ಕನಕಪುರ: ಕೋನಸಂದ್ರ ಗ್ರಾಮದಲ್ಲಿಒತ್ತುವರಿಯಾಗಿರುವ ಕೆರೆ ಜಾಗವನ್ನುತೆರವುಗೊಳಿಸಿ ರಕ್ಷಣೆ ಮಾಡಬೇಕು ಎಂದುಸಮತಾ ಸೈನಿಕ ದಳದ ಜಿಲ್ಲಾ ಖಂಜಾಚಿಬೆಣಚಕಲ್ಲು ದೊಡ್ಡಿ ರುದ್ರೇಶ್‌ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಹಾರೋಹಳ್ಳಿ ಹೋಬಳಿಯಕಗ್ಗಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಗುಳ್ಳಹಟ್ಟಿ ಕಾವಲ್ ಗ್ರಾಮದಲ್ಲಿ ಸಾಗುವಳಿಚೀಟಿ ನೀಡುವ ಸಂಬಂಧ ಗ್ರಾಮಕ್ಕೆ ಭೇಟಿನೀಡಿದ್ದ ಜಿಲ್ಲಾಧಿಕಾರಿ .ಡಾ.ರಾಕೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕೆರೆಯ ಸ್ವರೂಪಹಾಳು: ನಮ್ಮ ಪೂರ್ವಜರಕಾಲದಿಂದಲೂ ಅಂತರ್ಜಲಕ್ಕೆಕೊಂಡಿಯಾಗಿ ಸರ್ವೆ ನಂ.46ರಲ್ಲಿ 3.9ಎಕರೆ ಕೆರೆ ಜಾಗವಿತ್ತು. ಆದರೆ, ಅಕ್ಕಪಕ್ಕದಜಮೀನಿನ ಮಾಲೀಕರು 3.9 ಎಕೆರೆ ಕೆರೆಯಜಾಗವನ್ನು ಸಂಪೂರ್ಣವಾಗಿ ಒತ್ತುವರಿಮಾಡಿಕೊಂಡಿದ್ದಾರೆ.
ಕೆರೆಯ ಸ್ವರೂಪಹಾಳಾಗಿದೆ. ಗ್ರಾಮದ ಜನರು ತಮ್ಮಸಾಕುಪ್ರಾಣಿ, ದನ ಕರುಗಳಿಗೆ ನೀರುಕುಡಿಸಲು ಅನುಕೂಲವಾಗಿತ್ತು. ಆದರೆ, ಕೆರೆಜಾಗವನ್ನು ರಕ್ಷಣೆ ಮಾಡಬೇಕಾದಅಧಿಕಾರಿಗಳ ಬೇಜಬ್ದಾರಿಯಿಂದಒತ್ತುವರಿಯಾಗಿದೆ. ಕೆರೆ ಜಾಗವನ್ನುಸಂಪೂರ್ಣವಾಗಿ ಮುಚ್ಚಿ ಕೃಷಿಭೂಮಿಯನ್ನಾಗಿ ಪರಿವರ್ತನೆ ಮಾಡಿದ್ದಾರೆ.
ಒತ್ತುವರಿಯಾಗಿರುವ ಕೆರೆಯನ್ನು ಸರ್ವೆನಡೆಸಿ, ತೆರವುಗೊಳಿಸಿ ಕೆರೆಯ ಮೂಲಸ್ವರೂಪಕ್ಕೆ ತಂದು ರಕ್ಷಣೆ ಮಾಡಬೇಕುಎಂದು ಮನವಿ ಮಾಡಿಕೊಂಡರು.ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು, 20ದಿನಗಳ ಒಳಗಾಗಿ ಕೆರೆ ಸರ್ವೆ ನಡೆಸಿ,ಒತ್ತುವರಿಯಾಗಿದ್ದರೇ ತೆರವುಗೊಳಿಸಲುಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆಸೂಚನೆ ನೀಡಿದರು.