Advertisement

ಪ್ರಧಾನಿಯಿಂದ ಮಾ 12 ಕ್ಕೆ ಬೆಂಗಳೂರು-ಮೈಸೂರು ಹೈವೇ ಲೋಕಾರ್ಪಣೆ

03:41 PM Mar 01, 2023 | Team Udayavani |

ಮೈಸೂರು: ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಎಸ್ಪಿಜಿ ಅನುಮತಿ ಕೊಟ್ಟರೆ ರಸ್ತೆಯಲ್ಲಿ ರೋಡ್ ಶೋ ಮಾಡುತ್ತೇವೆ. ಒಟ್ಟು 2 ಕಿಮೀ ರೋಡ್ ಶೋ ಮಾಡಲು ಉದ್ದೇಶಿಸಿದ್ದೇವೆ. ರೋಡ್ ಶೋ ನಂತರ ಮಂಡ್ಯದ ಮದ್ದೂರು ಬಳಿಯ ಗೆಜ್ಜೆಲಗೆರೆಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.

ಟೋಲ್ ಸಂಗ್ರಹ
ಟೋಲ್ ಸಂಗ್ರಹ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಸರ್ವಿಸ್ ರಸ್ತೆ ಪೂರ್ಣಗೊಳ್ಳಲು ನ್ಯಾಯಾಲಯದಲ್ಲಿನ ಜಮೀನು ಕುರಿತ ಮೊಕದ್ದಮೆ ಬಾಕಿ ಇದೆ‌. ಅದು ತೀರ್ಮಾನವಾದ ಮೇಲೆ ಬೇಗನೆ ಸರ್ವಿಸ್ ರಸ್ತೆ ಆರಂಭಿಸಲಾಗುತ್ತದೆ. ಹೈವೇಯ ಒಂದು ಭಾಗದ ಟೋಲ್ ಸಂಗ್ರಹವನ್ನು ಮಾರ್ಚ್ 14 ರವರೆಗೆ ಮುಂದೂಡಿದ್ದೇವೆ.ಬೆಂಗಳೂರು – ನಿಡಗಟ್ಟದವರೆಗೂ ಟೋಲ್ ಸಂಗ್ರಹ ಮಾಡಲಾಗುತ್ತದೆ ಎಂದರು.

ಮಹದೇವಪ್ಪ ಅವರನ್ನು ಕೇಳಿ
ಕಾಂಗ್ರೆಸ್ ಸರಕಾರದಲ್ಲಿ ಆದ ಮೈಸೂರು – ಊಟಿ ಹೈವೇ ಗೆ ಸರ್ವಿಸ್ ರಸ್ತೆಯೆ ಇಲ್ಲ. ಈಗ ಇವರೆಲ್ಲಾ ಬೆಂಗಳೂರು – ಮೈಸೂರು ಹೈವೆ ಸರ್ವಿಸ್ ರಸ್ತೆ ಬಗ್ಗೆ ಮಾತಾಡುತ್ತಿದ್ದಾರೆ. ನಾವು ಸರ್ವಿಸ್ ರಸ್ತೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದೇವೆ. ಸರ್ವಿಸ್ ರಸ್ತೆಯೇ ಮಾಡದೆ ನೀವು ಟೋಲ್ ಸಂಗ್ರಹ ಹೇಗೆ ಆರಂಭಿಸಿದಿರಿ ಎಂದು ಕಾಂಗ್ರೆಸ್ ನ ಮಹದೇವಪ್ಪ ಅವರನ್ನು ಕೇಳಿ ಎಂದು ಪ್ರತಾಪ ಸಿಂಹ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next