Advertisement

ಸಿಎಂ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿಸಿದರೆ ಬಿಜೆಪಿಗೆ ತಕ್ಕಪಾಠ

06:12 PM Jul 26, 2021 | Team Udayavani |

ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಸ್ಥಾನದಿಂದಕೆಳಗಿಳಿಸಿದರೆ ಚುನಾವಣೆ ವೇಳೆ ಹೋರಾಟದಹಾದಿ ಹಿಡಿಯಬೇಕಾಗುತ್ತದೆ. ಮುಖ್ಯಮಂತ್ರಿಸ್ಥಾನದಿಂದ ಯಡಿಯೂರಪ್ಪ ಇಳಿಸಿದ್ದೇ ಆದಲ್ಲಿಬಿಜೆಪಿಗೆ ತಕ್ಕಪಾಠ ಕಲಿಸಲಾಗುವುದು ಎಂದುಅಖೀಲ ಭಾರತ ವೀರಶೈವ ಲಿಂಗಾಯತಮಹಾಸಭಾ ತಾಲೂಕು ಅಧ್ಯಕ್ಷ ಬಿ.ಎಸ್‌.ಚಂದ್ರಶೇಖರ್‌ ಹೇಳಿದರು.

Advertisement

ನಗರದ ಬಸವ ಭವನಲ್ಲಿ ಅಖೀಲ ಭಾರತವೀರಶೈವ ಲಿಂಗಾಯತ ಮಹಾಸಭಾ ವತಿಯಿಂದನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಯಡಿಯೂರಪ್ಪ ಅವರು ದಕ್ಷಿಣ ಭಾರತದಲ್ಲಿಬಿಜೆಪಿ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ.ರಾಜ್ಯದಲ್ಲಿ ಕೊರೊನಾ ಅಲೆ ನಿರ್ವಹಣೆಯನ್ನುಸಮರ್ಥವಾಗಿ ನಿಭಾಯಿಸಿದ್ದಾರೆ.

ಕೆಲ ದಿನಗಳಹಿಂದೆ ಸಿಎಂ ಬದಲಾವಣೆ ಚರ್ಚೆ ಹಿನ್ನೆಲೆ ಬಂದಾಗಯಡಿಯೂರಪ್ಪ ಅವರೇ ಪೂರ್ಣಾವಧಿಗೆ ಸಿಎಂಆಗಿ ಮುಂದುವರಿಯುತ್ತಾರೆ ಎಂದು ಹೈಕಮಾಂಡ್‌ಹೇಳಿತ್ತು. ಆದರೆ, ಈಗ ಅದರಂತೆ ನಡೆದುಕೊಳ್ಳುತ್ತಿಲ್ಲ. ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಚುನಾವಣೆ ವೇಳೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ವೀರಶೈವ ಲಿಂಗಾಯತ ಮಹಾಸಭಾವರಿಷ್ಠರ ಹೇಳಿಕೆಗೆ ಎಲ್ಲರೂ ಬದ್ಧರಿದ್ದೇವೆ ಎಂದುಹೇಳಿದರು.

ಬಿಎಸ್ವೈರಿಂದ ಜನಪರ ಕಾರ್ಯ: ಸಂಘದಗೌರವ ಅಧ್ಯಕ್ಷ ಶಿವಾನಂದಪ್ಪ ಮಾತನಾಡಿ,ಮೂರನೆ ಬಾರಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರ ಜನಪರ ಕಾರ್ಯದಿಂದಅವರನ್ನು ಬದಲಿಸಲು ರಾಜ್ಯದಲ್ಲಿ ವಿರೋಧ ವ್ಯಕ್ತವಾ ಗುತ್ತಿದೆ. ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿರುವ ಯಡಿಯೂರಪ್ಪ ಶ್ರಮ ಅಪಾರವಾಗಿದೆ. ಯಡಿಯೂರಪ್ಪ ಉತ್ತಮ ಹೆಸರನ್ನುಹೊಂದಿರುವ ವ್ಯಕ್ತಿಯಾಗಿದ್ದಾರೆ.  ಅಂಬರೀಶ್‌ಸ್ಮಾರಕದ ಕುರಿತು ನಟ ದೊಡ್ಡಣ್ಣ ಹೇಳಿಕೆಯಡಿಯೂರಪ್ಪರ ಜನಪರ ಕಾಳಜಿಗೆಸಾಕ್ಷಿಯಾಗಿದೆ ಎಂದರು.

