ಬೆಂಗಳೂರು: ರಾಜ್ಯದ ಗೃಹ ಇಲಾಖೆಯಲ್ಲಿ ಕನ್ನಡವನ್ನು ಎಲ್ಲಾ ಹಂತಗಳಲ್ಲೂ ಜಾರಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲೂ “”ಕನ್ನಡಕವಾಯತು”ಅನುಷ್ಠಾನಕ್ಕೆ ತರಲು ಕೂಡಲೇ ಅಗತ್ಯಕ್ರಮಕೈಗೊಳ್ಳುವಂತೆ ಸಂಬಂ ಧಪಟ್ಟವರಿಗೆಸೂಚಿಸಿ ಸುತ್ತೋಲೆಗಳನ್ನು ಹೊರಡಿಸುವಂತೆ ಕನ್ನಡ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷರಾದಟಿ.ಎಸ್. ನಾಗಾಭರಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾನೂನು, ಸಂಸದೀಯವ್ಯವಹಾರಗಳು ಮತ್ತು ಶಾಸನಮತ್ತು ಗೃಹ ಇಲಾಖಾಸಚಿವರಾದ ಬಸವರಾಜ ಬೊಮ್ಮಾಯಿಅವರನ್ನು ಒತ್ತಾಯಿಸಿ ನಾಗಾಭರಣ ಪತ್ರ ಬರೆದಿದ್ದಾರೆ.ಮುಖ್ಯಮಂತ್ರಿಗಳು ನ.1ರಂದುಒಂದು ವರ್ಷದ ಕಾಲ ಕನ್ನಡ ಕಾಯಕವರ್ಷಾಚರಣೆ ಎಂದು ಘೋಷಿಸಿದ್ದು, ಮುಂಬರುವ ನ.1ರಂದು ಮತ್ತುಅ.31ರಂದುನಡೆಯಲಿರುವಕನ್ನಡ ಕಾಯಕ ವರ್ಷದಸಮಾರೋಪದಲ್ಲಿಕನ್ನಡದಲ್ಲಿಕವಾಯತನ್ನುಹಮ್ಮಿಕೊಳ್ಳುವಅಗತ್ಯವಿದೆ.
ಈ ಹಿನ್ನೆಲೆಯಲ್ಲಿಕನ್ನಡದಲ್ಲಿ ಕವಾಯತುನಡೆಸುವ ಸಂಬಂಧ ತರಬೇತಿನೀಡಲು ಸಂಬಂಧಿಸಿದ ಅಧಿಕಾರಿಗಳಿಗೆಸಿದ್ಧತೆ ಮಾಡಿಕೊಳ್ಳಲು ಸೂಚನೆನೀಡುವಂತೆ ಆಗ್ರಹಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕನ್ನಡದಲ್ಲಿ ಭಾಷಾಂತರಿಸಿ ರೂಪಿಸಿರುವಕವಾಯತಿನಆದೇಶಗಳು ಎಲ್ಲಾ ರೀತಿಯಲ್ಲೂಕವಾಯತನ್ನು ನಿರ್ವಹಿಸಲು ಸಮರ್ಥವಾಗಿದ್ದು, ಪ್ರಾಯೋಗಿಕವಾಗಿಯೂ ಯಶಸ್ವಿಯಾಗಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇದೇ ಮಾದರಿಯನ್ನುಅಳವಡಿಸಿಕೊಳ್ಳಲು ಅಂದಿನ ಗೃಹಸಚಿವರಿಗೂ ಕೋರಲಾಗಿತ್ತು ಎಂದುಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ಸರ್ಕಾರದ ಆಡಳಿತ, ಶಿಕ್ಷಣ,ತಂತ್ರಜ್ಞಾನ ಮತ್ತು ಇತರ ಎಲ್ಲಾ ವಲಯಗಳಲ್ಲಿ ಕನ್ನಡವನ್ನುಸಂಪೂರ್ಣವಾಗಿ ಅನುಷ್ಠಾನಗೊಳಿಸುವಬಗ್ಗೆ ಸರ್ಕಾರ ಹಲವು ಆದೇಶಗಳನ್ನುಹೊರಡಿಸಲಾಗಿರುತ್ತದೆ. ಗೃಹಇಲಾಖೆಯ ಆಡಳಿತದಲ್ಲಿಯೂ ಕನ್ನಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಕುರಿತಂತೆ ಬೆಳಗಾವಿ ಜಿಲ್ಲೆಯಲ್ಲಿ “”ಕನ್ನಡಕವಾಯತು” ಜಾರಿಗೊಳಿಸಿರುವುದು ಪ್ರಶಂಸನೀಯವಾದುದು ಎಂದುಅಧ್ಯಕ್ಷರು ಹೇಳಿದ್ದಾರೆ. ಕನ್ನಡ ಕಾಯಕವರ್ಷಕ್ಕೆ ಕರ್ನಾಟಕದ್ಯಾದ್ಯಂತ ಕನ್ನಡಕವಾಯತು ಹಮ್ಮಿಕೊಳ್ಳುವಂತೆ ಒತ್ತಾಯಿಸಿದ್ದಾರೆ.