Advertisement

ಬೆಂಗಳೂರು ಟೆಕ್ ಶೃಂಗ 25 ವರ್ಷ ಅದ್ದೂರಿ ಆಚರಣೆ : ಪ್ರಧಾನಿ ಮೋದಿಗೆ ಆಹ್ವಾನ

01:42 PM Apr 25, 2022 | Team Udayavani |

ಬೆಂಗಳೂರು: ತಂತ್ರಜ್ಞಾನದ ಮೇಳ ಬೆಂಗಳೂರು ಟೆಕ್ ಶೃಂಗ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿರುವ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತಿದೆ.

Advertisement

ಸೋಮವಾರ ಖಾಸಗಿ ಹೋಟೆಲ್ ನಲ್ಲಿ ಸಿಎಂ ನೇತೃತ್ವದಲ್ಲಿ ಟೆಕ್ ಸಮಿಟ್ ಕುರಿತ  ಸಭೆ ನಡೆಸಲಾಯಿತು.ಸಭೆ ನಂತರ ಸಿಎಂ‌ ಬಸವರಾಜ್ ಬೊಮ್ಮಾಯಿ ಮಾತನಾಡಿ,ಟೆಕ್ ಶೃಂಗ ಪೂರ್ವಭಾವಿ ಕುರಿತು ಚರ್ಚೆ ಆಗಿದೆ. ಬೆಂಗಳೂರಿನ ಮೂಲಭೂತ ಸೌಕರ್ಯ ಬಗ್ಗೆಯೂ ಚರ್ಚೆ ಆಗಿದೆ. ಕಿರಣ್ ಮಜುಂದಾರ್ ಶಾ ಅವತು ವಿಡಿಯೋ ಕಾನ್ಪೆರೆನ್ಸ್ ನಿಂದ ಕೆಲ ಸಲಹೆ ನೀಡಿದ್ದಾರೆ. ಆ ಸಲಹೆಗಳಂತೆ ಬೆಂಗಳೂರಲ್ಲಿ ಮೂಲಭೂತ ಸೌಕರ್ಯ ವಹಿಸುವ ಬಗ್ಗೆ ಕ್ರಮ ವಹಿಸುತ್ತೇವೆ ಎಂದರು.

ಸಭೆಯ ಬಳಿಕ ಐಟಿ-ಬಿಟಿ ಸಚಿವ ಡಾ.ಸಿ‌ಎನ್. ಅಶ್ವತ್ಥ್ ನಾರಾಯಣ್ ಸುದ್ಧಿಗೋಷ್ಠಿಯಲ್ಲಿ, ತಿಂಗಳುಗಳ ಮೊದಲೇ ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿದ್ದು, ಆಸ್ಟ್ರೇಲಿಯ, ಇಸ್ರೇಲ್ ಸೇರಿದಂತೆ ಹಲವಾರು ದೇಶಗಳ ಮುಖ್ಯಸ್ಥರನ್ನು ಅಹ್ವಾನಿಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಚರು, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಅರಮನೆ ಆವರಣದಲ್ಲಿ ನವೆಂಬರ್ 16 ರಿಂದ 18 ರವರೆಗೆ ಬೆಂಗಳೂರು ಟೆಕ್ ಶೃಂಗ 25ನೇ ಆವೃತ್ತಿ ನಡೆಯಲಿದೆ ಎಂದರು.

