Advertisement
ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಿದೆ. ಅದರಂತೆ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದಿಂದ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ರಾಗಿಯನ್ನು ಮಾರಾಟ ಮಾಡಲು ಕಳೆದ 2 ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮುಂದೆ ಬಂದಿದ್ದಾರೆ. ರಾಗಿ ಕೇಂದ್ರಗಳಲ್ಲಿ ಮುಕ್ತ ಮಾರುಕಟ್ಟೆಗಿಂತಲೂ ಸುಮಾರು ಎರಡು ಪಟ್ಟು ಬೆಲೆ ನಿಗದಿಯಾಗಿರುವ ಕಾರಣ ಮಧ್ಯವರ್ತಿ ಗಳ ನೆರವಿಲ್ಲದೆ ರೈತರು ರಾಗಿ ಕೇಂದ್ರಕ್ಕೆ ಬಂದು ತಮ್ಮ ದಾಖಲೆಗಳನ್ನು ನೀಡಿ ನೋಂದಾಯಿಸಿ ಕೊಂಡು ರಾಗಿ ಪೂರೈಕೆ ಮಾಡುತ್ತಿದ್ದಾರೆ.
ಇರುವುದರಿಂದ ಅತಿ ಹೆಚ್ಚು ರಾಗಿ ಬೆಳೆದಿರುವ ರೈತರಿಗೆ ಸಂಕಷ್ಟ ಎದುರಾಗಿರುವುದರಿಂದ ಕಡಿಮೆ ಜಮೀನು ಹೊಂದಿರುವ ಬೇರೆ ರೈತರ ಹೆಸರಿನಲ್ಲಿ ರಾಗಿ ಮಾರಾಟ ಮಾಡಲಾಗುತ್ತಿದೆ.
Related Articles
Advertisement
ರೈತರಿಂದ ಖರೀದಿ ಮಾಡಿದ ರಾಗಿಗೆ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡುವ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳತ್ತ ರೈತರು ಮುಖ ಮಾಡುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ರೈತರಿಂದ ರಾಗಿ ಖರೀದಿಸಲು ಜಾರಿಗೆ ತಂದಿರುವ ನಿಯಮಗಳನ್ನು ಸಡಿಲಗೊಳಿಸದೇ ಇರುವುದರಿಂದ ಕೆಲವು ರೈತರಿಗೆ ಅನ್ಯಾಯವಾಗುತ್ತಿದೆ. ಇಡೀ ಕೋಲಾರ ಜಿಲ್ಲೆಯಲ್ಲಿಯೇ ಬಂಗಾರಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ರೈತರು ರಾಗಿ ಮಾರಾಟಕ್ಕಾಗಿ ನೊಂದಣಿ ಮಾಡಿಸಿ ಅತೀ ಹೆಚ್ಚು ರಾಗಿಯನ್ನು ಮಾರಾಟ ಮಾಡಿದ್ದಾರೆ.
ಇದುವರೆಗೂ 56,606ಕ್ವಿಂಟಲ್ ರಾಗಿ ಖರೀದಿತಾಲೂಕಿನಲ್ಲಿ 2019-2020ರಲ್ಲಿ ಸುಮಾರು 500 ರೈತರು ಕೇವಲ 7,242 ಕ್ವಿಂಟಾಲ್ ರಾಗಿಯನ್ನು ಮಾತ್ರ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದರು. 2020-21 ನೇ ಸಾಲಿನಲ್ಲಿ ಉತ್ತಮ ಮಳೆ ಬಂದಿದ್ದರಿಂದ ರೈತರು 44829 ಕ್ವಿಂಟಲ್ ರಾಗಿಯನ್ನು 3,290 ರೂ.ಗಳಿಗೆ ಮಾರಾಟ ಮಾಡಿದ್ದರು. 2021-22 ನೇ ಸಾಲಿನಲ್ಲಿ 4,240 ರೈತರು ರಾಗಿ ಮಾರಾಟಕ್ಕೆ ನೊಂದಣಿ ಮಾಡಿಸಿ, 4,071 ರೈತರು 56,606 ಕ್ವಿಂಟಲ್ ರಾಗಿಯನ್ನು ಇದೂವರೆಗೂ ಮಾರಾಟ ಮಾಡಿದ್ದಾರೆ ಎಂದು ಕೆಸಿಎಸ್‌ಎಫ್ಸಿ ಗೋಡೌನ್‌ನ ವ್ಯವಸ್ಥಾಪಕ ಖಲೀಮುಲ್ಲಾಖಾನ್ ತಿಳಿಸಿದರು. ●ಎಂ.ಸಿ.ಮಂಜುನಾಥ್