Advertisement

ಖಾದ್ಯಪ್ರಿಯರ ನಂದನಾ ಪ್ಯಾಲೇಸ್‌ ಸೇವೆಗೆ ಸಿದ್ದತೆ

06:19 PM Jul 08, 2021 | Team Udayavani |

ಬೆಂಗಳೂರು: ಲಾಕ್‌ಡೌನ್‌ ಪರಿಣಾಮಕೇವಲ ಪಾರ್ಸಲ್‌ಗೆ ಸೀಮಿತಗೊಂಡಿದ್ದ ಆಂಧ್ರಶೈಲಿಯ ವಿವಿಧ ಖಾದ್ಯಗಳನ್ನು ಭೋಜನಾ ಪ್ರೀಯರಿಗೆ ಉಣಬಡಿಸಲು ಬೆಂಗಳೂರಿನನಂದನಾ ಪ್ಯಾಲೆಸ್‌ ಈಗ ಎಲ್ಲಾ ಸುರಕ್ಷತಾಕ್ರಮಗಳೊಂದಿಗೆ ಸೇವೆಗೆ ಸಿದ್ಧಗೊಂಡಿದೆ.

Advertisement

ಹೋಟೆಲ್‌ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ನಂದನಾ ಪ್ಯಾಲೇಸ್‌ ನಗರದಲ್ಲಿ 15 ಹೋಟೆಲ್‌ಗ‌ಳನ್ನುಹೊಂದಿದ್ದು, ಕೊರೊನಾ ಸೋಂಕಿನ ಪ್ರಮಾಣ ತಗ್ಗಿದ ಮೇಲೆ ಹಲವುಸುರಕ್ಷತಾ ಕ್ರಮಗಳನ್ನು ಅನುಸರಿಸುವಮೂಲಕ ಗ್ರಾಹಕರಿಗೆ ವಿಶಿಷ್ಟ ಶೈಲಿ ಆಹಾರಖಾದ್ಯಗಳನ್ನು ಬಡಿಸಲು ಆಹ್ವಾನಿಸುತ್ತಿದೆ.

ಹೋಟೆಲ್‌ಗ‌ಳಲ್ಲಿ ಶೇ.100 ಗ್ರಾಹಕರಿಗೆಅವಕಾಶವನ್ನು ನೀಡಲು ರಾಜ್ಯ ಸರ್ಕಾರಅನುಮತಿ ನೀಡಿದ್ದು, ಆ ಪ್ರಕಾರವಾಗಿಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ, ಸ್ಯಾನಿಟೈಸರ್‌ನೀಡಿ ಗ್ರಾಹಕರನ್ನು ನಂದನಾ ಪ್ಯಾಲೇಸ್‌ ಬರಮಾಡಿಕೊಳ್ಳುತ್ತಿದೆ. ಇನ್ನೂ ಸಿಬ್ಬಂದಿಗೆ ಗ್ಲೌಸ್‌,ಮಾಸ್ಕ್, ಫೇಸ್‌ ಶೀಲ್ಡ್‌ ಅನ್ನು ಧರಿಸುವುದು ಕಡ್ಡಾಯಗೊಳಿಸಿದೆ.

ಈ ಬಗ್ಗೆ ಮಾತನಾಡಿದ ನಂದನಾ ಪ್ಯಾಲೇಸ್‌ನವ್ಯವಸ್ಥಾಪಕ ನಿರ್ದೇಶನಕ ಡಾ.ರವಿಚಂದರ್‌,ಬೆಂಗಳೂರು ಮತ್ತು ಚೆನ್ನೈನಲ್ಲಿರುವ ನಮ್ಮಹೋಟೆಲ್‌ನಲ್ಲಿ ಸುಮಾರು 500ಕ್ಕೂ ಹೆಚ್ಚುಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಎಲ್ಲರಿಗೂ ಕೊರೊನಾ ಲಸಿಕೆಯನ್ನು ಕೊಡಿಸಿದ್ದೇವೆ. ಅಲ್ಲದೆ ಮಾರ್ಗಸೂಚಿ ಪಾಲಿಸುತ್ತಿದ್ದೇವೆ ಎಂದರು.ನಮ್ಮ ಆಹಾರ ಪದ್ಧತಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಖಾದ್ಯಗಳನ್ನುರೂಪಿಸಲಾಗಿದೆ. ರೆಸ್ಟೋರೆಂಟ್‌ನಲ್ಲಿ ಕುಳಿತುಊಟ ಮಾಡಲು ಅವಕಾಶಕಲ್ಪಿಸಲಾಗಿದೆ.

Advertisement

ಎಲ್ಲಾ ಪಾರ್ಸಲ್‌ ಆರ್ಡರ್‌ಗಳಲ್ಲಿ ಬೆಳ್ಳುಳ್ಳಿಮತ್ತು ಕಾಳು ಮೆಣಸಿನಿಂದ ಮಾಡಿದ ರಸಂಉಚಿತವಾಗಿ ನೀಡುತ್ತಿದ್ದೇವೆ. ಹೊಸದಾಗಿಪ್ರಾನ್ಸ್‌ ಗೀ ರೋಸ್ಟ್‌, ಮಟನ್‌ ಪೆಪ್ಪರ್‌ ಡ್ರೈ,ಚಿಕನ್‌ ಕ್ಷತ್ರೀಯ, ಬೋನ್‌ಲೆಸ್‌ ಅಮರಾವತಿಚಿಕನ್‌ ಮತ್ತು ಬೋನ್‌ಲೆಸ್‌ ಚಿಕನ್‌ಬಿರಿಯಾನಿ ಸೇರಿದಂತೆ ಹಲವು ಖಾದ್ಯಗಳನ್ನುಪರಿಚಯಿಸಿದ್ದೇವೆ. ಗ್ರಾಹಕರು ಹೋಟೆಲ್‌ಗೆಆಗಮಿಸಿ ರುಚಿ ನೋಡಬಹುದು ಎಂದುರವಿಚಂದರ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next