ಬೆಂಗಳೂರು: ರಾಜ್ಯದಲ್ಲಿ ಮುಂಬರುವವಿಧಾನಸಭೆ ಚುನಾವಣೆಯಲ್ಲಿ 130ಕ್ಕೂಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೂಮ್ಮೆಬಿಜೆಪಿಯನ್ನು ಅಧಿಕಾರಕ್ಕೆ ತರುವಸವಾಲು ನನ್ನ ಮುಂದಿದೆ. ಅದಕ್ಕಾಗಿಈಗಿನಿಂದಲೇ ಎಲ್ಲ ರೀತಿಯ ಪ್ರಯತ್ನಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದವಲಾವಣೆಯ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇಸಿಎಂ ಯಡಿಯೂರಪ್ಪ ಅವರ ಈ ಹೇಳಿಕೆ ರಾಜಕೀಯವಾಗಿ ಮತಷ್ಟು ಮಹತ್ವಪಡೆದುಕೊಂಡಿದೆ. ಬುಧವಾರ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ರಾಜಭವನದಲ್ಲಿ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರ ಒಂದು ಕಣ್ಣಿನ ಲೇಸರ್ ಚಿಕಿತ್ಸೆನಡೆಸಲಾಗಿದೆ ಅವರ ಆರೋಗ್ಯವಿಚಾರಿಸಿದ್ದೇನೆ.
ಸುದೀರ್ಘವಾಗಿಅನೇಕವಿಚಾರಗಳಬಗ್ಗೆಅವರೊಂದಿಗೆಮಾತುಕತೆ ನಡೆಸಿದ್ದೇನೆ. ರಾಜ್ಯಪಾಲರು ಕೂಡ ಬಹಳ ಸಮಾಧಾನದಿಂದ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದಾರೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಜಿಲ್ಲಾ ಪ್ರವಾಸ ಮಾಡಿ ಸಮಸ್ಯೆ ತಿಳಿದುಕೊಳ್ಳುವತೀರ್ಮಾನ ಮಾಡಿದ್ದೇನೆ. ಆ ನಿಟ್ಟಿನಲ್ಲಿ ಮುಂದಿನವಾರದಿಂದ 10-12 ಜಿಲ್ಲೆ ಗಳಿಗೆ ಪ್ರವಾಸ ಮಾಡುತ್ತೇನೆ ಎಂದು ಸಿಎಂ ತಿಳಿಸಿದರು.
ಈ ಮೂಲಕನಾಯಕತ್ವ ಬದಲಾವಣೆಗೆ ಪ್ರಯತ್ನಿಸುವವರಿಗೆಇನ್ನೂ ಎರಡು ವರ್ಷ ತಾವೇ ಇರುವ ಸಂದೇಶರವಾನಿಸಿದರು. ಇದೇ ವೇಳೆ,ರಮೇಶ್ ಜಾರಕಿಹೊಳಿ ದೆಹಲಿಪ್ರವಾಸದ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ನಾನು ಯಾವುದೇವಿಷಯಗಳಬಗ್ಗೆಪ್ರತಿಕ್ರಿಯೆಕೊಡಲುಹೋಗುತ್ತಿಲ್ಲ. ಎಲ್ಲವನ್ನೂ ಶಾಂತವಾಗಿ ಕೇಳುತ್ತಿದ್ದೇನೆ, ತಿಳಿದುಕೊಳ್ಳುತ್ತಿದ್ದೇನೆ.ಸಿಡಿ ಪ್ರಕರಣದಲ್ಲಿ ಸಿಲುಕಿಸುವ ಕುರಿತು ಬಿಜೆಪಿಯವರೇ ಷಡ್ಯಂತ್ರ ಮಾಡಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಕೇಳಿದ್ದೇನೆ ಅಷ್ಟೇ ಎಂದರು.ಮಾಧ್ಯಮ ಪ್ರತಿನಿಧಿಗಳು ನಾಯಕತ್ವಬದಲಾವಣೆ ಕುರಿತು ವಿಷಯ ಪ್ರಸ್ತಾಪಿಸುತ್ತಿದ್ದಂತೆಸಿಎಂ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡದೇಕೈ ಮುಗಿದು ತೆರಳಿದರು.