Advertisement

ಸವಾಲುಗಳ ನಡುವೆ ಮಹತ್ತರ ಕಾರ್ಯ

01:35 PM Jun 03, 2021 | Team Udayavani |

ಬೆಂಗಳೂರು: ಅಸ್ಥಿರವೆನಿಸಿದ್ದ ರಾಜಕೀಯಪಕ್ಷಗಳ ಮೈತ್ರಿಯ ನೇತೃತ್ವ ವಹಿಸಿಕೊಂಡುಪ್ರಧಾನಿ ಸ್ಥಾನ ಅಲಂಕರಿಸಿದ್ದ ಎಚ್‌.ಡಿ.ದೇವೇಗೌಡರಿಗೆ ಸಾಕಷ್ಟುಸವಾಲುಗಳಿದ್ದರೂ ಒಂದಷ್ಟುಮಹತ್ತರ ಕಾರ್ಯಗಳೊಂದಿಗೆ ಆಡಳಿತ ನಡೆಸಿರುವುದನ್ನು ಕಾಣಬಹುದು ಎಂದು ಹಿರಿಯಪತ್ರಕರ್ತ ಸಚ್ಚಿದಾನಂದಮೂರ್ತಿಅಭಿಪ್ರಾಯಪಟ್ಟರು.

Advertisement

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ 25 ವರ್ಷ ಪೂರೈಸಿರುವಹಿನ್ನೆಲೆಯಲ್ಲಿ ಜೆಡಿಎಸ್‌ ಹಮ್ಮಿಕೊಂಡಿರುವದೇವೇಗೌಡರ ಕೊಡುಗೆಗಳ ಸ್ಮರಣಾ ಅಭಿಯಾನದಡಿ ಬುಧವಾರ ವಿಡಿಯೊ ಮಾತುಕತೆಯಲ್ಲಿಅಭಿಪ್ರಾಯ ಹಂಚಿಕೊಂಡರು.

ದೇವೇಗೌಡರು ಪ್ರಧಾನಿಯಾಗುವಅವಕಾಶ ಒದಗಿಬಂದಾಗಬಹಳ ಚರ್ಚೆಯಾಗಿತ್ತು.ದೇವೇಗೌಡರು ಯಶಸ್ವಿಮುಖ್ಯಮಂತ್ರಿಯಾಗಿ ಸಾಕಷ್ಟುಜನಪ್ರಿಯರಾಗಿದ್ದ ಜತೆಗೆ ಜನತಾದಳದಿಂದ ಹೆಚ್ಚು ಸಂಸದರುಆಯ್ಕೆಯಾಗಿದ್ದ ಸಂದರ್ಭದಲ್ಲಿಅಲ್ಪಾವಧಿ ಎನಿಸುವ ಅಧಿಕಾರ ವಹಿಸಿಕೊಳ್ಳುವುದು ಸೂಕ್ತವೇ ಎಂಬ ಅಭಿಪ್ರಾಯವನ್ನೂ ಕೆಲ ಆಪ್ತರು ವ್ಯಕ್ತಪಡಿಸಿದ್ದರು.

ಆದರೆ ರಾಷ್ಟ್ರ ಸೇವೆ ಮಾಡುವ, ಹೆಚ್ಚಿನಜವಾಬ್ದಾರಿ ವಹಿಸಿಕೊಳ್ಳುವ ಸಮಯಎಂದು ಭಾವಿಸಿದ ದೇವೇಗೌಡರು ಪ್ರಧಾನಿಯಾಗಲು ಒಪ್ಪಿಗೆ ಸೂಚಿಸಿದರು ಎಂದು ಸ್ಮರಿಸಿದರು.

ದೇವೇಗೌಡರು ಪ್ರಧಾನಿಯಾಗಿದ್ದಾಗಅವರ ಸಂಪುಟದಲ್ಲಿ ಹಿಂದೆ ಪ್ರಧಾನಿಗಳಾಗಿದ್ದ ಇಂದಿರಾಗಾಂಧಿ, ರಾಜೀವ್‌ಗಾಂಧಿ, ವಿ.ಪಿ. ಸಿಂಗ್‌, ಪಿ.ವಿ.ನರಸಿಂಹರಾವ್‌ ಅವರ ಬಳಿ ಕಾರ್ಯನಿರ್ವಹಿಸಿದ ಅನುಭವಿಗಳಿದ್ದುದು ಅನುಕೂಲಕರವಾಗಿತ್ತು. ಹಾಗೆಯೇ ಸೈದ್ಧಾಂತಿಕಭಿನ್ನತೆ ನಡುವೆಯೂ ಪ್ರತಿಭಾವಂತಸಚಿವರನ್ನು ನಿಭಾಯಿಸಿಕೊಂಡುಹೋಗುವುದು ಸವಾಲಾಗಿತ್ತು. ಆದರೆದೇವೇಗೌಡರಿಗೆತಮ್ಮಕಾರ್ಯನಿರ್ವಹಣೆಬಗ್ಗೆ ಸ್ಪಷ್ಟತೆ ಇತ್ತು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next