ಬೆಂಗಳೂರು : ದಾವೋಸ್ ಪ್ರವಾಸ ಮುಗಿಸಿ ಹಿಂತಿರುಗಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು ರಾಜ್ಯ ರಾಜಧಾನಿ ಬೆಂಗಳೂರು ಮೂಲ ಸೌಕರ್ಯವನ್ನು ನವೆಂಬರ್ ಹೊತ್ತಿಗೆ ಸರಿ ಪಡಿಸುತ್ತೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಾವೋಸ್ ಪ್ರವಾಸದ ಮಹತ್ವಿಕೆಯ ಕುರಿತು ವಿವರ ನೀಡಿದರು. ಪ್ರತಿವರ್ಷ ದಾವೋಸ್ ನಲ್ಲಿ ಆರ್ಥಿಕ ಶೃಂಗ ಸಭೆ ನಡೆಯುತ್ತದೆ. ಹಿಂದೆ ಯೂ ಅನೇಕ ಸಿಎಂಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕೋವಿಡ್ ನಂತರ ಇಡೀ ವಿಶ್ವದ ಆರ್ಥಿಕತೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ವಿಶ್ವದ ಉದ್ಯಮಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿತ್ತು.ದಾವೋಸ್ ನಲ್ಲಿ ಪ್ರಮುಖವಾಗಿ ಹವಾಮಾನ ಬದಲಾವಣೆ ಕುರಿತು ಮಹತ್ವದ ಚರ್ಚೆ ನಡೆಯಿತು. ಉದ್ಯಮಿಗಳು ಭಾರತಕ್ಕೆ ಆದ್ಯತೆ ನೀಡಿದ್ದು ನೋಡಿದರೆ ಭಾರತ ಒಂದು ಎಮರ್ಜಿಂಗ್ ಎಕಾನಮಿ ಅಂತ ಗೋಚರಿಸುತ್ತದೆ. ಯುರೋಪಿನ ರಾಷ್ಟ್ರಗಳು ಕೋವಿಡ್ ನಿಂದ ಆರ್ಥಿಕ ಸಂಕಷ್ಟ ಎದರಿಸುತ್ತಿದ್ದು, ಚೀನದಲ್ಲಿ ಈಗಲೂ ಕೋವಿಡ್ ಮುಂದುವರೆದಿದ್ದು, ಹೀಗಾಗಿ ಉದ್ಯಮಿಗಳು ಭಾರತದೆ ಕಡೆಗೆ ನೋಡುವಂತೆ ಮಾಡಿದೆ.ಪ್ರಮುಖವಾಗಿ ನವೀಕರಣದ ಇಂಧನದ ಬಗ್ಗೆ ಹೆಚ್ಚು ಹೆಚ್ಚು ಹೂಡಿಕೆಗೆ ಅವಕಾಶಗಳು ಚರ್ಚೆಗಳು ನಡೆದಿವೆ ಎಂದರು.
ಭಾರತದಿಂದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ತಮ್ಮದೇ ಆದ ಪೆವಿಲಿಯನ್ ಹಾಕಿದ್ದವು. ಕರ್ನಾಟಕದ ಪೆವಿಲಿಯನ್ ಗೆ ಬೆಳಿಗ್ಗೆ 10 ರಿಂದ ರಾತ್ರಿ 10 ರ ವರೆಗೆ ಉದ್ಯಮಿಗಳು ಭೇಟಿ ನೀಡಿಕೆಗೆ ಚರ್ಚೆ ನಡೆಸಿದ್ದಾರೆ. ಜುಬಿಲಿಯಂಟ್ ಸಂಸ್ಥೆ 700 ಕೋಟಿ ಹೂಡಲು ತೀರ್ಮಾನ ಮಾಡಿದ್ದಾರೆ.ಹಿಟಾಚಿ ಕಂಪನಿ 2000. ಎಂಜನೀಯರ್ ಗಳಿಗೆ ಉದ್ಯೋಗ ನೀಡಲು ಮುಂದೆ ಬಂದಿದ್ದಾರೆ. ಸಿಮೆನ್ಸ್ ಕಂಪನಿ 1300 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ.ಯ್ಯೂರೊ ಗ್ರುಪ್ ನವರು ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದೆ ಬಂದಿದ್ದಾರೆ.