ನೆಲಮಂಗಲ: ನಗರ ದಲ್ಲಿ ಸುರಿದ ಮಳೆಗೆಕಾಂಪೌಂಡ್ ಗೋಡೆ ಕುಸಿದು ಮನೆಯಲ್ಲಿನಿದ್ರೆ ಮಾಡುತ್ತಿದ್ದ ಅಣ್ಣ ತಂಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಸೇರಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೇಣುಗೋಪಾಲ್(22), ಕಾವ್ಯ (19) ಮೃತವ್ಯಕ್ತಿಗಳು. ಇವರು ಮೂಲತಃ ದೊಡ್ಡಬಳ್ಳಾಪುರದವರಾಗಿದ್ದು, ಬಿನ್ನಮಂಗಲ ಸಮೀಪ ಕೃಷ್ಣಪ್ಪಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಸೋಮವಾರ ರಾತ್ರಿ ಸುರಿದ ಮಳೆಗೆ ಬಾಡಿಗೆ ಮನೆಪಕ್ಕದಲ್ಲಿ ನಿರ್ಮಾಣವಾಗಿದ್ದ 15 ಅಡಿಗೂ ಹೆಚ್ಚುದೊಡ್ಡದಾದ ಕಲ್ಲಿನ ಕಾಂಪೌಂಡ್ ಗೋಡೆ ಮಂಗಳವಾರ ಬೆಳಗಿನ ಜಾವ 4.40 ಗಂಟೆಗೆ ಕುಸಿದು ಮನೆಮೇಲೆ ಬಿದ್ದಿದೆ.
ಮನೆಯಲ್ಲಿ ಮಲಗಿದ್ದ ಅಣ್ಣತಂಗಿಇಬ್ಬರು ಸ್ಥಳದಲ್ಲಿ ಮೃತವಾಗಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ. ತಕ್ಷಣ ಗಾಯಾಳುಗಳಿಗೆಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆನೀಡಿ, ಹೆಚ್ಚಿನ ಚಿಕಿತ್ಸೆಯನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿಕೊಡಿಸಲಾಗಿದೆ.
ಅಧಿಕಾರಿಗಳಿಂದ ಪರಿಶೀಲನೆ: ಮಳೆಗೆ ಗೋಡೆಕುಸಿದು ಇಬ್ಬರು ಮೃತಪಟ್ಟಿರುವ ವಿಚಾರ ತಿಳಿದತಕ್ಷಣ ಜಿಲ್ಲಾಧಿಕಾರಿ ಶ್ರೀನಿವಾಸ್, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ತಹಶೀಲ್ದಾರ್ ಕೆ.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು,ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಮನೆ ಖಾಲಿ ಮಾಡಿದ ಜನರು: ಕುಸಿದಕಾಂಪೌಂಡ್‌ನ ಸಮೀಪವೇ ಅಲವು ಮನೆಗಳಿದ್ದು,ಅವಘಡವನ್ನು ಕಂಡು ಅನೇಕ ಜನರು ಮನೆಗಳನ್ನು ಖಾಲಿ ಮಾಡಿದ್ದಾರೆ. ಕುಸಿದ ಗೋಡೆಯನ್ನುಸಂಪೂರ್ಣವಾಗಿ ತೆರವು ಗೊಳಿಸಲು ಸ್ಥಳೀಯರುಒತ್ತಾಯ ಮಾಡಿದ್ದಾರೆ.
ಸಮಗ್ರ ತನಿಖೆಗೆ ಸೂಚನೆ: ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಮಳೆ ಸುರಿದು ಗೋಡೆಕುಸಿತವಾಗಿ ಇಬ್ಬರು ಮೃತರಾಗಿರುವ ದುರಂತಕೇಳಿ ಬಹಳಷ್ಟು ನೋವಾಗಿದೆ. ಅವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಗೋಡೆಕುಸಿತದ ಬಗ್ಗೆ ಸಮಗ್ರ ತನಿಖೆ ಮಾಡಲು ಸೂಚಿಸಲಾಗಿದೆ ಎಂದರು.