ಹಲವಾರು ಕ್ಷೇತ್ರದಲ್ಲಿ ಇವತ್ತು ವಿಶ್ವಮಟ್ಟದಲ್ಲಿ ನಮ್ಮ ರಾಜ್ಯ ಮತ್ತು ನಮ್ಮ ನಗರ ಮಾಡುತ್ತಿದೆ. ಅದಕ್ಕಾಗಿ ಪ್ರತಿವರ್ಷ ಬೆಂಗಳೂರು ಟೆಕ್ ಸಮಿಟ್ ಮಾಡಲಾಗುತ್ತಿದೆ. ಇವತ್ತು ಲೋಗೋ ಬಿಡುಗಡೆ ಮಾಡಲಾಯಿತು. ಇವತ್ತು ವಿಷನ್ ಗ್ರೂಪ್ ನ ಮುಖ್ಯಸ್ಥರು ಎಲ್ಲರೂ ಭಾಗವಹಿಸಿದ್ದರು. 25  ವರ್ಷ ಪೂರೈಸುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್ ಗೆ ಕರ್ಟನ್ ರೈಸ್ ಮಾಡಲಾಗಿದೆ ಬಹಳ ಅದ್ಭುತವಾಗಿ ಕಾರ್ಯಕ್ರಮ ಆಯೋಜಿಸಲು ಸಜ್ಜಾಗಿದ್ದೇವೆ. ಇವತ್ತು ಹಲವರ ಜೊತೆ ಸಮಾಲೋಚನೆ ಮಾಡಿ ಅಭಿಪ್ರಾಯ ಪಡೆಯಲಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ 25 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಅದು ಐವತ್ತು ಲಕ್ಷ ಆಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ ಎಂದು ಸಚಿವ ಡಾ.ಸಿ‌ಎನ್. ಅಶ್ವತ್ಥ್ ನಾರಾಯಣ್ ತಿಳಿಸಿದರು.

Advertisement

ಇವತ್ತು ಸ್ಟಾರ್ಟ್ ಅಪ್ ಗಳನ್ನ ಹೆಚ್ಚು ಮಾಡಲಾಗುತ್ತಿದೆ. ಅದಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ವೆಬ್3 ಗೆ ಬೇಕಾಗುವ ಪ್ರೋತ್ಸಾಹವನ್ನ ಮಾಡಲಾಗುತ್ತಿದೆ. 150 ಬಿಲಿಯನ್ ಯುಎಸ್ ಡಾಲರ್ ವಹಿವಾಟು ನಡೆಸಲಾಗುತ್ತಿದೆ. ಅದು 300 ಬಿಲಿಯನ್ ಯುಎಸ್ ಡಾಲರ್ ವಹಿವಾಟು ಮಾಡುವ ಗುರಿ ಇದೆ. ಮಾರ್ಕೆಟ್, ಆ್ಯಕ್ಸಿಸ್ ಕೊಟ್ಟು ರೈತರಿಗೆ ಸಂಘಸಂಸ್ಥೆಗಳಿಗೆ ಅನುಭವ ಕೊಡಲಾಗುತ್ತದೆ. ಹೆಚ್ಚಿನ ಉತ್ತೇಜನ ಕೊಟ್ಟು ಬಯೋಟೆಕ್ನಾಲಜಿಯನ್ನ ಬೆಳೆಸಲಾಗುತ್ತಿದೆ. ಮಾನವ ಸಂಪನ್ಮೂಲ ನಮಗೆ ಸಾಕಾಗುತ್ತಿಲ್ಲ. ಐಟಿ ಸೆಕ್ಟರ್ ನಲ್ಲಿ ಮುಂದಿನ ದಿನಗಳಲ್ಲಿ 50 ಲಕ್ಷ ಉದ್ಯೋಗ ಸಿಗಲಿದೆ. ಶಿಕ್ಷಣದಲ್ಲೂ ಎಲ್ಲಾ ಕೋರ್ಸ್ ಗಳಿಗೂ ಫ್ಯೂಚರ್ ಸ್ಕಿಲ್ಸ್ ಅಳವಡಿಸಲಾಗುತ್ತದೆ. ೩೫ ನೇ ವರ್ಷ ಬೆಂಗಳೂರು ಟೆಕ್ ಸಮ್ಮಿಟ್ ಆಚರಣೆ ಅದ್ಭುತವಾಗಿರಬೇಕು. ಅದು ವಿಶ್ವಕ್ಕೆ ತೋರುವಂತಾಗಬೇಕು ಆ ದಿಕ್ಕಿನಲ್ಲಿ ನಮ್ಮ ಸರ್ಕಾರ ಕೈ ಜೋಡಿಸಿ ಸಹಕಾರ ನೀಡಲಿದೆ ಎಂದರು.

ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲವನ್ನು ಒದಗಿಸಿಕೊಡಲು ನಮ್ಮ ಸರ್ಕಾರ ಸಿದ್ದವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಬೆಂಗಳೂರು ಅಭೂತಪೂರ್ವ ಯಶಸ್ಸು ಕಾಣುತ್ತಿದೆ.ಇಂದು ಬೆಂಗಳೂರು ಟೆಕ್ ಸಮಿಟ್ ಲೋಗೊ,ಕರ್ಟನ್ ರೇಸರ್ ಬಿಡುಗಡೆ ಮಾಡಲಾಯಿತು.

ಟೆಕ್ ಲೀಡರ್ಸ್ ಜೊತೆ ಟೆಕ್ ಸಮಿಟ್ ಬಗ್ಗೆ ಸಿಎಂ ಚರ್ಚೆ ನಡೆಸಿದ್ದಾರೆ. 25 ವರ್ಷವನ್ನು ಬೆಂಗಳೂರು ಟೆಕ್ ಸಮಿಟ್ ಪೂರ್ಣಗೊಳಿಸಿದೆ. ಕೆಲ ತಿಂಗಳ ಮುಂಚಿತವಾಗಿ ಕರ್ಟನ್ ರೈಸರ್ ಬಿಡುಗಡೆ ಮಾಡಿದ್ದೇವೆ. ಇಡೀ ವಿಶ್ವಕ್ಕೆ ಈ ಟೆಕ್ ಸಮಿಟ್ ಹರಡಬೇಕು. ಸಿಲಿಕಾನ್ ವ್ಯಾಲಿ ಸ್ಯಾನ್‌ಫ್ರಾನ್ಸಿಸ್ಕೊ ಬಿಟ್ಟರೆ ಬೆಂಗಳೂರು 300 ಬಿಲಿಯನ್ ಡಾಲರ್‌ ಆರ್ಥಿಕತೆ ದಾಖಲಿಸುವುದು ನಮ್ಮ ಗುರಿ ಎಂದರು.

ಬಯೋಟೆಕ್ನಾಲಜಿ,ಎಲೆಕ್ಟ್ರಾನಿಕ್ಸ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತಿದ್ದೇವೆ. ಮೆಟಾವರ್ಸ್,ವೆಬ್ 3 ಗೆ ಪೂರಕ ಯೋಜನೆ ಆಗಬೇಕು. ಈ ಕಾರ್ಯಕ್ರಮ ಕೇವಲ ಟೆಕ್ಕಿಗಳಿಗೆ ಸೀಮಿತವಾಗದೆ ಗ್ರಾಮೀಣಭಾಗದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದರು.

ಗ್ರಾಮೀಣ ಭಾಗ ಸಂಪೂರ್ಣ ತೊಡಗಿಕೊಳ್ಳುವ ಹಾಗೆ ಆಗಬೇಕು. ಲಸಿಕೆ ಉತ್ಪಾದನೆ,ಆರೋಗ್ಯ ಉನ್ನತಿಕರಣದಲ್ಲೂ ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಬೆಂಗಳೂರು ಹೊರತುಪಡಿಸಿ ಬೇರೆ ಸ್ಥಳಗಳು ಅಭಿವೃದ್ಧಿ ಆಗಲು ಈ ಕಾರ್ಯಕ್ರಮ ಸಹಾಯವಾಗುತ್ತಿದೆ. ಎಲ್ಲಾ ಕ್ಷೇತ್ರಗಳಿಗೂ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ. ಅದಕ್ಕೆ ಪೂರಕವಾಗುವಂತೆ ಶಿಕ್ಷಣ ಒದಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ NEP ಮೂಲಕ ಶಿಕ್ಷಣದ ಉನ್ನತೀಕರಣ ಮಾಡಿ ಮಕ್ಕಳಿಗೆ ಪ್ರಾಯೋಗಿಕ ಕಲಿಕೆ ಮೂಡಿಸಲಾಗುವುದು. ಟೆಕ್ ಲೀಡರ್ಸ್‌ಗೆ ಸಂಪೂರ್ಣ ಬೆಂಬಲ,ಸಹಕಾರ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next