Advertisement

ಗ್ರಾಮೀಣ ಪ್ರತಿಭೆ ಗುರುತಿಸುವ ಕೆಲಸ ಆಗಬೇಕು

04:03 PM Sep 06, 2021 | Team Udayavani |

ಬೆಂಗಳೂರು: ಫಿಟ್‌ ಇಂಡಿಯಾ ಯೋಜನೆ ಮೂಲಕ ಗ್ರಾಮೀಣ ಭಾಗದಕ್ರೀಡಾ ಪ್ರತಿಭೆಗಳನ್ನು ಗುರುತಿ ಸುವಕೆಲಸ ಆಗಬೇಕಿದೆ ಎಂದು ಕೇಂದ್ರ ಕ್ರೀಡಾ ಇಲಾಖೆಸಚಿವ ಅನುರಾಗ್‌ ಠಾಕೂರ್‌ ಹೇಳಿದರು.

Advertisement

ಭಾನುವಾರ ಬಿಜೆಪಿ ಕಚೇರಿಗೆ ಭೇಟಿನೀಡಿದ ಅವರುಕ್ರೀಡಾ ಭಾರತಿ ನಿಯೋಗದ ಜೊತೆ ಸಂವಾದನಡೆಸಿದರು. ಈ ವೇಳೆ ಸಚಿವ ಡಾ.ನಾರಾಯಣಗೌಡಅವರು ರಾಜ್ಯ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡಲುಕೈಗೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದರು.ಗ್ರಾಮೀಣ ಪ್ರದೇಶ ಕ್ರೀಡಾ ಪಟುಗಳನ್ನು ಗುರುತಿಸುವ ನಿಟ್ಟಿನಲ್ಲಿ ಕರ್ನಾಟಕ ಕ್ರೀಡಾ ಇಲಾಖೆ ಉತ್ತಮವಾಗಿಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸಚಿವರು ಮೆಚ್ಚುಗೆ ವ್ಯಕಪಡಿ‌ಸಿದರು.

ಖೇಲೋ ಇಂಡಿಯಾ ಕೇಂದ್ರಗಳು ಪ್ರತಿ ಜಿಲ್ಲೆಯಲ್ಲಿಆಗುತ್ತಿದೆ. ತಾ. ಮಟ್ಟದಲ್ಲೂ ಕ್ರೀಡಾಂಗಣಗಳಅಭಿವೃದ್ಧಿಮಾಡಲಾಗುತ್ತಿದೆ. ಕ್ರೀಡಾಂಗಣದಲ್ಲಿ ಹೊರಾಂಗಣಜಿಮ್‌, ಈಜುಕೊಳ, ವೆಲೊಡ್ರೊಮ್‌ ಸೇರಿದಂತೆ ಪ್ರತಿಜಿಲ್ಲೆಯಲ್ಲೂ ಅಗತ್ಯ ಕ್ರೀಡಾ ಸೌಕರ್ಯ ನೀಡಲಾಗುತ್ತಿದೆ.

ಪ್ಯಾರಿಸ್‌ ಓಲಂಪಿಕ್‌ ಗಮನದಲ್ಲಿಟ್ಟು ಕೊಂಡು ಅಮೃತಕ್ರೀಡಾ ದತ್ತು ಯೋಜನೆ ಜಾರಿಗೆ ತರಲಾಗಿದೆ ಎಂದುಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು. ರಾಜ್ಯದಲ್ಲಿಫಿಟ್‌ ಇಂಡಿಯಾ ಯೋಜನೆ ಕನಿಷ್ಠ 1 ಕೋಟಿ ಜನರಿಗೆ ತಲುಪಿಸಬೇಕು. ಇದಕ್ಕಾಗಿ ಕ್ರೀಡಾ ಭಾರತಿ ಹಾಗೂಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಒಟ್ಟಾಗಿಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡಬೇಕು.

ಇದಕ್ಕೆಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಯಸಹಕಾರ ಬೇಕು ಎಂದು ಕ್ರೀಡಾ ಭಾರತಿ ನಿಯೋಗದವರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.ಇರುವ ಕ್ರೀಡಾ ಸೌಕರ್ಯವನ್ನೇ ಬಳಸಿಕೊಂಡುಗ್ರಾಮೀಣಮಟ್ಟಕ್ಕೆ ತಲುಪಲು ಕ್ರೀಡಾ ಭಾರತಿಯಸಹಯೋಗ ಅತ್ಯಗತ್ಯ. ಇದಕ್ಕೆ ಕ್ರೀಡಾ ಇಲಾಖೆಸಂಪೂರ್ಣ ಸಹಕಾರ ನೀಡುತ್ತದೆ. ಓಲಂಪಿಕ್‌ ಹಾಗೂಇತರ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಗ್ರಾಮೀಣಭಾಗದ ಪ್ರತಿಭೆಗಳೇ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆಎಂದು ಸಂತಸ ವ್ಯಕ್ತಪಡಿಸಿದರು.ಅಮೃತ ಕ್ರೀಡಾದತ್ತುಯೋಜನೆಅತ್ಯುತ್ತಮವಾಗಿದೆ.

Advertisement

ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರುಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.ಈಸಂದರ್ಭದಲ್ಲಿ ಕ್ರೀಡಾ ಭಾರತಿಯ ದಕ್ಷಿಣ ಭಾರತಸಂಯೋಜಕ್‌ ಚಂದ್ರಶೇಖರ್‌ ಜಹಗೀರದಾರ್‌,ಕರ್ನಾಟಕ ಪ್ರಾಂತೀಯ ಅಧ್ಯಕ್ಷ ಡಾ. ಲಕ್ಷ್ಮೀಶ್‌,ಕಾರ್ಯದರ್ಶಿ ಬಸವರಾಜ್‌ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next