ಬೆಂಗಳೂರು: ಹೈಕೋರ್ಟ್‌ನ ಬೆಂಗಳೂರು ಪ್ರಧಾನಪೀಠ ಸಂಕೀರ್ಣದ ತಳಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಕಚೇರಿಗಳನ್ನು ತಾತ್ಕಾಲಿಕವಾಗಿತಾಂತ್ರಿಕ ಶಿಕ್ಷಣ ನಿರ್ದೇಶನಾಲ ಯದ ಕಟ್ಟಡದ ನೆಲಮಹಡಿಗೆ ಸ್ಥಳಾಂತರಿಸುವ ಪ್ರಸ್ತಾವನೆ ಕುರಿತ ರಾಜ್ಯಸರ್ಕಾರದ ನಿರ್ಧಾರ ವನ್ನು ಎರಡು ವಾರದಲ್ಲಿ ತಿಳಿಸಬೇಕೆಂದುಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ತುಮಕೂರಿನ ವಕೀಲ ಎಲ್. ರಮೇಶ್ ನಾಯಕ್‌ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎ.ಎಸ್. ಓಕ್ ಅವರ ನೇತೃತ್ವದ ವಿಭಾಗೀಯನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.ಈ ವೇಳೆ ರಾಜ್ಯ ಸರ್ಕಾರಿ ವಕೀಲರು ವಾದ ಮಂಡಿಸಿ,ಹೈಕೋರ್ಟ್ ಪ್ರಸ್ತಾವನೆಯನ್ನು ಉನ್ನತ ಶಿಕ್ಷಣ ಇಲಾಖೆಯಸಚಿವರೂ ಆಗಿರುವ ಉಪ ಮುಖ್ಯಮಂತ್ರಿಗಳ ಮುಂದಿಡಲಾಗಿದೆ.
ಆದರೆ, ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರದ ಬಗ್ಗೆ ತಮಗೆಮಾಹಿತಿ ಇಲ್ಲ. ಒಂದು ವಾರ ಕಾಲಾವಕಾಶ ನೀಡಿದರೆ ಸರ್ಕಾರದನಿರ್ಧಾರದ ಕುರಿತು ಮಾಹಿತಿ ನೀಡುವುದಾಗಿ ತಿಳಿಸಿದರು. ಅದಕ್ಕೆ,ಈ ವಿಚಾರವಾಗಿ ಸಾಕಷ್ಟು ಬಾರಿ ನಿರ್ದೇಶನ ನೀಡಲಾಗಿದ್ದರೂಸರ್ಕಾರ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಮುಖ್ಯಕಾರ್ಯದರ್ಶಿಗಳೇ ಖುದ್ದಾಗಿ ಈ ವಿಚಾರ ಪರಿಶೀಲಿಸಬೇಕುಹಾಗೂ ರಾಜ್ಯ ಸರ್ಕಾರದ ನಿರ್ಧಾರವನ್ನು ಎರಡು ವಾರದಲ್ಲಿನ್ಯಾಯಾ ಲಯದ ಮುಂದಿಡಬೇಕು. ಈ ಕುರಿತುಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿ ಜು.22ಕ್ಕೆವಿಚಾರಣೆ ಮುಂದೂಡಿತು.
ರಾಜ್ಯ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದಸಂಕೀರ್ಣದಲ್ಲಿ ಕೋರ್ಟ್ ಹಾಲ್ ಹಾಗೂ ನ್ಯಾಯಮೂರ್ತಿಗಳ ಕಚೇರಿಗಳು ಹೊರತುಪಡಿಸಿ ಬೋರ್ಡ್ ಬ್ರ್ಯಾಂಚ್,ಸಿವಿಲ್, ಕ್ರಿಮಿನಲ್, ಡಿಕ್ರಿ, ಇಂಡೆಕ್ಸ್, ಫೈಲಿಂಗ್ ಕೌಂಟರ್,ಪೆಂಡಿಂಗ್ ಬ್ರ್ಯಾಂಚ್, ಕೋರ್ಟ್ μà ಬ್ರ್ಯಾಂಚ್ ಸೇರಿ ಇತರೆಕಚೇರಿ ಹಾಗೂ ಶಾಖೆಗಳು ತಳಮಹಡಿ ಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಸಾಕಷ್ಟು ಅನನುಕೂಲತೆಗಳುಉಂಟಾಗುತ್ತಿವೆ.
ವಿಶೇಷವಾಗಿ ಅಲ್ಲಿನ ಸಿಬ್ಬಂದಿ ಪ್ರತಿದಿನ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದ್ದು, ಗಂಭೀರಸ್ವರೂಪದ ಆರೋಗ್ಯ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಆದ್ದರಿಂದತಳಮಹಡಿ ಯಲ್ಲಿರುವ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.ತಳಮಹಡಿಯಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸಲುತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಟ್ಟಡದ ನೆಲಮಹಡಿಯನ್ನು ತನಗೆ ಹಸ್ತಾಂತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಿದ್ದ ಹೈಕೋರ್ಟ್, ಆ ಕುರಿತು ಸೂಕ್ತ ತೀರ್ಮಾನಕೈಗೊಳ್ಳುವಂತೆ 2021ರ ಜೂ.21ರಂದು ನಿರ್ದೇಶಿಸಿತ್ತು