Advertisement

ಅಧಿಕಾರಿಗಳೇ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿ: ಎಂಟಿಬಿ

05:22 PM Jun 26, 2021 | Team Udayavani |

ದೇವನಹಳ್ಳಿ: ಸರ್ಕಾರದಲ್ಲಿ ನೋಟು ಮುದ್ರಣಮಾಡುವ ಯಂತ್ರ ಇಲ್ಲ. ಎಲ್ಲರೂ ಕೇಳಿದಷ್ಟು ಹಣನೀಡಲುಅಸಾಧ್ಯ.ಜನರುಕಟ್ಟುವತೆರಿಗೆಯಿಂದಲೇಸರ್ಕಾರವನ್ನು ನಡೆಸಲಾಗುತ್ತಿದೆ. ಅಧಿಕಾರಿಗಳುಪ್ರಾಮಾಣಿಕತೆ, ಪಾರದರ್ಶಕವಾಗಿ ಕರ್ತವ್ಯನಿರ್ವಹಿಸಬೇಕು ಎಂದು ಸಚಿವ ಎಂಟಿಬಿನಾಗರಾಜ್‌ ಹೇಳಿದರು.

Advertisement

ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತಭವನದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾಸಭೆಯಲ್ಲಿ ಮಾತನಾಡಿ, ಜನರು ಕಟ್ಟುವ ತೆರಿಗೆಗೆಪ್ರಾಮುಖ್ಯತೆ ಇದೆ. ಯಾವುದೇ ಸರ್ಕಾರದಲ್ಲಿ ಪ್ರಜಾಪ್ರಭುತ್ವದಲ್ಲಿ ಜನರಿಂದ ಆಯ್ಕೆಯಾದ ಚುನಾಯಿತ ಸರ್ಕಾರವಾಗಿದೆ.ಅಧಿಕಾರ ಯಾರಿಗೂಶಾÍತ ‌Ì ಅಲ್ಲ. ಇರುವ ತನಕ ಜನರಿಗೆ ನಾವು ಏನುಮಾಡಿದ್ದೇವೆ ಎಂಬುವುದೇ ಉಳಿಯುವುದು.ಸರ್ಕಾರದ ಕಾರ್ಯಕ್ರಮಗಳುಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆಆಗಬೇಕು ಎಂದು ಹೇಳಿದರು.

ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಿ: ಬೆಂ.ಗ್ರಾ.ಜಿಲ್ಲೆಯಲ್ಲಿ ಕೊರೊನಾ 3ನೇಅಲೆ ತಡೆಯಲು ಜಿಲ್ಲಾಡಳಿತ ಸಾಕಷ್ಟುಕಾರ್ಯಕ್ರಮ ರೂಪಿಸಿದೆ. ಸಿಎಂ ಯಡಿಯೂರಪ್ಪನೇತೃತ್ವದ ಸರ್ಕಾರವೂ 3ನೇ ಅಲೆ ತಡೆಗೆಡಾ.ದೇವಿಶೆಟ್ಟಿ ನೇತೃತ್ವದಲ್ಲಿ ತಜ್ಞರ ಸಮಿತಿ ರೂಪಿಸಿ,ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ 4ತಾಲೂಕುಗಳಲ್ಲಿ ಮಕ್ಕಳಿಗಾಗಿ 50 ಹಾಸಿಗೆಗಳನ್ನುಸಿದ್ಧಪಡಿಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಶೇ.50ರಷ್ಟು ಲಸಿಕೆ ಕಾರ್ಯವಾಗಿದೆ. ಪ್ರತಿಯೊ ಬ್ಬರೂ ಲಸಿಕೆಹಾಕಿಸಿಕೊಳ್ಳಬೇಕು ಎಂದು ಹೇಳಿದರು.77 ಗ್ರಾಮದಲ್ಲಿ ನೀರಿನ ಸಮಸ್ಯೆ: ಜಿಪಂ ಸಿಇಒಎಂ.ಆರ್‌. ರವಿಕುಮಾರ್‌ ಮಾತನಾಡಿ, ಜಿಲ್ಲೆಯ77 ಗ್ರಾಮದಲ್ಲಿ ಕುಡಿಯುವ ನೀರಿನಸಮಸ್ಯೆಯಿದೆ. ಅದರಲ್ಲಿ31 ಗ್ರಾಮದಲ್ಲಿ ಟ್ಯಾಂಕರ್‌ಹಾಗೂ 46 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ.ಜಿಲ್ಲೆಯಲ್ಲಿ ನೀರು ಕಲ್ಪಿಸಲು ಸರ್ಕಾರದಿಂದ ವಿಶೇಷ ಅನುದಾನದಲ್ಲಿ 8 ಕೋಟಿಯಷ್ಟು ಅನುದಾದ ನೀಡಲು ಅನುವು ಮಾಡಿಕೊಡಬೇಕು ಎಂದುಮನವಿ ಮಾಡಿದರು.

ಒಂದು ವಾರದಲ್ಲಿ ತನಿಖೆ ಪೂರ್ಣ: 4 ತಾಲೂಕಿನಗ್ರಾಪಂಗಳಲ್ಲಿ ನೆಲಮಂಗಲ ಮತ್ತು ದೇವನಹಳ್ಳಿತಾಲೂಕಿನಲ್ಲಿ ತೆರಿಗೆ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಅವರ ವಿರುದ್ಧ ತನಿಖೆನಡೆಯುತ್ತಿದ್ದು, ಒಂದು ವಾರದಲ್ಲಿಪೂರ್ಣಗೊಳ್ಳಲಿದೆ. ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ದೇವನಹಳ್ಳಿಯಕನ್ನಮಂಗಲ ಗ್ರಾಪಂ ಕಚೇರಿಗೆ ಯಾರೋಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಕಂಪ್ಯೂಟರ್‌ಆಪರೇಟರ್‌ ಅನುರಾಧ ಅವರು ಪಂಚಾಯಿತಿತೆರಿಗೆ ಹಣದಲ್ಲಿ ದುರುಪಯೋಗವಾಗಿರುವುದುಕಂಡು ಬಂದಿದೆ ಎಂದು ಹೇಳಿದರು.

Advertisement

ಜಿಲ್ಲಾಧಿಕಾರಿಕೆ.ಶ್ರೀನಿವಾಸ್‌, ಪೊಲೀಸ್‌ ವರಿಷ್ಟಾಧಿಕಾರಿ ಡಾ.ಕೋನಾ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್‌ ಕೆ ನಾಯಕ್‌, ಉಪವಿಭಾಗಾಧಿಕಾರಿಅರುಳ್‌ ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿಡಾ.ಎ.ತಿಪ್ಪೇಸ್ವಾಮಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next