Advertisement

Politics: ಬಂಗಾರಪ್ಪ ಚಿಂತನೆ ಜೀವಂತ: ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ

11:50 PM Dec 26, 2023 | Team Udayavani |

ಸೊರಬ: ಮಾಜಿ ಮುಖ್ಯಮಂತ್ರಿ ದಿ| ಬಂಗಾರಪ್ಪನವರ ಆದರ್ಶವಾದ ಚಿಂತನೆಗಳು ಎಂದಿಗೂ ಜೀವಂತವಾಗಿರುತ್ತವೆ. ಅವರ ಒಡನಾಟ, ಮಾರ್ಗದರ್ಶನ ನಮಗೆ ಆದರ್ಶಪ್ರಾಯ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಾವು ನಡೆಯುತ್ತಿದ್ದೇವೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಸೊರಬದ “ಬಂಗಾರಧಾಮ’ದಲ್ಲಿ ಮಂಗಳವಾರ ಮಾಜಿ ಮುಖ್ಯಮಂತ್ರಿ ದಿ| ಎಸ್‌.ಬಂಗಾರಪ್ಪ ಅವರ 12ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ವಿಚಾರ ವೇದಿಕೆ, ಬಂಗಾರಪ್ಪ ಅಭಿಮಾನಿ ಬಳಗ ಹಾಗೂ ಬಂಗಾರಪ್ಪ ಫೌಂಡೇಶನ್‌ ವತಿಯಿಂದ ಹಮ್ಮಿಕೊಂಡಿದ್ದ “ಬಂಗಾರಪ್ಪ ಸವಿನೆನಪು” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಂದೆ-ತಾಯಿಯವರ ಬಗ್ಗೆ ಅಪಾರ ಕಾಳಜಿ ಹೊಂದಿ ಸ್ಮಾರಕ ನಿರ್ಮಿಸಿರುವ ಸಚಿವ ಮಧು ಬಂಗಾರಪ್ಪನವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.

ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ಬಂಗಾರಪ್ಪನವರು ಸಮಾಜವಾದಿ ಹೋರಾಟಗಳಲ್ಲಿ ರೈತರಿಗೆ ನ್ಯಾಯ ದೊರಕಿಸಿಕೊಡಲು ದುಡಿದು ರಾಜಕೀಯವಾಗಿ ಎತ್ತರಕ್ಕೆ ಬೆಳೆದವರು. ಈ ಬಂಗಾರಧಾಮ ಅಧ್ಯಯನ ಪೀಠವಾಗಬೇಕು ಎಂದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಭಾವನೆಗಳಿಗೆ ಸ್ಪಂದಿಸುವ ಗುಣ ಅವರಲ್ಲಿತ್ತು. ಕೆಳವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಗುಣ ಹೊಂದಿದ್ದರು ಎಂದರು.
ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಗಾರಪ್ಪನವರ ಚಿಂತನೆ-ವಿಚಾರಗಳು ನಾಡಿನ ಜನತೆಗೆ ತಲುಪಬೇಕು. ಈ ಬಂಗಾರಧಾಮವು ಸ್ಫೂ ರ್ತಿಯ ನೆಲೆಯಾಗಬೇಕು. ಬಂಗಾರಪ್ಪನವರ ಹೆಸರನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಕಾರ್ಯ ಮಾಡುತ್ತೇನೆ. ಬಂಗಾರಪ್ಪನವರ ಚಿಂತನೆ ಅಧ್ಯಯನ ವಿಷಯವಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next