Advertisement

ಸುಧೀರ್ ಘಾಟೆ ಅವರ ನಿಧನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ

07:01 PM Oct 22, 2021 | Team Udayavani |

ಬೆಂಗಳೂರು: ಮಂಗಳೂರು ಜಾಹೀರಾತು ಸಂಸ್ಥೆ ಮ್ಯಾಗನಮ್ ಇಂಟರ್ ಗ್ರಾಫಿಕ್ಸ್‌ ನ ಮಾಲಕರಾಗಿದ್ದ ಸುಧೀರ್ ಘಾಟೆ ಅವರ ನಿಧನಕ್ಕೆ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾದ್ಯಕ್ಷರು, ಕರ್ನಾಟಕ ವಿಧಾನಸಭೆ, ತಮ್ಮ ಸಂತಾಪವನ್ನು ತಿಳಿಸಿರುತ್ತಾರೆ.

Advertisement

ಆರ್.ಎಸ್.ಎಸ್  ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿ, 1992ರಲ್ಲಿ ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್ ಜಾಹೀರಾತು ಸಂಸ್ಥೆಯನ್ನು ಆರಂಭಿಸಿ, ಜಾಹೀರಾತು ಕ್ಷೇತ್ರದಲ್ಲಿ ದಿಗ್ಗಜನಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿಯಾಗಿದ್ದರು.

ಸಾವಿರಾರು ಮಂದಿಗೆ ಉದ್ಯೋಗದಾತರಾಗಿ ಸುಮಾರು 500ಕ್ಕಿಂತಲೂ ಹೆಚ್ಚು ಮಂದಿ ನುರಿತ ಕೆಲಸಗಾರರನ್ನು ತನ್ನ ಗಡಿಯಲ್ಲಿ ಪಳಗಿಸಿದ್ದರು.

1995ರಲ್ಲಿ ಈಗಿನ ವಿಧಾನ ಸಭಾ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ, ಕಾಗೇರಿಯವರು ಭಾರತೀಯ ಜನತಾ ಪಾರ್ಟಿಯ ರಾಜ್ಯ ಯುವ ಮೋರ್ಚಾದ   ಅದ್ಯಕ್ಷರಾಗಿದ್ದ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಪಿ.ಆರ್.ಐ ಎಸ್ ನ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ:ಬೈಕ್ 150 ಸಿಸಿಗಿಂತ ಹೆಚ್ಚಿನದ್ದಾಗಿದ್ದರೆ ಇನ್ಶುರೆನ್ಸ್‌  ಕ್ಲೈಮ್  ಆಗುವುದಿಲ್ಲವೇ..?

Advertisement

ರಾಷ್ಟ್ರ ಮಟ್ಟದ ನಾಯಕರಾದ  ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್, ‌ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರಂತಹ ಹಿರಿಯರ ಒಡನಾಟದಲ್ಲಿ ಸುಧಿರ್ ಘಾಟೆಯವರಿದ್ದರು.

ಸುಧೀರ್ ಘಾಟೆಯವರ ನಿಧನದಿಂದ, ಜಾಹಿರಾತು ಕ್ಷೇತ್ರದ ಹಿರಿಯ ಚೇತನವೊಂದನ್ನು ಕಳೆದುಕೊಂಡಂತಾಗಿದೆ.

ಇವರು ಅಗಲಿಕೆಯಿಂದಾದ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next