Advertisement

ಬೆಂಗಳೂರು:ಪೊಲೀಸರೆಂದು 42 ಪ್ರಯಾಣಿಕರಿದ್ದ ಖಾಸಗಿ ಬಸ್‌ ಹೈಜಾಕ್‌ 

09:01 AM Apr 28, 2018 | Team Udayavani |

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ಖಾಸಗಿ ಬಸ್ಸನ್ನು ದುಷ್ಕರ್ಮಿಗಳು ಹೈಜಾಕ್‌ ಮಾಡಿದ ಆತಂಕಕಾರಿ ಘಟನೆ ಶುಕ್ರವಾರ ತಡರಾತ್ರಿ ನಗರದಲ್ಲಿ ನಡೆದಿದೆ.

Advertisement

ನಾಲ್ವರು ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಕೇರಳದ ಕಣ್ಣೂರಿಗೆ ಪ್ರಯಾಣ ಬೆಳೆಸಿದ್ದ ಖಾಸಗಿ ಬಸ್ಸನ್ನು ಮೈಸೂರ್‌ ರೋಡ್‌ನ‌ ಆರ್‌ವಿ ಕಾಲೇಜ್‌  ಬಳಿ ಅಡ್ಡಗಟ್ಟಿ ಡ್ರೈವರ್‌ನನ್ನು ಕೆಳಗಿಳಿಸಿ  ಹೈಜಾಕ್‌ ಮಾಡಿ ಆರ್‌.ಆರ್‌.ನಗರದ ಪಟ್ಟಣಗೆರೆಯ ಗೋದಾಮೊಂದರಲ್ಲಿ ಇರಿಸಿದ್ದರು. 

ಸುಮಾರು ಒಂದು ಗಂಟೆಗಳ ಕಾಲ ಗೋದಾಮಿನಲ್ಲಿ ಬಸ್‌ ಇರುವುದನ್ನು ಕಂಡು ಕಂಗಾಲಾದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಮಾಹಿತಿ ದೊರೆತ ತಕ್ಷಣ ಕಾರ್ಯಾಚರಣೆಗಿಳಿದ 30ಕ್ಕೂ ಹೆಚ್ಚು  ಮಂದಿ ಸಿಬಂದಿಗಳಿಂದ ಪೊಲೀಸರ ತಂಡ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಮೂವರು ದುಷ್ಕರ್ಮಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. 

ಹಣಕಾಸು ವಿಚಾರಕ್ಕೆ ಬಸ್‌ ಹೈಜಾಕ್‌ ಮಾಡಿದ್ದಾರೆ ಎನ್ನಲಾಗಿದ್ದು ,ಆರ್‌ಆರ್‌ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

ಅಕ್ರಮವಾಗಿ ಬಸ್‌ ತಡೆ ಹಿಡಿದು ಪ್ರಯಾಣಿಕರಿಗೆ ತೊಂದರೆ ಮಾಡಿರುವ ಆರೋಪಿಗಳ ವಿರುದ್ದ ಎಫ್ಐಆರ್‌ ದಾಖಲಿಸಿರುವುದಾಗಿ  ಪಶ್ಚಿಮ ವಲಯ ಡಿಸಿಪಿ  ರವಿ ಸಿ ಚನ್ನಣ್ಣನವರ್‌ ಮಾಧ್ಯಮಗಳಿಗೆ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next