ಬೆಂಗಳೂರು: ನಗರದ ಮತ್ತಿಕೆರೆಯಲ್ಲಿರುವ ಜೆಪಿ ಪಾಕ್ìಗೆ ಸೇರಿದ ಜಾಗದಲ್ಲಿ ನಿರ್ಮಾಣ ಮಾಡಲಾಗುತ್ತಿರುವಮಾರುಕಟ್ಟೆಕಟ್ಟಡ ಇರುವ ಜಾಗದ ಸರ್ವೆ ನಡೆಸುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಉದ್ಯಾನ ಜಾಗದಲ್ಲಿ ಮಾರುಕಟ್ಟೆ ನಿರ್ಮಾಣಮಾಡಲಾಗುತ್ತಿದೆ ಎಂದು ಆರೋಪಿಸಿಸಲ್ಲಿಸಲಾಗಿರುವ ಸಾರ್ವಜನಿಕಹಿತಾಸಕ್ತಿಅರ್ಜಿವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಎ.ಎಸ್. ಓಕಾ ಅವರ ನೇತೃತ್ವದ ವಿಭಾಗೀಯನ್ಯಾಯಪೀಠ ಜು.28ರಂದು ವಿವಾದಿತ ಜಾಗದಸರ್ವೆ ನಡೆಸುವಂತೆ ಬಿಬಿಎಂಪಿಗೆ ಸೂಚಿಸಿತು.
ಸರ್ವೆನಡೆಸುವಾಗಅರ್ಜಿದಾರರುಹಾಜರಿರಬೇಕು.ಒಂದೊಮ್ಮೆ ಅರ್ಜಿದಾರರು ಹಾಜರಾಗದಿದ್ದರೂ ಸರ್ವೆನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು. ಪಾರ್ಕ್‌ಗೆ ಸೇರಿದ ಆಟದ ಮೈದಾನದಲ್ಲಿ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ.ಇದರಿಂದ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಅರ್ಜಿಯಲ್ಲಿಆಕ್ಷೇಪಿಸಲಾಗಿತ್ತು.
ಅದನ್ನು ಅಲ್ಲಗೆಳೆದಿದ್ದ ಬಿಬಿಎಂಪಿ,ಮಾರುಕಟ್ಟೆ ಕಟ್ಟಡವನ್ನು ಜೆಪಿ ಪಾರ್ಕ್ ಜಾಗದಲ್ಲಿನಿರ್ಮಿಸುತ್ತಿಲ್ಲ. ಪಾರ್ಕ್‌ನಿಂದ 300 ಮೀ. ದೂರದಲ್ಲಿಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ, ಪಾರ್ಕ್ ಸುತ್ತಲೂಕಾಂಪೌಂಡ್ ನಿರ್ಮಿಸಲಾಗಿದೆ ಎಂದು ತಿಳಿಸಿತ್ತು.ಟೆಂಡರ್‌ನಲ್ಲಿ ಕಾಮಗಾರಿ ನಡೆಸುತ್ತಿರುವ ಜಾಗವನ್ನುಜೆಪಿ ಪಾರ್ಕ್ ಎಂದು ನಮೂದಿಸಿರುವುದನ್ನು ಗಮನಿಸಿದ ನ್ಯಾಯಪೀಠ, ಕಟ್ಟಡ ನಿರ್ಮಾಣ ಕಾಮಗಾರಿಗೆ2020ರ ಅಕ್ಟೋಬರ್‌ನಲ್ಲಿ ಮಧ್ಯಂತರ ತಡೆಯಾಜ್ಞೆನೀಡಿತ್ತು.
ಅಲ್ಲದೆ, ಮಾರುಕಟ್ಟೆ ಕಟ್ಟಡ ಪಾರ್ಕ್‌ಜಾಗದಿಂದ ಎಷ್ಟು ದೂರದಲ್ಲಿದೆ ಎಂಬುದನ್ನು ಸ್ಪಷ್ಟವಾಗಿತಿಳಿಯಬೇಕಿದೆ. ಹೀಗಾಗಿ, ಉದ್ಯಾನ ಮತ್ತುಮಾರುಕಟ್ಟೆಯ ಜಾಗವನ್ನು ಸರ್ವೆ ನಡೆಸಿ ವರದಿಸಲ್ಲಿಸುವಂತೆ ಬಿಬಿಎಂಪಿಗೆ ಈ ಹಿಂದೆ ಸೂಚಿಸಿತ್ತು. ಆದರೆಅರ್ಜಿದಾರರ ಸಮ್ಮುಖದಲ್ಲಿ ಸರ್ವೆ ನಡೆಸಿರಲಿಲ್ಲ.ಹೀಗಾಗಿ ಜುಲೈ 28ರಂದು ಸರ್ವೆ ನಡೆಸುವಂತೆಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ.