ಬೆಂಗಳೂರು: ಸರ್ಕಾರ ಜನತಾ ಕರ್ಫ್ಯೂನಿಯಮಗಳನ್ನು ಸಡಿಲಿಕೆ ಮಾಡುತ್ತಿದ್ದಂತೆ ಇತ್ತದೇವಾಲಯಗಳಿಗೆ ಭೇಟಿ ನೀಡುತ್ತಿರುವ ಭಕ್ತರಸಂಖ್ಯೆ ದ್ವಿಗುಣಗೊಳ್ಳುತ್ತಿದೆ.ಆಷಾಢ ಮಾಸ ವಾಗಿರುವ ಹಿನ್ನೆಲೆಯಲ್ಲಿಸಾರ್ವಜನಿಕರು ಕೋವಿಡ್ ಸೋಂಕನ್ನು ಲೆಕ್ಕಿಸದೆದೇವರ ದರ್ಶನ ಪಡೆಯುತ್ತಿದ್ದಾರೆ.
ಕಳೆದಶುಕ್ರವಾರ ನಗರದ ಕರಿಯಪ್ಪ ರಸ್ತೆಯಲ್ಲಿರುವಬನಶಂಕರಿ ದೇವಾಯಕ್ಕೆ ಅಧಿಕ ಸಂಖ್ಯೆಯಲ್ಲಿಭಕ್ತರು ಭೇಟಿ ನೀಡಿದ್ದರು. ಸರ್ಕಾರದ ಕೋವಿಡ್‌ಮಾರ್ಗ ಸೂಚಿಯನ್ನು ಪಾಲಿಸದೆ ಸಾಮಾಜಿಕಅಂತರ ಕಾಪಾಡದೆ ಬನಶಂಕರಿ ದೇವಿಯ ದರ್ಶನಪಡೆದಿದ್ದರು.ಇದರಿಂದ ಎಚ್ಚೆತ್ತುಕೊಂಡಿರುವ ಬೆಂಗಳೂರುನಗರ ಜಿಲ್ಲಾಡಳಿತ ಆಷಾಢ ಮಾಸದ ಪ್ರತಿಭಾನುವಾರ, ಮಂಗಳವಾರ ಮತ್ತುಶುಕ್ರವಾರಗಳಂದು ಭಕ್ತರ ದೇವರ ದರ್ಶನವನ್ನುರದ್ದು ಪಡಿಸಿದೆ.
ಹಾಗೆಯೇ ಆಷಾಢ ಅಮಾವಾಸ್ಯೆಮತ್ತು ಹುಣ್ಣಿಮೆ ದಿನಗಳಂದು ಭಕ್ತರ ಪ್ರವೇಶಕ್ಕೆನಿರ್ಬಂಧ ಹೇರುವ ತೀರ್ಮಾನಕೈಗೊಂಡಿದೆ.ಉಳಿದ ದಿನಗಳಲ್ಲಿ ಬೆಳಗ್ಗೆ 7 ಗಂಟೆಯಿಂದಮಧ್ಯಾಹ್ನ 12ಗಂಟೆಯವರೆಗೆ ಮತ್ತು ಸಂಜೆ 4ಗಂಟೆಯಿಂದ ಸಂಜೆ7.30ರ ವರೆಗೆಭಕ್ತರಿಗೆದೇವರದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುವುದುಎಂದು ಬೆಂಗಳೂರು ನಗರ ಜಿಲ್ಲಾಡಳಿ ತಿಳಿಸಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರುನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಕೋವಿಡ್3ನೇ ಅಲೆಯ ಬಗ್ಗೆ ಎಚ್ಚರಿಕೆ ವಹಿಸ ಬೇಕಾಗಿದೆ.
ಆಷಾಢ ಮಾಸವಾಗಿರುವ ಹಿನ್ನೆಲೆಯಲ್ಲಿ ಕೋವಿಡ್‌ಸೋಂಕನ್ನು ಲೆಕ್ಕಿಸದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರುಬನಶಂಕರಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.ಮುನ್ನಚ್ಚರಿಕೆ ಹಿನ್ನೆಲೆಯಲ್ಲಿ ನಗರ ಜಿಲ್ಲಾಡಳಿತ ಭಕ್ತರದರ್ಶನಕ್ಕೆ ಕೆಲ ದಿನ ನಿರ್ಬಂಧ ಹೇರಲುತೀರ್ಮಾನಿಸಿದೆ ಎಂದು ಹೇಳಿದರು.ಆಷಾಢ ಮಾಸದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿದೇವರ ದರ್ಶನ ಪಡೆಯುತ್ತಾರೆ. ಅತಿ ಹೆಚ್ಚುಸಂಖ್ಯೆಯಲ್ಲಿ ಸಾರ್ವಜನಿಕರು ದೇವಾಲಯಕ್ಕೆಭೇಟಿ ನೀಡುವ ಹಿನ್ನೆಲೆಯಲ್ಲಿ ಸಾಲಿನಲ್ಲಿ ದರ್ಶನಕ್ಕೆಅವಕಾಶ ಕಲ್ಪಿಸುವುದು, ಸಾಮಾಜಿಕ ಅಂತರಕಾಪಾಡಿಕೊಳ್ಳುವುದು ಕÐವಾ r ಗಲಿದೆ. ಸಾರ್ವಜನಿಕರು ಕೂಡ ಕೋವಿಡ್ ಸೋಂಕಿನ ಬಗ್ಗೆಎಚ್ಚರದಿಂದ ಇರುವಂತೆ ಮನವಿ ಮಾಡಿದ್ದಾರೆ.
ಆ.8 ವರೆಗೆ ಪ್ರವೇಶಕ್ಕೆ ನಿರ್ಬಂಧ: ಜು.11ರಿಂದಆ.8ರವರೆಗೆ (ಆಷಾಢಭಾನುವಾರ,ಮಂಗಳವಾರ,ಶುಕ್ರವಾರ) ಬನಶಂಕರಿ ದೇವಾಲಯಕ್ಕೆ ಭಕ್ತರಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹಾಗೆಯೇಜು.24 ರ ಆಷಾಢ ಹುಣ್ಣಿಮೆ ಮತ್ತು ಆ.8ರ ಆಷಾಢಅಮಾವಾಸ್ಯೆ ದಿನದಂದು ಕೂಡ ಭಕ್ತರಿಗೆದೇವಾಲಯ ಪ್ರವೇಶಕ್ಕೆ ಅವಕಾಶವಿಲ್ಲ. ಭಕರ ¤ದರ್ಶನಕ್ಕೆ ನಿರ್ಬಂಧ ಹೇರಿದ ದಿನಗಳಲ್ಲಿದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯಗಳುದೇವಾಲಯ ಆರ್ಚಕರು ಮತ್ತುಕಾರ್ಯನಿರ್ವಹಕಅಧಿಕಾರಿಗಳ ಮತ್ತು ಸಿಬ್ಬಂದಿ ಉಪಸ್ಥಿತಿಯಲ್ಲಿಜರುಗಲಿವೆ ಎಂದು ನಗರ ಜಿಲ್ಲಾಡಳಿತ ತಿಳಿಸಿದೆ.