ಬೆಂಗಳೂರು: ನಗರ ಜಿಲ್ಲೆಯ ಎಲ್ಲ ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಕೂಡಲೇ ಒತ್ತುವರಿತೆರವುಗೊಳಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೆ.ಜೆ. ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಸೋಮವಾರ ಕೆರೆಗಳ ಅಭಿವೃದ್ಧಿ ಕುರಿತುಅಧಿಕಾರಿಗಳ ಸಭೆ ನಡೆಸಿದ ಅವರು,ಕೆರೆಗಳನ್ನು ಶಾಶ್ವತ ಆಸ್ತಿಯನ್ನಾಗಿಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆಸುರಕ್ಷಿತ ಪರಿಸರ ಉಳಿಸುವುದು ನಮ್ಮಜವಾಬ್ದಾರಿಯಾಗಿದೆ ಎಂದರು
.ಕೆರೆಗಳ ಗಡಿ ಗುರುತಿಸಿ, ಅದರ ಸುತ್ತಇರುವ ಬಫರ್‌ಝೊàನ್ ಪ್ರದೇಶದಲ್ಲಿಕಟ್ಟಡ ಅಥವಾ ಇತರೆ ಕಾಮಗಾರಿಗಳಿಗೆಯಾವುದೇ ರೀತಿಯ ಅನುಮತಿನೀಡುವಂತಿಲ್ಲ. ಕೆರೆ ಒತ್ತುವರಿ ಸಂಬಂಧಸರ್ವೇ ನಡೆಸಿ ಮಾಹಿತಿ ನೀಡುವಂತೆತಾಕೀತು ಮಾಡಿದರು.ಜತೆಗೆ ಕೆರೆಗಳಿಗೆ ನೀರು ಪೂರೈಸುವರಾಜಕಾಲುವೆಗಳ ಒತ್ತುವರಿಯನ್ನೂಕೂಡಲೆ ತೆರವುಗೊಳಿಸಬೇಕು. ಈ ಬಗ್ಗೆಮಂಗಳವಾರದ ಒಳಗೆ ಸಂಪೂರ್ಣಕಾರ್ಯನಿರ್ವಹಿಸಲು ವೇಳಾಪಟ್ಟಿಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆಅಧಿಕಾರಿಗಳಿಗೆ ಸೂಚಿಸಿದರು.
ಕೆರೆ ಬಗ್ಗೆ ಸಮೀಕ್ಷೆ ನಡೆಸಿ: ಜಿಲ್ಲೆಯಲ್ಲಿ ಒಟ್ಟು836 ಕೆರೆಗಳಿವೆ. ಇದರಲ್ಲಿ ಬೃಹತ್‌ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ 204 ಕೆರೆಗಳು,ಸಣ್ಣ ನೀರಾವರಿ ಇಲಾಖೆ 46 ಕೆರೆಗಳು,ಜಿಲ್ಲಾ ಪಂಚಾಯಿತಿ 421, ಬೆಂಗಳೂರುಅಭಿವೃದ್ಧಿ ಪ್ರಾಧಿಕಾರಕ್ಕೆ ಐದು ಹಾಗೂಅರಣ್ಯ ಇಲಾಖೆ ವ್ಯಾಪ್ತಿಗೆ ಒಂದು ಕೆರೆಸೇರುತ್ತದೆ. ಉಳಿದ ಕೆರೆಗಳು ಯಾವಇಲಾಖೆಗೆ ಸೇರುತ್ತವೆ ಎಂಬ ಬಗ್ಗೆನಿರ್ಧರಿಸಲು ಸಮೀಕ್ಷೆ ನಡೆಸಲುಪಂಚಾಯತ್‌ರಾಜ್ ಎಂಜಿನಿಯರಿಂಗ್‌ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳಿಸಿದಲ್ಲಿ ಕೈಗಾರಿಕೆಗಳಿಗೆ ಅವುಗಳನ್ನುಅಭಿವೃದ್ಧಿಪಡಿಸಲು ನೀಡಲಾಗುವುದು.ಹಾಗೆಯೇ ಸರ್ಕಾರದ ಮಟ್ಟದಲ್ಲಿ ಪ್ರತಿ 15ದಿನಗಳಿಗೊಮ್ಮೆ ಕೆರೆ ಅಭಿವೃದ್ಧಿ ಬಗ್ಗೆಪರಿಶೀಲನೆ ನಡೆಯುತ್ತಿದ್ದು, ಅನುಷ್ಠಾನಇಲಾಖೆಗಳು ಕ್ರಿಯಾಶೀಲರಾಗುವುದುಅತ್ಯಗತ್ಯ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅನಿತಾಲಕ್ಷ್ಮೀ, ಉತ್ತರ ವಿಭಾಗಾಧಿಕಾರಿ ರಂಗನಾಥ್,ದಕ್ಷಿಣ ಉಪವಿಭಾಗಾಧಿಕಾರಿ ಡಾ. ಶಿವಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್ ಇದ್ದರು.