ಬೆಂಗಳೂರು: ವಿಶ್ವದಲ್ಲಿಯೇ ಅತ್ಯಂತ ಕಠಿಣಬೈಸಿಕಲ್ ರೇಸ್ ಆದ, ರೇಸ್ ಅಕ್ರಾಸ್ ಅಮೆರಿಕ(ರಾಮ್) ಸಂಪೂರ್ಣಗೊಳಿಸಿದ ಭಾರತೀಯಯೋಧವೈದ್ಯ, ಅಲ್ಟ್ರಾ ಸೈಕ್ಲಿಸ್ಟ್ ಡಾ. ಶ್ರೀನಿವಾಸಗೋಕುಲನಾಥ ಇತ್ತೀಚೆಗೆ ಕರ್ನಾಟಕದ ಸುತ್ತ 2250ಕಿ.ಮೀ ದೂರದ ರೇಸ್ ಅನ್ನು ಪೂರ್ಣಗೊಳಿಸಿದ್ದಾರೆ.
ಬೆಂಗಳೂರಿನಿಂದ ಪ್ರಾರಂಭಿಸಿದ ಸೈಕಲ್ ರೇಸ್‌ಅನ್ನು ಕೋಲಾರ, ಮುಳಬಾಗಿಲು, ಶಿರಾ, ಚಿತ್ರದುರ್ಗ,ಬಳ್ಳಾರಿ, ರಾಯಚೂರು, ಬೀದರ್, ಕಲಬುರ್ಗಿ,ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಾರವಾರ,ಮಂಗಳೂರು, ಉಡುಪಿ, ಮಡಿಕೇರಿ ಮೂಲಕ ಪುನಃಬೆಂಗಳೂರಿಗೆ ತಲುಪಿ, ಕೇವಲ ನಾಲ್ಕೇ ದಿನಗಳಲ್ಲಿ ಸುಮಾರು 2,250 ಕಿ.ಮೀ ದೂರದ ಪ್ರಯಾಣ ಮಾಡಿಅಚ್ಚರಿ ಮೂಢಿಸಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿ, ವಿದ್ಯಾಭ್ಯಾಸಮುಗಿಸಿರುವ ಗೋಕುಲನಾಥ್,ಡಾ. ಬಿ.ಆರ್. ಅಂಬೇಡ್ಕರ್‌ವೈದ್ಯ ಕೀಯ ಕಾಲೇಜಿನಲ್ಲಿಎಂಬಿ ಬಿಎಸ್ ಮುಗಿಸಿ,2005 ರಲ್ಲಿ ಭಾರತೀಯಸೇನಾ ವೈದ್ಯಕೀಯ ಪಡೆಯಲ್ಲಿ ಆರ್ಮಿ ಮೆಡಿಕಲ್‌ಕಾಪ್ಸ್ì (ಎಎಂಸಿ) ನಲ್ಲಿಉದ್ಯೋಗಸ್ಥರಾದರು ಬಳಿಕ ಏರೋಸ್ಪೇಸ್ ಮೆಡಿಸಿನ್‌ನಲ್ಲಿ ಸ್ನಾತಕೋತ್ತರಪದವಿಯನ್ನು ಪೂರೈಸಿದರು.ತಮ್ಮ ಪ್ರಯಾಣದ ಅನುಭವನ್ನುಉದಯವಾಣಿಯೊಂದಿಗೆ ಹಂಚಿಕೊಂಡ ಅವರು, “ಬೆಂಗಳೂರಿನ ಬೈಸಿಕಲ್ ಕ್ಲಬ್‌ನಲ್ಲಿ ಸದಸ್ಯತ್ವವನ್ನು ಪಡೆದುಸಮಯ ಸಿಕ್ಕಾಗೆಲ್ಲಾ ಸೈಕ್ಲಿಂಗ್ ಮಾಡುತ್ತಿದ್ದೆ. ಸೈಕ್ಲಿಂಗ್‌ಪ್ರಯಾಣದ ದೂರವನ್ನು ಹೆಚ್ಚಿಸುತ್ತಾ, ಸಾವಿರಾರುಕಿ.ಮೀ ದೂರದ ರೇಸ್‌ಅನ್ನು ಒಬ್ಬಂಟಿಯಾಗಿ ಪ್ರಾರಂಭಿಸಿದೆ.
ರೇಸ್ ಮಾಡುವಾಗ ಕೇವಲ ದ್ರವಆಹಾರ, 16ರಿಂದ 17 ಲೀಟರ್ ನೀರು, ಕೆಲಮೊಮ್ಮೆಅನ್ನ- ಮೊಸರು ಸೇವಿಸುತ್ತೇನೆ’ ಎಂದರು.ಶ್ರೀನಗರದಲ್ಲಿ ಸೇನಾ ವೈದ್ಯಕೀಯದಲ್ಲಿ ಕಾರ್ಯನಿರ್ವಹಿಸುತ್ತ, ಪ್ರತಿನಿತ್ಯ 3 ಕಿ.ಮೀ ಪ್ರದೇಶದಲ್ಲಿಯೇಗಂಟೆಗಟ್ಟಲೇ ಅಭ್ಯಾಸ ನಡೆಸುತ್ತಿದ್ದೆ. ಬಳಿಕ ಅನೇಕಸೈಕ್ಲಿಂಗ್ ರೇಸ್‌ಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ.ಲೇಹ್‌ನಿಂದ ಕನ್ಯಾಕುಮಾರಿವರೆಗೆ ಕೇವಲ 15 ದಿನಗಳು17 ಗಂಟೆಗಳ ಕಾಲ ಸೈಕಲ್ ಸವಾರಿ ನಡೆಸಿದೆ. ಇದುಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಆಗಿದೆ.
