Advertisement

ಗಾಂಧಿನಗರ ಕ್ಷೇತ್ರದ ಹಗರಣ: ಮತ್ತೂಮ್ಮೆ ತನಿಖೆಗೆ ಆಗ್ರಹ

06:14 PM Jul 08, 2021 | Team Udayavani |

 ಬೆಂಗಳೂರು: ಗಾಂಧಿನಗರಕ್ಷೇತ್ರದಲ್ಲಿ ಈ ಹಿಂದೆ ಅಭಿವೃದ್ಧಿಕಾರ್ಯದ ಹೆಸರಿನಲ್ಲಿ ನಡೆದಿದೆಎನ್ನಲಾದ ಕೋಟ್ಯಂತರ ರೂ.ಹಗರಣಕ್ಕೆ ಸಂಬಂಧಿಸಿದಂತೆ ಮತ್ತೂಮ್ಮೆ ತನಿಖೆಗೆ ವಹಿಸಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಮುಖ್ಯಮಂತ್ರಿಯಡಿಯೂರಪ್ಪ ಅವರಿಗೆ ಮನವಿಸಲ್ಲಿಸಿದ್ದಾರೆ.

Advertisement

ಬುಧವಾರ ಮನವಿ ಸಲ್ಲಿಸಿದನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಯವರಿಗೆ ಎಲ್ಲ ದಾಖಲೆಗಳನ್ನುಸಲ್ಲಿಸಿದ್ದು ಹಗರಣ ಸಂಬಂಧ ಎಸಿಬಿ ತನಿಖೆಗೆಆದೇಶಿಸಿದ್ದಾರೆ ಎಂದರು.

494 ಪುಟಗಳ ದಾಖಲೆಯನ್ನು ಮುಖ್ಯಮಂತ್ರಿ,ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಹಾಗೂ ಬಿಬಿಎಂಪಿ ಮುಖ್ಯಆಯುಕ್ತರಿಗೆ ನೀಡಲಾಗಿದೆ. ಗಾಂಧಿನಗರ ಕ್ಷೇತ್ರದಏಳು ವಾರ್ಡ್‌ಗಳಲ್ಲಿ 2015-16 ರಿಂದ 2020 ರನವೆಂಬರ್‌ ತಿಂಗಳವರೆಗಿನ ಐದು ವರ್ಷಗಳಲ್ಲಿರಾಜ್ಯ, ಕೇಂದ್ರ ಸರ್ಕಾರ ಮತ್ತು ಪಾಲಿಕೆಯಅನುದಾನಗಳಿಂದ 640 ಕೋಟಿ ರೂ.ಬಿಡುಗಡೆಯಾಗಿದೆ.

ಆದರೆ, ಕನಿಷ್ಠ 150 ಕೋಟಿರೂ.ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಕುರುಹುಗಳಿಲ್ಲ ಎಂದು ಆರೋಪಿಸಿದರು.

ಕಾಮಗಾರಿ ಅವಧಿಯಲ್ಲಿದ್ದ ಗಾಂಧಿನಗರವಿಭಾಗದ ಕಾರ್ಯಪಾಲಕ ಅಭಿಯಂತರರು,ಕಾರ್ಯಪಾಲಕ ಅಭಿಯಂತರರ ಕಚೇರಿಯದ್ವಿತೀಯ ದರ್ಜೆ ಗುಮಾಸ್ತ ಹಾಗೂ ಪಾಲಿಕೆಯಮೂರು ಜನ ಅಧಿಕಾರಿಗಳು ಅವ್ಯವಹಾರದಲ್ಲಿತೊಡಗಿದ್ದಾರೆ. ತನಿಖೆ ಬಳಿಕ ಸತ್ಯಾಂಶಹೊರಬರಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next