ಬೆಂಗಳೂರು: ತಿಂಗಳುಗಟ್ಟಲೆ ಸ್ಥಗಿತಗೊಂಡಿದ್ದಸಾರ್ವಜನಿಕ ಸಾರಿಗೆ ಸೇವೆಗಳಿಗೆ ನಗರದಲ್ಲಿಸೋಮವಾರ ಮರುಚಾಲನೆ ದೊರೆಯಿತು.ಸರ್ಕಾರ ಅನ್‌ಲಾಕ್ ಜತೆಗೆ ಸಂಚಾರ ಸೇವೆಗೆಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಬಿಎಂಟಿಸಿ ಬಸ್‌ಗಳು ಮತ್ತು “ನಮ್ಮ ಮೆಟ್ರೋ’ರೈಲುಗಳು ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿಕಾರ್ಯಾಚರಣೆ ಆರಂಭಿಸಿದವು.
ಮೊದಲ ದಿನ ಸಾವಿರಾರು ಜನ ಇದರ ಉಪಯೋಗ ಪಡೆದುಕೊಂಡರು.ಸಿಟಿ ರೈಲು ನಿಲ್ದಾಣ ಸೇರಿದಂತೆ ನಗರದ ಪ್ರಮುಖನಿಲ್ದಾಣಗಳಲ್ಲಿ ಬಂದಿಳಿದ ಪ್ರಯಾಣಿಕರು, ಬೆಳಗ್ಗೆಕಚೇರಿ ಮತ್ತಿತರ ಕೆಲಸಗಳಿಗೆ ತೆರಳುವವರು, ಬಸ್‌ಅಥವಾ ಮೆಟ್ರೋ ಸೇವೆಗಳ ಮೊರೆಹೋದರು. ಈಸಂದರ್ಭದಲ್ಲಿ ಬಹುತೇಕರು ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕಸರ್ಕಾರದ ಮಾರ್ಗ ಸೂಚಿಗಳ ಪಾಲನೆಮಾಡುತ್ತಿರುವುದುಕಂಡುಬಂತು.
ಸೂಚನೆಯಂತೆ ಒಟ್ಟು ಆಸನಗಳಲ್ಲಿ ಶೇ.50ರಷ್ಟುಪ್ರಯಾಣಿಕರ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆಅವಕಾಶ ಕಲ್ಪಿಸಲಾಗಿತ್ತು. ಮೆಟ್ರೋ ರೈಲುಗಳಲ್ಲಿ ಇದರಪಾಲನೆ ಕಟ್ಟುನಿಟ್ಟಾಗಿತ್ತು. ಆದರೆ, ಬಹುತೇಕ ಬಸ್‌ಗಳಲ್ಲಿಎಲ್ಲ ಸೀಟುಗಳು ಭರ್ತಿ ಆಗಿದ್ದವು. “ಕೆಲವೆಡೆ ಬಸ್‌ಗಳಸಂಖ್ಯೆ ಕಡಿಮೆ ಇರುವುದರಿಂದ ಇದು ಅನಿವಾರ್ಯ’ಎಂಬ ಉತ್ತರ ಪ್ರಯಾಣಿಕರಿಂದ ಬಂತು.ಈ ಮಧ್ಯೆ ಹಿಂದಿನ ದಿನವೇ “ನಮ್ಮ ಮೆಟ್ರೋ’ ರೈಲುಮತ್ತು ನಿಲ್ದಾಣಗಳನ್ನು ಸ್ವತ್ಛಗೊಳಿಸಿ, ಮಾರ್ಗಸೂಚಿಪಾಲನೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿತ್ತು.ಸೋಮವಾರ ಖುದ್ದು ಬೆಂಗಳೂರು ಮೆಟ್ರೋ ರೈಲುನಿಗಮ(ಬಿಎಂಆರ್‌ಸಿಎಲ್)ದ ವ್ಯವಸ್ಥಾಪಕ ನಿರ್ದೇಶಕರಾಕೇಶ್ ಸಿಂಗ್, ಎಂ.ಜಿ. ರಸ್ತೆ ನಿಲ್ದಾಣಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿದರು
ಅಲ್ಲದೆ, ಅಲ್ಲಿಂದ ಬಿ.ಆರ್. ಅಂಬೇಡ್ಕರ್ ನಿಲ್ದಾಣವಿಧಾನಸೌಧವರೆಗೆ ಮೆಟ್ರೋದಲ್ಲಿ ಪ್ರಯಾಣಬೆಳೆಸಿದರು. ಈ ವೇಳೆ ಸಾಮಾನ್ಯ ಪ್ರಯಾಣಿಕರಅಭಿಪ್ರಾಯ ಸಂಗ್ರಹಿಸಿದರು. ನಿಗಮದ ನಿರ್ದೇಶಕಎನ್.ಎಂ. ಧೋಕೆ, ಮುಖ್ಯ ಸಾರ್ವಜನಿಕಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್ ಸೇರಿದಂತೆಇತರ ಅಧಿಕಾರಿಗಳು ಸಾಥ್ ನೀಡಿದರು.ಅದೇ ರೀತಿ, ಬಿಎಂಟಿಸಿಯಿಂದ ಮೊದಲ ದಿನಎರಡು ಸಾವಿರ ಬಸ್‌ಗಳನ್ನು ರಸ್ತೆಗಿಳಿಸಲುಉದ್ದೇಶಿಸಲಾಗಿತ್ತು. ಆದರೆ, ನಿರೀಕ್ಷೆ ಮೀರಿ ಅಂದರೆಸಂಜೆವರೆಗೆ 3,154 ಬಸ್‌ಗಳು ಕಾರ್ಯಾಚರಣೆಮಾಡಿದವು. ಸಾಮಾನ್ಯ ದಿನಗಳಿಗೆ ಹೋಲಿಸಿದರೆ,ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ. ಆದಾಗ್ಯೂಮೆಜೆಸ್ಟಿಕ್ ಸೇರಿದಂತೆ ಕೆಲವೆಡೆ “ಪೀಕ್ ಅವರ್’ನಲ್ಲಿಬಸ್‌ಗಳಿಲ್ಲದೆ ಪರದಾಟ ನಡೆಸಿದರು. ಮಂಗಳವಾರಪ್ರಯಾಣಿಕರದಟ್ಟಣೆಹೆಚ್ಚಿದರೆಮತ್ತಷ್ಟುವಾಹನಗಳನ್ನುರಸ್ತೆಗಿಳಿಸುವುದಾಗಿ ಸಂಸ್ಥೆ ತಿಳಿಸಿದೆ.