ದೇವನಹಳ್ಳಿ: ಕೊರೊನಾ ಗಣನೀಯವಾಗಿ ಇಳಿಕೆಯಾಗಿರುವ ನಡುವೆಯೇ ಜುಲೈ19 ಮತ್ತು22ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದು ನಡೆಯಲಿದೆ. ಸಾರ್ವಜನಿಕಶಿಕ್ಷಣ ಇಲಾಖೆ ಸಕಲ ಸಿದ್ಧತೆಯನ್ನು ಕೈಗೊಂಡಿದೆ ಎಂದು ಸಾರ್ವಜನಿಕ ಶಿಕ್ಷಣಇಲಾಖೆ ಜಿಲ್ಲಾ ಉಪನಿರ್ದೇಶಕ ಗಂಗಮಾರೇಗೌಡ ತಿಳಿಸಿದರು.ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಉಪನಿರ್ದೇಶಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ 4 ತಾಲೂಕುಗಳಲ್ಲಿ 106ಪರೀûಾ ಕೇಂದ್ರ ಗುರುತಿಸಲಾಗಿದ್ದು, ದೇವನಹಳ್ಳಿ, ಹೊಸಕೋಟೆಯಲ್ಲಿ ತಲಾ 20,ದೊಡ್ಡಬಳ್ಳಾಪುರದಲ್ಲಿ 28, ನೆಲಮಂಗಲದಲ್ಲಿ 24 ಕೇಂದ್ರಗಳಲ್ಲಿ ವಿದ್ಯಾರ್ಥಿಗಳುಪರೀಕ್ಷೆ ಬರೆಯಲಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ 13,989 ವಿದ್ಯಾರ್ಥಿಗಳು ಪರೀಕ್ಷೆತೆಗೆದುಕೊಂಡಿದ್ದಾರೆ. ಅದರಲ್ಲಿ 650 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ.ದೇವನಹಳ್ಳಿಯಲ್ಲಿ 3334, ದೊಡ್ಡಬಳ್ಳಾಪುರ 3792, ಹೊಸಕೋಟೆ 3804,ನೆಲಮಂಗಲ 3049 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ನೀರು, ಶೌಚಾಲಯ, ಸ್ಯಾನಿಟೈಸರ್,ಮಾಸ್ಕ್ ಕಲ್ಪಿಸಲಾಗಿದೆ. ಒಂದು ಕೊಠಡಿಗೆ 12 ವಿದ್ಯಾರ್ಥಿಗಳು ಮಾತ್ರ ಅವಕಾಶ.ಪ್ರತಿ ಡೆಸ್ಕ್ಗೆ ಒಬ್ಬ ವಿದ್ಯಾರ್ಥಿ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಸುಗಮವಾಗಿ ನಡೆಸಲು ಮುಂಜಾಗ್ರತಾಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಕ್ಕಳಿಗೆ ಮಾಸ್ಕ್ ಕಡ್ಡಾಯ: ಮೂರು ವಿಷಯಗಳಿಗೆ 120 ಅಂಕಗಳಿಗೆ ಪರೀಕ್ಷೆನಡೆಯಲಿದ್ದು,ಅದರಲ್ಲಿ ಬೆಳಗ್ಗೆ10.30ರಿಂದ1.30ರವರೆಗೆಪರೀಕ್ಷೆನಡೆಸಲಾಗುತ್ತದೆ. ಯಾವುದೇ ಭೀತಿಯಿಲ್ಲದೆ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳುಪರೀûಾ ಕೇಂದ್ರಕ್ಕೆ ಬಂದಾಗ ಅವರನ್ನು ತಪಾಸಣೆ ಮಾಡಿ, ಕೇಂದ್ರದೊಳಗೆ ಬಿಡಲುಸಿದ್ಧತೆ ಮಾಡಲಾಗಿದೆ. ಪರೀಕ್ಷೆಗೆಬರುವ ಮಕ್ಕಳಿಗೆ ಮಾಸ್ಕ್ಕಡ್ಡಾಯಗೊಳಿಸಲಾಗಿದೆ.ಆರೋಗ್ಯ ಇಲಾಖೆಯಿಂದ ಇಬ್ಬರು ಆಶಾ ಕಾರ್ಯಕರ್ತೆಯರು, ಆರೋಗ್ಯಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಜುಲೈ19ರಂದು ಗಣಿತ ಸಮಾಜ, ವಿಜ್ಞಾನ, ಜುಲೈ22ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್ ಮತ್ತು ಹಿಂದು ವಿಷಯಗಳು ಪರೀಕ್ಷೆನಡೆಯಲಿದೆ ಎಂದರು.
ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ: ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆಪರೀಕ್ಷೆ ಬರೆಯಬೇಕು. ಪರೀûಾ ಕೇಂದ್ರಗಳು ಸುರûಾ ಕೇಂದ್ರಗಳಾಗಿವೆ.ಮೇಲ್ವಿಚಾರಕರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ನೀಡಲಾಗಿದೆ. ಮೊದಲ ಭಾರಿಗೆವಿದ್ಯಾರ್ಥಿಗಳು ಪೂರ್ಣಪ್ರಮಾಣದಲ್ಲಿ ಮಾರ್ಕ್ ಮಾಡುವ ಪದ್ಧತಿಯಲ್ಲಿಓಎಂಆರ್ ಶೀಟ್ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಎಲ್ಲಾಶಾಲೆಗಳಲ್ಲಿ ಓಎಂಆರ್ ಶೀಟ್‌ನ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಮಕ್ಕಳಿಗೆಈಗಾಗಲೇ ತರಬೇತಿ ನೀಡಲಾಗಿದೆ. ಏಕಕಾಲಕ್ಕೆ 3 ವಿಷಯಗಳ ಪ್ರಶ್ನೆಪತ್ರಿಕೆವಿತರಣೆಯಾಗಲಿದೆ ಎಂದು ಹೇಳಿದರು.
ಉಚಿತ ಬಸ್ ವ್ಯವಸ್ಥೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಸಾರಿಗೆಸೌಲಭ್ಯಕ್ಕಾಗಿ ಗ್ರಾಮೀಣ ಪ್ರದೇಶಕ್ಕೆಬಸ್ಸುಗಳವ್ಯವಸ್ಥೆ ಮಾಡಲಾಗಿದೆ.ವಿದ್ಯಾರ್ಥಿಗಳುಗುರುತಿನ ಚೀಟಿ ತೋರಿಸಿ ಉಚಿತ ಪ್ರಯಾಣ ಮಾಡಬಹುದು ಎಂದರು.