ಪೂರ್ಣಾವಧಿ ಅಧಿಕಾರ ಅವಕಾಶ ನೀಡಿ:ಮುಖಂಡ ದಯಾನಂದ್‌ ಮಾತನಾಡಿ, ಯಡಿಯೂರಪ್ಪರ ಪೂರ್ಣಾವಧಿಗೆ ಅಧಿಕಾರ ನಡೆಸಲುಅವಕಾಶ ನೀಡಬೇಕಿದೆ. ಬಿಜೆಪಿ ಆಂತರಿಕವಿಚಾರವಾದರೂ ಈ ಸಂದರ್ಭದಲ್ಲಿ ಬದಲಾವಣೆಸಮಂಜಸವಲ್ಲ. ಧರ್ಮ ಒಡೆಯಲು ಅವಕಾಶನೀಡದ ಕಾರಣವೇ ಯಡಿಯೂರಪ್ಪರಿಗೆ ಇಷ್ಟುಜನ ಬೆಂಬಲ ಸಿಗಲು ಕಾರಣ ಎಂದು ಹೇಳಿದರು.ಉತ್ತಮ ಆಡಳಿತ: ಅಖೀಲ ಭಾರತ ವೀರಶೈವಲಿಂಗಾಯತ ಮಹಾಸಭಾ ತಾಲೂಕು ಘಟಕದರಮೇಶ್‌ ಮಾತನಾಡಿ, ಉತ್ತಮ ಆಡಳಿತನೀಡುತ್ತಿರುವ ಯಡಿಯೂರಪ್ಪ ಅವರನ್ನು ಸಿಎಂಸ್ಥಾನದಿಂದ ಕೆಳಗಿಳಿಸದೆ, ಅವಧಿ ಪೂರ್ಣಗೊಳಿಸಲುಹೈಕಮಾಂಡ್‌ ಅವಕಾಶ ನೀಡಬೇಕು ಎಂದುಹೇಳಿದರು.

Advertisement

ಸಂಘದ ಜಿಲ್ಲಾ ಉಪಾಧ್ಯಕ್ಷ ಮುನಿರಾಜು,ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜಯ್ಯ, ಉಪಾಧ್ಯಕ್ಷ ಮಾದೇವಯ್ಯ, ಶಿವಕುಮಾರ್‌,ಖಜಾಂಚಿ ನಂದೀಶ್‌, ಕಾರ್ಯದರ್ಶಿ ರಮೇಶ್‌,ದಾûಾಯಿಣಿ, ವಿಶ್ವನಾಥ್‌, ಮಹಿಳಾ ಘಟಕದತಾಲೂಕು ಖಜಾಂಚಿ ಶಶಿಕಲಾ ನಾಗರಾಜ್‌,ಮಹಿಳಾ ಘಟಕದ ಲತಾ, ಭವ್ಯ, ಮಂಜುಳಾ,ವಿರುಪಾಕ್ಷಯ್ಯ, ಕೊನಘಟ್ಟ ಗ್ರಾಪಂ ಸದಸ್ಯಪ್ರಭಾಕರ್‌, ಸದಾಶಿವಯ್ಯ, ಚರಣ್‌, ಮುಖಂಡಪುಟ್ಟರುದ್ರಪ್ಪ ಮತ್ತು ತಾಲೂಕು ಘಟಕದಪದಾಧಿಕಾರಿಗಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next