ದೇವನಹಳ್ಳಿ: ತ್ಯಾಗ ಬಲಿದಾನಗಳ ಸಂಕೇತವಾಗಿಆಚರಿಸುವ ಬಕ್ರೀದ್ ಹಿನ್ನೆಲೆಯಲ್ಲಿ ಕುರಿ ಮತ್ತುಮೇಕೆಗಳಿಗೆ ಬೇಡಿಕೆ ಹೆಚ್ಚಿದೆ. ಸಾಮಾನ್ಯವಾಗಿ7ರಿಂದ 8 ಸಾವಿರಕ್ಕೆ ಮಾರಾಟವಾಗುತ್ತಿದ್ದಕುರಿಗಳಿಗೆ ಅಧಿಕ ಬೆಲೆ ಬಂದಿದ್ದು, ಜೋಡಿಕುರಿಗೆ ಸುಮಾರು 50 ಸಾವಿರಕ್ಕೂ ಹೆಚ್ಚಿನ ಬೆಲೆಗೆಮಾರಾಟವಾಗುತ್ತಿದೆ.
ಮನೆಮನೆಗೂ ಹೋಗಿ ಕುರಿ ವ್ಯಾಪಾರ:ಬಕ್ರೀದ್ ಹಬ್ಬದಲ್ಲಿ ಕುರಿಗಳನ್ನು ಬಲಿಕೊಡುತ್ತಾರೆ. ಹೀಗಾಗಿ ಮೂರು ಮಾರುಕಟ್ಟೆಯಲ್ಲಿ ಸಹಜವಾಗಿಯೇ ಕುರಿಬೆಲೆ ಗಗನಕ್ಕೇರಿದೆ.ಈ ಪ್ರದೇಶದಲ್ಲಿ ಕುರಿ ಸಾಕಾಣಿಕೆ ಮಾಡುವವರಮನೆಗೆ ಹೋಗಿ ವ್ಯಾಪಾರ ಕುದುರಿಸಿಕೊಂಡುಹೋಗುತ್ತಿದ್ದಾರೆ. ಕೊಂಡುಕೊಳ್ಳುವವರು ಉಂಡೆಕುರಿಯನ್ನೇ ತೂಕಕ್ಕೆ ಹಾಕಿ ಕಿಲೋಗೆ ಸಾವಿರದಂತೆನಿಗದಿಮಾಡಿ ಮಾರಾಟ ಮಾಡುತ್ತಿದ್ದಾರೆ.
ಅಂಗಾಗ ವೈಫಲ್ಯ ಕುರಿ ಬಲಿಗೆ ನಿಷೇಧ:ಗಾಯವಾದ ಕುರಿ, ರೋಗಗ್ರಸ್ಥವಾಗಿರುವ ಕುರಿಯನ್ನು ಬಲಿ ನೀಡುವುದಿಲ್ಲ. ಈಸಮಯದಲ್ಲಿ ಗಾಳಿ ಮಳೆಯಾಗಿದ್ದು, ಇದನ್ನುಶೀತದಿಂದ ಸಂರಕ್ಷಿಸುವುದು, ಅಂಗಗಳಿಗೆಗಾಯವಾಗದಂತೆ ನೋಡಿಕೊಳ್ಳುವುದುಸವಾಲಿನ ಕೆಲಸವಾಗಿದೆ ಎಂದು ಮುಸ್ಲಿಂಮುಖಂಡ ಫಸಲ್ ಪಾಶ ಹೇಳುತ್ತಾರೆ.ಒಂದು ಕುರಿ ತೂಕಕ್ಕೆ ತಕ್ಕಂತೆ 10ರಿಂದ 25ಸಾವಿರ ರೂ.ವರೆಗೂ ಮಾರಾಟವಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕುರಿ ಮಾಂಸದ ದರ400ರಿಂದ 500 ರೂ. ಇದೆ. ಗ್ರಾಹಕರು ಉಂಡೆಕುರಿಯನ್ನೇ ತೂಕಕ್ಕೆ ಹಾಕಿ ಕಿಲೋಗೆ ಸಾವಿರದಂತೆನಿಗದಿ ಮಾಡಿ ಮಾರಾಟ ಮಾಡುತ್ತಿದ್ದಾರೆ.
ಮಾರಾಟಕ್ಕೆ ಹಲವು ತಿಂಗಳಿನಿಂದ ಕುರಿಗಳನ್ನುತಯಾರು ಮಾಡಲಾಗಿದೆ. ಹೆಚ್ಚು ತೂಕವುಳ್ಳ,ಕೊಬ್ಬಿರುವ ಕುರಿಗಳಿಗೆ ಬೇಡಿಕೆ ಇರುವ ಕಾರಣನಾವು ಇದಕ್ಕೆ ಆದ್ಯತೆ ನೀಡುತ್ತೇವೆ. ಹಬ್ಬ ಇನ್ನೂಒಂದು ತಿಂಗಳು ಇದ್ದಂತೆ ಕುರಿಗೆ ಹೆಚ್ಚು ಆರೈಕೆಮಾಡಲಾಗುತ್ತದೆ. ಪೌಷ್ಟಿಕ ಆಹಾರ, ತಾಜ ಸೊಪ್ಪುಹೀಗೆ ಹಲವು ರೀತಿಯಲ್ಲಿ ಕುರಿ ನೋಡಿಕೊಳ್ಳಲಾಗುತ್ತದೆ.ಮಗುವಿನಂತೆಪೋಷಿಸುವುದು ಮುಖ್ಯ.ಅಂತಹ ಕುರಿಯನ್ನು ಬಕ್ರೀದ್‌ನಲ್ಲಿ ಅಲ್ಲಹನಿಗೆಬಲಿ ನೀಡಲಾಗುತ್ತದೆ ಎಂದು ಜಾಮೀಯ ಮಸೀದಿಯ ಹೈದರ್ ಸಾಬ್ ಹೇಳುತ್ತಾರೆ.ಬಲಿಕೊಟ್ಟ ಪ್ರಾಣಿ ಮಾಂಸ ಮೂರು ಭಾಗ:ಬಕ್ರೀದ್ ಹಬ್ಬದಲ್ಲಿ ಬಲಿ ನೀಡಿದ ಪ್ರಾಣಿಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಿ,ಒಂದು ಭಾಗವನ್ನು ಸಂಬಂಧಿಕರಿಗೆ, ಎರಡನೇಭಾಗವನ್ನು ಬಡವರಿಗೆ ಹಂಚುತ್ತಾರೆ. ಮೂರನೇಭಾಗವನ್ನು ಮನೆಯವರಿಗಾಗಿ ಉಳಿಸಿಕೊಳ್ಳುವುದೇ ವಿಶೇಷವಾಗಿದೆ.
ಎಸ್.ಮಹೇಶ್