ್ವೆ ಇಲಾಖೆಯ ಸಹಾಯಕ ಎಂಜಿನಿಯರ್‌ ಎಸ್‌.ಎಸ್‌.ರಂಜನ್‌ ಸ್ಥಳಕ್ಕೆ ದಾವಿಸಿ ಪರಿಶೀಲನೆ ಮಾಡಿ ಮಾತನಾಡಿ, ಎರಡು ದಿನಗಳಲ್ಲಿ ರಸ್ತೆ ಮಾರ್ಗವನ್ನು ಸರಿಪಡಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next