ನಂತರ ಪುಣೆಯಿಂದ ಗೋವಾವರೆಗೆ ರೇಸ್‌ಮತ್ತು ಅಮೆರಿಕದಾದ್ಯಂತ ವಾರ್ಷಿಕ 4600 ಕಿ.ಮೀಅಲ್ಟ್ರಾ ಸೈಕ್ಲಿಂಗ್ ರೇಸ್, 2015 ಮತ್ತು 2016ರಲ್ಲಿ ಡೆಕ್ಕನ್‌ಕ್ಲಿಫ್ಹೇಂಜರ್‌ನಲ್ಲಿ ಭಾಗವಹಿಸಿದೆ. ಇದರಿಂದ ರಾಮ್‌ನಲ್ಲಿ ಭಾಗವಹಿಸಲು ಅರ್ಹತೆ ಸಿಕ್ಕಿತು.2016ರಲ್ಲಿ ರೇಸ್ ಅಕ್ರಾಸ್ ಅಮೆರಿಕ (ರಾಮ್)ದಲ್ಲಿ ಭಾಗವಹಿಸಲು ನಿರ್ಧರಿಸಿದೆ. ಇದೇ ವೇಳೆಗೆಶ್ರೀನಗರದಿಂದ ನಾಸಿಕ್‌ಗೆ ವರ್ಗವಾಯಿತು. ಅಲ್ಲಿಸೈಕ್ಲಿಂಗ್ ಅಭ್ಯಾಸ ನಡೆಸಿ, ತರಬೇತಿಯನ್ನು ಪಡೆದುರಾಮ್‌ನಲ್ಲಿ ಭಾಗವಹಿಸಿದೆ. ಆದರೆ, ಸಮಯದಅಭಾವದಿಂದಾಗಿ 10 ದಿನಗಳು 21 ಗಂಟೆಗಳ ಕಾಲಸೈಕ್ಲಿಂಗ್ ನಡೆಸಿ ಅರ್ಧಕ್ಕೆ ನಿಲ್ಲಿಸಿದೆ.
ನಂತರ 2017ರಲ್ಲಿಸದೃಢವಾಗಿ ನಿಂತು 10 ತಿಂಗಳು ಅನುಭವಿ ರೇಸರ್‌ಗಳ ಬಳಿ ತರಬೇತಿ ಪಡೆದೆ. ಆದರೆ ವೈಯಕ್ತಿಕವಾಗಿಅನೇಕ ಸಮಸ್ಯೆಗಳು ಎದುರಾದವು. ಸವಾಲುಗಳೆಂದುಸ್ವೀಕರಿಸಿ, ಸತತ ಅಭ್ಯಾಸ, ಕಠಿಣ ಪರಿಶ್ರಮದ ಮೂಲಕರಾಮ್‌ನಲ್ಲಿ ಭಾಗವಹಿಸಲು ಅಮೆರಿಕದತ್ತ ಪಯಣ ಬೆಳೆಸಿದೆ ಎಂದರು.
ಅಮೆರಿಕದಲ್ಲಿ 12 ರಾಜ್ಯಗಳಾದ್ಯಂತ 3,000ಮೈಲಿ(4,900 ಕಿ.ಮೀ)ಗಳನ್ನು ಕೇವಲ 11 ದಿನ, 18ಗಂಟೆ 45 ನಿಮಿಷಗಳಲ್ಲಿ ಸೈಕ್ಲಿಂಗ್ ಮಾಡಲಾಯಿತು.ರಾಮ್‌ನಲ್ಲಿ ಭಾಗವಹಿಸಿದ 44 ರೇಸರ್‌ಗಳಲ್ಲಿ 9ಜನರು ಮಾತ್ರ ಪ್ರಯಾಣ ಪೂರ್ಣಗೊಳಿದರು.ಅದರಲ್ಲಿ 7ನೇ ಸ್ಥಾನ ಶ್ರೀನಿವಾಸ್ ಅವರದ್ದಾಗಿತ್ತು.ಇಡೀ ಭಾರತದಲ್ಲೇ ರೇಸ್ ಸಂಪೂರ್ಣಗೊಳಿಸಿದಮೊದಲ ಸೈಕ್ಲಿಸ್ಟ್ ಎಂಬ ಹೆಗ್ಗಳಿಕೆಗೆ ಅವರದ್ದಾಗಿದೆ.
ಭಾರತಿ ಸಜ್ಜನ್