ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತಗ್ರಾಮ ಪಂಚಾಯಿತಿ ಅಧ್ಯಕ್ಷರ ಮನೆಗೆ ಬಿಜೆಪಿ ನಾಮ ಫಲಕ ಹಾಕುವಕಾರ್ಯಕ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲು ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿನಡೆದ ಪದಾಧಿಕಾರಿಗಳ ಸಭೆಯಲ್ಲಿಈತೀರ್ಮಾನ ಕೈಗೊಳ್ಳಲಾಗಿದೆ ಎಂದುತಿಳಿದು ಬಂದಿದೆ. ಪಕ್ಷದ ಸಂಘಟನೆದೃಷ್ಟಿಯಿಂದ ಜಿಲ್ಲಾ ಮತ್ತು ಮಂಡಲಕಾರ್ಯಕಾರಿಣಿ ನಡೆಸಲು ತೀರ್ಮಾನಿಸಲಾಗಿದೆ.
ಜುಲೈ 1 ರಿಂದ 15 ರ ವರೆಗೆಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಹಾಗೂಜುಲೈ 16 ರಿಂದ ಮಂಡಲ ಕಾರ್ಯಕಾರಿಣಿನಡೆಸಲುರಾಜ್ಯಪದಾಧಿಕಾರಿಗಳಸಭೆಯಲ್ಲಿ ತೀರ್ಮಾನ ಮಾಡಲಾಗಿದೆಎಂದು ತಿಳಿದು ಬಂದಿದೆ.
ಇಂದು ರಾಜ್ಯ ಕಾರ್ಯಕಾರಿಣಿ:ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿನಡೆಯಲಿದ್ದು, ಸಿಎಂ ಯಡಿಯೂರಪ್ಪಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷನಳಿನ್ ಕುಮಾರ್ ಕಟೀಲ್ ಸೇರಿಪ್ರಮುಖ ನಾಯಕರು ಹಾಗೂಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.ಸಿಎಂ ಯಡಿಯೂರಪ್ಪ ಅವರು ವಚ್ಯುìವಲ್ ಮೂಲಕ ಉದ್ಘಾಟನೆಮಾಡಲಿದ್ದು, ದೆಹಲಿಯಿಂದ ರಾಜ್ಯಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಮುಂಬರುವ ಎರಡುವಿಧಾನಸಭೆಗಳ ಉಪಚುನಾವಣೆ,ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಚುನಾವಣೆಗಳ ಸಿದ್ಧತೆ ಮತ್ತು ಕೊರೊನನಿಯಂತ್ರಣದಲ್ಲಿ ಪಕ್ಷ ಮಾಡಿರುವಚಟುವಟಿಕೆಗಳ ಕುರಿತು ಚರ್ಚೆನಡೆಯಲಿದೆ ಎಂದು ತಿಳಿದು ಬಂದಿದೆ.