ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇಗುಲದ ಸ್ವರ್ಣ ಮುಖೀ ಮಂಟಪದಲ್ಲಿ ಯಕ್ಷಾಂಗಣ ಟ್ರಸ್ಟ್ ಬೆಂಗಳೂರು ವತಿಯಿಂದ ಯಕ್ಷ ಸಮ್ಮಾನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ ಕಲಾವಿದ ಮುಳ್ಳಿಕಟ್ಟೆ ಕೃಷ್ಣ ಅವರನ್ನು ಗುರುತಿಸಿ ಸಮ್ಮಾನಿಸುತ್ತಿರುವುದು ಯಕ್ಷಗಾನ ಕಲೆಗೆ ಸಂದ ಗೌರವವಾಗಿದೆ ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ. ಕಿಶನ್ ಹೆಗ್ಡೆ ಮಾತನಾಡಿ, ರಂಗದ ಹಿಂದಿರುವ ನೇಪಥ್ಯ ಸಹಾಯಕರನ್ನು ಸಮ್ಮಾನಿಸುವುದು ಬಹಳ ವಿರಳ ಎಂದರು.
ಯಕ್ಷಗಾನ ವಿಮರ್ಶಕ ಪ್ರೊ| ಉದಯ ಕುಮಾರ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ಕಲಾಸಂಘದ ಗಣೇಶ ಉಡುಪ, ಯಕ್ಷಾಂಗಣ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ವೀಣಾ ಮೋಹನ್, ಅಕಾಡೆಮಿಯ ಮಾಜಿ ಸದಸ್ಯ ಕೆ. ಮೋಹನ್ ಉಪಸ್ಥಿತರಿದ್ದರು.
ಭಾಗವತ ಲಂಬೋದರ ಹೆಗಡೆಯವರು ಸ್ವಾಗತಿಸಿದರು. ಕೆ. ನರಸಿಂಹ ತುಂಗ ವಂದಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ಕೋಟ ಕಾರ್ಯಕ್ರಮ ನಿರೂಪಿಸಿದರು. ನಂತರ ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ “ಕೃಷ್ಣಾರ್ಜುನ ಕಾಳಗ’ ಎನ್ನುವ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.