Advertisement
ಜನರ ಪ್ರಾಣ ರಕ್ಷಣೆಯ ಧಾವಂತದಲ್ಲಿ ಅನೇಕ ಪೊಲೀಸರು ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರ ಆರೋಗ್ಯ ಸ್ಥಿತಿ, ದೈಹಿಕ ಸಾಮರ್ಥ್ಯದ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತದೆ. ಕೊರೊನಾ ಈ ಕುರಿತು ಇನ್ನಷ್ಟು ಗಮನ ಕೇಂದ್ರೀಕರಿಸುವ ಸ್ಥಿತಿ ನಿರ್ಮಿಸಿದೆ.
Related Articles
Advertisement
ಅಲ್ಲದೆ, ಸೋಂಕಿಗೊಳಗಾದ ಅಧಿಕಾರಿ-ಸಿಬ್ಬಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಡ್ರೈಫೂಲÅಟ್ಸ್ ಹಾಗೂ ಕೊರೊನಾ ಕಿಟ್ಗಳನ್ನು ನಗರ ಪೊಲೀಸ್ ಆಯುಕ್ತರ ಕಡೆಯಿಂದ ನೀಡಿ ಧೈರ್ಯ ತುಂಬಲಾಗುತ್ತಿದೆ.
ರೈಲ್ವೆ ಅಧಿಕಾರಿ–ಸಿಬ್ಬಂದಿ ಆನ್ಲೈನ್ ಯೋಗಾಭ್ಯಾಸ: ನಾಗರೀಕ ಪೊಲೀಸರಂತೆ ರೈಲ್ವೆ ಪೊಲೀಸರು ಹೆಚ್ಚು ಕಾರ್ಯದೊತ್ತಡದಲ್ಲಿರುತ್ತಾರೆ. ರೈಲು ನಿಲ್ದಾಣ, ರೈಲುಗಳ ಭದ್ರತೆಗಾಗಿ ರೈಲುಗಳಲ್ಲಿ ದಿನಗಟ್ಟಲೇ ಪ್ರಯಾಣಿಸುವ ಅಧಿಕಾರಿ-ಸಿಬ್ಬಂದಿಯ ಆಹಾರ ಪದ್ದತಿಯಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಈ ಕುರಿತು ಬೆಂಗಳೂರು ಸೇರಿ ರಾಜ್ಯದ ರೈಲ್ವೆ ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ-ಸಿಬ್ಬಂದಿ ಯೋಗಭ್ಯಾಸ ಮಾಡಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಡಿಜಿಪಿ ಭಾಸ್ಕರ್ ರಾವ್, ಎಸ್ಪಿ ಸಿರಿಗೌರಿ ಮಾರ್ಗದರ್ಶನದಲ್ಲಿ ಇಶಾ ಫೌಂಡೇಶನ್ ಸಂಸ್ಥೆ ರೈಲ್ವೆ ಅಧಿಕಾರಿ-ಸಿಬ್ಬಂದಿಗೆ ವಾರಕ್ಕೊಮ್ಮೆ ಆನ್ಲೈನ್ ಮೂಲಕ ಯೋಗಭ್ಯಾಸಕ್ಕೆ ಸೂಚಿಸಲಾಗಿದೆ. ಪ್ರತಿಭಾನುವಾರ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆಗಳ ಕಾಲ ಸಿಬ್ಬಂದಿ ಇರುವಲ್ಲಿಯೇ ಯೋಗಭ್ಯಾಸದಲ್ಲಿ ತೊಡಬೇಕೆಂದು ಸೂಚಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಸಿರಿಗೌರಿ ಅವರು, ರೈಲ್ವೆ ಸಿಬ್ಬಂದಿ ಕಾರ್ಯನಿಮಿತ್ತ ಹೊರಗಡೆ ಹೋದರೆ ಎರಡೂ¾ರು ದಿನಗಳ ಕಾಲ ವಾಪಸ್ ಬರಲಾಗದು. ಹೀಗಾಗಿ ಇಶಾ ಫೌಂಡೇಶನ್ನಿಂದ ಆನ್ಲೈನ್ ತರಗತಿಗೆ ಸೂಚಿಸಿದ್ದು, ಫೌಂಡೇಶನ್ ಅವರು ಆನ್ಲೈನ್ ಲಿಂಕ್ ಕಳುಹಿಸುತ್ತಾರೆ. ಅದರಂತೆ ಎಲ್ಲರೂ ಯೋಗದಲ್ಲಿ ತೊಡಗುತ್ತಾರೆ. 8-10 ತಿಂಗಳಿಂದ ಯೋಗಭ್ಯಾಸ ಮಾಡುತ್ತಿದ್ದು, ಕೆಲವರು ಸ್ವಯಂ ಪ್ರೇರಿತವಾಗಿ ಮನೆ ಅಥವಾ ತಾವು ಉಳಿದುಕೊಂಡಿರುವ ಸ್ಥಳದಲ್ಲೇ ಆಭ್ಯಾಸದಲ್ಲಿ ನಿರತರಾಗಿದ್ದಾರೆ.
ಮೋಹನ್ ಭದ್ರಾವತಿ