Advertisement

ನೆಲಮಂಗಲದಲ್ಲಿ ಉನ್ನತ ದರ್ಜೆ ಆಸ್ಪತ್ರೆ ಆರಂಭ

06:25 PM Jul 02, 2021 | Team Udayavani |

ನೆಲಮಂಗಲ: ಬೆಂ.ಗ್ರಾ. ಜಿಲ್ಲೆಯಲ್ಲಿ ಕೊರೊನಾ ಸಮಯದಲ್ಲಿ ಕೈಗೊಂಡ ವಿಶೇಷ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕಾರ್ಯ ದೇಶಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ಕಂದಾಯ ದಿನ, ವೈದ್ಯರ ದಿನ ಹಾಗೂ ಕ®ಡ ‌° ಪತ್ರಿಕಾ ದಿನವನ್ನು ಆಚರಣೆ ಮಾಡಿಮಾತನಾಡಿ, ಬೆಂ.ಗ್ರಾ ಜಿಲ್ಲೆಯು ಸೋಂಕಿನಲ್ಲಿ ತೊಂದರೆ ಎದುರಾಗಿದ್ದರೂ, ಸರಿಸಮಯಕ್ಕೆ ತೆಗೆದುಕೊಂಡ ನಿರ್ಧಾರಗಳುಸೋಂಕು ನಿಯಂತ್ರಣಕ್ಕೆ ಸಹಕಾರವಾಗಿದೆ. ಬೆಂ.ಗ್ರಾ ಜಿಲ್ಲೆಯಲ್ಲಿ ರಾಜ್ಯದಲ್ಲಿಮೊದಲ ಬಾರಿಗೆ ವೈದ್ಯರ ನಡೆ ಗ್ರಾಮದಕಡೆ ಜತೆ ಮೊಬೈಲ್‌ ಕ್ಲಿನಿಕ್‌ ಅಭಿಯಾನಆರಂಭಿಸಿ ಯಶಸ್ವಿಯಾಗಿದೆ ಎಂದರು.

Advertisement

ಬ್ಲ್ಯಾಕ್‌ ಫ‌ಂಗಸ್‌ಗೆ ಶಸ್ತ್ರ ಚಿಕಿತ್ಸೆ: ಮೊದಲಬಾರಿಗೆ ಬ್ಲ್ಯಾಕ್‌ ಫ‌ಂಗಸ್‌ಗೆ ಶಸ್ತ್ರ ಚಿಕಿತ್ಸೆಮಾಡಿ, ಯಶಸ್ವಿಯಾಗಿದ್ದೇವೆ. ಅಂತಹತಂತ್ರಜ್ಞಾನದ ಯಂತ್ರಗಳು ಲಭ್ಯವಿದೆ.ದೊಡ್ಡಬಳ್ಳಾಪುರದಲ್ಲಿ ಮೇಕ್‌ ಶಿಫ್ಟ್ ಆಸ್ಪತ್ರೆ ಸಿದ್ಧಗೊಂಡಿದ್ದು, ಹೊಸಕೋಟೆಯಲ್ಲಿಅಮೇರಿಕಾ ಮೂಲಕ ಕಂಪನಿಯ ಸಿಎಸ್‌ಆರ್‌ ಅನುದಾನದಲ್ಲಿ 100 ಬೆಡ್‌ನ‌ಮೇಕ್‌ ಶಿಫ್ಟ್ ಆಸ್ಪತ್ರೆ ಆರಂಭಮಾಡುತ್ತಿದ್ದೇವೆ.

ನೆಲಮಂಗಲದಲ್ಲಿ 4.5ಎಕರೆಯಲ್ಲಿ ಉನ್ನತ ದರ್ಜೆಯ ಆಸ್ಪತ್ರೆಆರಂಭವಾಗುತ್ತಿದೆ. 3ನೇ ಅಲೆ ಮಕಳ ‌Rಮೇಲೆ ಪರಿಣಾಮ ಎಂಬ ಕಾರಣದಿಂದ ಜಿಲ್ಲೆಯಲ್ಲಿ ಈಗಾಗಲೇ ಮಕ್ಕಳ ಪರೀಕ್ಷೆಗೆ ಮುಂದಾಗಿದೆ ಎಂದು ಹೇಳಿದರು.

ಸೇವೆ ಮರೆಯುವಂತಿಲ್ಲ: ಜಿಲ್ಲೆಯ ಅಭಿವೃದ್ಧಿಗೆ ಕಂದಾಯ, ವೈದ್ಯರು, ಪತ್ರಕರ್ತರು ಮೂರು ಕೈಗಳು ಬಲವಾದರೇ ಮಾತ್ರ ಸಾಧ್ಯ. ಕಂದಾಯ ಇಲಾಖೆಅಧಿಕಾರಿಗಳು ಎಲ್ಲಾ ಕ್ಷೇತ್ರದಲ್ಲಿ ಕೆಲಸಮಾಡುವ ಅನಿವಾರ್ಯವಿದೆ. ವೈದ್ಯರುಪ್ರಾಣ ಉಳಿಸಲು ನೆರವಾದರೆ, ಸಮಾಜ,ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನುಪತ್ರಕರ್ತರು ಮಾಡುತ್ತಾರೆ. ಆದ್ದರಿಂದಮೂರುಕೈ ಬಲವಾಗಬೇಕು ಎಂದರು.

ಸನ್ಮಾನ: ವೈದ್ಯರ ದಿನಾಚರಣೆ ಪ್ರಯುಕ¤‌ಕೊರೊನಾ ಸಮಯದಲ್ಲಿ ಸೇವೆ ಮಾಡಿದವೈದ್ಯರಿಗೆ ಸನ್ಮಾನ ಮಾಡಿ ಅಭಿನಂದನಾಪತ್ರ ನೀಡಲಾಯಿತು. ಕಂದಾಯ ಅಧಿಕಾರಿಗಳಿಗೂ ಸನ್ಮಾನ ಮಾಡಲಾಯಿತು.ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ, ಡಿಎಚ್‌ಒ ತಿಪ್ಪೆಸ್ವಾಮಿ, ತಹಶೀಲ್ದಾರ್‌ ಕೆ.ಮಂಜುನಾಥ್‌, ಟಿಎಚ್‌ಒ ಹರೀಶ್‌,ಉಪ ತಹಶೀಲ್ದಾರ್‌ ಪ್ರಕಾಶ್‌, ಶ್ರೀನಿವಾಸಮೂರ್ತಿ, ವಿಮಲಾ, ಶೈತಾ, ರಾಜಸ್ವನಿ ರೀಕ್ಷಕ ಸುದೀಪ್‌, ರವಿಕುಮಾರ್‌, ಮಹೇಶ್‌,±Å.‌ ದ.ಸ ಶಿವಪ್ರಸಾದ್‌, ಹೇಮಲತಾ, ಗಿರಿಜಾ, ಲೆಕ್ಕಾಧಿಕಾರಿ ರಘುಪತಿ, ಶರಣ್‌,ರೋಹಿತ್‌, ಶಿವಕುಮಾರ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next