ಬೆಂಗಳೂರು: ಕೊರೊನಾ ಆತಂಕದ ನಡುವೆಯೇನಗರದ ಪಿಇಎಸ್ ವಿಶ್ವವಿದ್ಯಾಲಯವುವಿದ್ಯಾರ್ಥಿಗಳಿಗೆಪ್ಲೇಸ್‌ಮೆಂಟ್‌ದೊರಕಿಸಿಕೊಡುವಲ್ಲಿಹೊಸ ಮೈಲಿಗಲ್ಲೊಂದನ್ನು ಸಾಧಿಸಿದೆ.
ಈ ಹಿಂದೆಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ 50ಲಕ್ಷ ರೂ. ವಾರ್ಷಿಕ ಪ್ಯಾಕೇಜ್ ಪಡೆದಿದ್ದ, ಈಗಮತ್ತೂಬ್ಬ ವಿದ್ಯಾರ್ಥಿ 1.5 ಕೋಟಿ ರೂ. ಪ್ಯಾಕೇಜ್‌ಪಡೆದು ಬೆರಗು ಮೂಡಿಸಿದ್ದಾನೆ.ಈ ಬಾರಿ ಪ್ಯಾಕೇಜ್ ಪಡೆದುಕೊಂಡಿರುವವಿದ್ಯಾರ್ಥಿಯ ಹೆಸರು ಸಾರಂಗ್ ರವೀಂದ್ರ.ಲಂಡನ್ ಮೂಲದ ಕನ್‌ಫ್ಲೆಕ್ಟ್ ಕಚೇರಿಗೆ ಸಾರಂಗ್‌ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿಭಾಗದಸಾರಂಗ್ ಈ ಹಿಂದೆ ಆ ಕಂಪನಿಯಲ್ಲೇ ಇಂಟರ್‌ಶಿಪ್ ಮಾಡಿದ್ದರು. ಆನಂತರ ಅವರನ್ನುಕಂಪನಿಯುಉತ್ತಮ ಪ್ಯಾಕೇಜ್ ನೀಡಿ ಹುದ್ದೆಗೆ ಆಯ್ಕೆಮಾಡಿಕೊಂಡಿದೆ.
ಕಂಪ್ಯೂಟರ್ ಸೈನ್ಸ್ ವಿಭಾಗದಮತ್ತೂರ್ವ ವಿದ್ಯಾರ್ಥಿನಿ ಜೀವನಾ ಹೆಗಡೆ ಅವರುಗೂಗಲ್‌ನಲ್ಲಿ ಕೌÉಡ್ ಕಸ್ಟಮರ್ ಎಂಜಿನಿಯರ್‌ಹುದ್ದೆಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಗೂಗಲ್‌ಆಯೋಜಿಸಿದ್ದ ಜಾಗತಿಕ ಮಟ್ಟದ ಕಾರ್ಯಕ್ರಮಒಂದರಲ್ಲಿ ಭಾಗವಹಿಸಿದ್ದರು. ಆನಂತರದಲ್ಲಿಗೂಗಲ್‌ಅವರಿಗೆಪೂರ್ಣಕಾಲಿಕಉದ್ಯೋಗಿಯಾಗಿನೇಮಕ ಮಾಡಿಕೊಂಡಿದೆ ಎಂದು ಪಿಇಎಸ್ ತಿಳಿಸಿದೆ.
ಈ ಕುರಿತು ಮಾತನಾಡಿದ ಪಿಇಎಸ್‌ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ, ನಮ್ಮ ವಿಶ್ವವಿದ್ಯಾಲಯದವಿದ್ಯಾರ್ಥಿಗಳು ಕೊರೊನಾ ಸಂದಿಗ್ಧತೆಯನಡುವೆಯೂ ಉತ್ತಮ ಸಂಸ್ಥೆಗಳಲ್ಲಿ ಉತ್ಕೃಷ್ಟರೀತಿಯ ಪ್ಯಾಕೇಜ್ ಪಡೆಯುವ ಮೂಲಕ ವಿಶೇಷಸಾಧನೆ ಮಾಡಿದ್ದಾರೆ.
ನಮ್ಮಲ್ಲಿ ವ್ಯಾಸಂಗ ಮಾಡಿದಶೇ.80ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿವಿಧಕಂಪನಿಗಳಲ್ಲಿ ಇಂಟರ್‌ಶಿಪ್ ಪಡೆದುಕೊಂಡಿದ್ದಾರೆ.ಕೊರೊನಾದ ಕಾಲದಲ್ಲಿ 1,283 ವಿದ್ಯಾರ್ಥಿಗಳುವರ್ಚುವಲ್ ಇಂಟರ್‌ಶಿಪ್‌ನಲ್ಲಿ ಪಾಲ್ಗೊಂಡು,ಉದ್ಯೋಗ ಪಡೆದಿದ್ದಾರೆ. ದೇಶ ಹಾಗೂ ವಿದೇಶಗಳ40ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್‌ಸಂದರ್ಶನ ಮಾಡಿವೆ. ಇದರಲ್ಲಿ ಇಂಜಿನಿಯರಿಂಗ್‌ವಿಭಾಗದ 1,377, ಮ್ಯಾನೆಜ್‌ಮೆಂಟ್ ವಿಭಾಗದ165,ಕಾಮರ್ಸ್‌ವಿಭಾಗದ102ಹಾಗೂಫಾರ್ಮಸಿವಿಭಾಗದಿಂದ 96 ವಿದ್ಯಾರ್ಥಿಗಳುಉದ್ಯೋಗಾವಕಾಶ ಪಡೆದಿದ್ದಾರೆ. ಎಂಜಿನಿಯರಿಂಗ್‌ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳುಹೆಚ್ಚಿನ ಉದ್ಯೋಗಾವಕಾಶ ಪಡೆದಿದ್ದಾರೆ ಎಂದುಮಾಹಿತಿ ನೀಡಿದರು