ಉತ್ತರ ಕರ್ನಾಟಕದಲ್ಲಿ ಕಂಪನಿ ಸ್ಥಾಪಿಸಲು ಮನವಿ ಮಾಡಿದ್ದೇವೆ. ನೆಸ್ಟ್ಲೆ ಕಂಪನಿಯವರು 700 ಕೋಟಿ ಹೂಡಲು ಮುಂದೆ ಬಂದಿದ್ದಾರೆ. ನೈಡಲ್ ಕಂಪನಿ ಸುಮಾರು 4000. ಜನರಿಗೆ ಉದ್ಯೋಗ ನೀಡಲು ಮುಂದೆ ಬಂದಿದ್ದಾರೆ. ಸುನಿಲ್ ಮಿತ್ತಲ್ ಅವರು ಮೆಗಾ ಡಾಟಾ ಸೆಂಟರ್ ತೆರೆಯಲು ಮುಂದೆ ಬಂದಿದ್ದಾರೆ. ರಿನ್ಯೂ ಕಂಪನಿ ರಿನಿವಲ್ ಎನರ್ಜಿ ಕ್ಷೇತ್ರದಲ್ಲಿ 7 ವರ್ಷದಲ್ಲಿ 50.ಸಾವಿರ ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಅದಾನಿ ಗ್ರೂಪ್ ನವರು ರಿನಿವಲ್ ಎನರ್ಜಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಆ್ಯಕ್ಸಿಸ್ ಬ್ಯಾಂಕ್ ಮುಂದೆ ಬಂದಿದೆ. ಸುಮಾರು 25 ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಸುಮಾರು 65 ಸಾವಿರ ಕೋಟಿ ಬಂಡವಾಳ ಹೂಡಿಕೆಯ ಒಪ್ಪಂದವಾಗಿದೆ. ಕರ್ನಾಟಕದ ಸ್ಕಿಲ್, ಮೂಲಸೌಕರ್ಯ, ಇಲ್ಲಿ ತಂತ್ರಜ್ಞಾನ ದ ಬಗ್ಗೆ ಉದ್ಯಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಇದನ್ನೂ ಓದಿ : ದಾವೋಸ್ ಪ್ರವಾಸ ಯಶಸ್ವಿ, ರಾಜ್ಯದಲ್ಲಿ 5 ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆ ನಿರೀಕ್ಷೆ: ನಿರಾಣಿ
ನವೆಂಬರ್ 2-4 ರ ವರೆಗೆ ಬಡವಾಳ ಹೂಡಿಕೆದಾರರ ಸಮಾವೇಶ, ನವೆಂಬರ್ 16-17ಟೆಕ್ ಸಮ್ಮಿಟ್ ಮಾಡಲು ತೀರ್ಮಾನಿಸಲಾಗಿದೆ.ಕರ್ನಾಟಕದ ದೊಡ್ಡ ಪ್ರಮಾಣದ ಆರ್ಥಿಕ ಬೆಳವಣಿಗೆ ಯಾಗುವ ಸೂಚನೆಇದೆ. ಇನ್ನಷ್ಟು ಬದ್ದತೆಯಿಂದ ಕೆಲಸ ಮಾಡಿ ಎಂಡ್ ಟು ಎಂಡ್ ಕೆಲಸ ಮಾಡುತ್ತೇವೆ ಎಂದರು.
ಭಾರತದಲ್ಲಿ ಕರ್ನಾಟಕಕ್ಕೆ ತನ್ನದೆ ಆದ ಮಹತ್ವ ಇದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಬಾರದು. ಲಕ್ಷ್ಮಿ ಮಿತ್ತಲ್ ಅವರಿಗೆ ರಾಜ್ಯದ ಪಾಲಿಸಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಸ್ಥಿರತೆ ಬಗ್ಗೆ ಅವರು ಸಾಮಾನ್ಯವಾಗಿ ಕೇಳಿದ್ದಾರೆ. ಅದನ್ನು ದೊಡ್ಡದಾಗಿ ಬಿಂಬಿಸಲಾಗಿದೆ. ಬೆಂಗಳೂರು ಮೂಲ ಸೌಕರ್ಯ ನವೆಂಬರ್ ಹೊತ್ತಿಗೆ ಸರಿ ಪಡಿಸುತ್ತೇವೆ ಎಂದರು.