ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಅತ್ಯಂತ ಕಷ್ಟ ಮತ್ತುಸವಾಲಿನ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡುಕೋರ್ಟ್ ಕಲಾಪಗಳನ್ನು ಕರ್ನಾಟಕ ಹೈಕೋರ್ಟ್ ಯಶಸ್ವಿಯಾಗಿ ನಿರ್ವಹಿಸಿದೆ ಎಂದು ನೂತನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ವಕೀಲರ ಪರಿಷತ್ತಿನಿಂದ ಸೋಮವಾರ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದಅವರು, ತಂತ್ರಜ್ಞಾನದ ಬಳಕೆಯಲ್ಲಿ ದೇಶದಲ್ಲೇಮುಂಚೂಣಿಯಲ್ಲಿದ್ದ ಕರ್ನಾಟಕ ಹೈಕೋರ್ಟ್,ಹೈಬ್ರಿಡ್ ವಿಧಾನದ ಮೂಲಕ ಯಶಸ್ವಿಯಾಗಿಕಾರ್ಯ ನಿರ್ವಹಿಸಿದೆ. ಸಂಕಷ್ಟದ ಸಮಯದ ನಡುವೆಯೂ ತಂತ್ರಜ್ಞಾನ ಬಳಕೆ ಮಾಡಿಕೊಂಡು ರಾಜ್ಯದನ್ಯಾಯಾಲಯಗಳು ಕಾರ್ಯ ನಿರ್ವಹಿಸಿವೆ.
ವಕೀಲರ ಸಹಕಾರದೊಂದಿಗೆ ನ್ಯಾಯಮೂರ್ತಿಗಳು ಅವಿರತವಾಗಿ ಶ್ರಮಿಸಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿದಾಖಲಾದ ಪ್ರಕರಣಗಳಿಗಿಂತಲೂ ವಿಲೇವಾರಿ ಯಾದ ಪ್ರಕರಣಗಳ ಪ್ರಮಾಣ ಹೆಚ್ಚಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಕನ್ನಡಿಗರು ಶ್ರಮಜೀವಿಗಳು: ಸ್ನೇಹ ಜೀವಿಗಳಾಗಿರುವಕನ್ನಡಿಗರು ಧೈರ್ಯವಂತರು ಹಾಗೂ ಶ್ರಮಜೀವಿಗಳು.ಕನ್ನಡಿಗರ ನೆಲದಲ್ಲಿರುವ ಐತಿಹಾಸಿಕ ಕರ್ನಾಟಕ ಹೈಕೋರ್ಟ್‌ನಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿರುವುದು ಸಂತಸ ಉಂಟು ಮಾಡಿದೆ.
ಐತಿಹಾಸಿಕ ಮೈಸೂರು ದಸರಾ ಪ್ರಸ್ತಾಪಿಸಿದಮುಖ್ಯ ನ್ಯಾಯಮೂರ್ತಿಗಳು ಕರ್ನಾಟಕ ರಾಜ್ಯಅಗಾಧ ಶ್ರೀಮಂತ ಸಂಸ್ಕೃತಿ ಹಾಗೂ ಸಂಪ್ರಾದಾಯಗಳನ್ನು ಹೊಂದಿದೆ. ಮೊದಲ ಬಾರಿಗೆ ರಾಜ್ಯಕ್ಕೆಆಗಮಿಸಿದಾಗ ಸಿಕ್ಕ ಆತಿಥ್ಯ ಮತ್ತು ಗೌರವಗಳುಅದಕ್ಕೆ ಸಾಕ್ಷಿಯಾಯಿತು ಎಂದರು.ಕರ್ನಾಟಕ ಹೈಕೋರ್ಟ್‌ಗೆ ತನ್ನದೇ ಆದ ಭವ್ಯಇತಿಹಾಸವಿದೆ.
ಹಿಂದಿನಿಂದ ಇಂದಿನವರೆಗೆ ಕರ್ನಾಟಕ ಹೈಕೋರ್ಟ್ ಮತ್ತು ಕರ್ನಾಟಕ ನ್ಯಾಯಾಂಗ ದೇಶದನ್ಯಾಯಶಾಸ್ತ್ರ ಮತ್ತು ಕಾನೂನು ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆನೀಡಿದೆ. ಈ ನ್ಯಾಯಾಂಗ ವ್ಯವಸ್ಥೆಯನ್ನು ದೇಶದಉತ್ತಮ ನ್ಯಾಯಾಂಗ ವ್ಯವಸ್ಥೆಯಾಗಿ ರೂಪಿಸಲು ಎಲ್ಲಪ್ರಯತ್ನಗಳನ್ನೂ ಮಾಡುತ್ತೇನೆ ಎಂದು ನ್ಯಾ. ರಿತುರಾಜ್ ಅವಸ್ಥಿಭರವಸೆ ನೀಡಿದರು