Advertisement

ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಿ

05:22 PM Jun 23, 2021 | Team Udayavani |

ಬೆಂಗಳೂರು: ಬೆಳ್ಳಂದೂರು ಕೆರೆ ಹೂಳೆತ್ತುವ ಕಾರ್ಯವೂ ಸೇರಿದಂತೆ ವಿವಿಧಅಭಿವೃದ್ಧಿ ಕಾರ್ಯಗಳು ನಿಗದಿತ ಗಡುವಿನಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿಗಳಲ್ಲಿವಿಳಂಬ ಮತ್ತು ಲೋಪದೋಷಗಳು ಕಂಡುಬಂದರೆ, ಸಂಬಂಧಪಟ್ಟವರವಿರುದ್ಧ ಕ್ರಮ ಕೈಗೊಳ್ಳಲಾಗುವುದುಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಸೂಚಿಸಿದರು.

Advertisement

ಮಂಗಳವಾರ ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಚಿವ ಅರವಿಂದ ಲಿಂಬಾವಳಿಮತ್ತು ಬಿಡಿಎ ಆಯುಕ್ತ ರಾಜೇಶ್‌ಗೌಡಅವರೊಂದಿಗೆ ಬೆಳ್ಳಂದೂರು ಹಾಗೂವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು.

2022ರ ನವೆಂಬರ್‌ಒಳಗೆ ಕಾಮಗಾರಿಯನ್ನು ಹಾಗೂ ವರ್ತೂರು ಕೆರೆಯಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ.ಬೆಳ್ಳಂದೂರು ಕೆರೆಯ ಹೂಳೆತ್ತುವುದುಮತ್ತು ಇನ್ನಿತರ ಕಾಮಗಾರಿಗಳಿಗಾಗಿನೂರು ಕೋಟಿ ರೂ. ವೆಚ್ಚಮಾಡಲಾಗುತ್ತಿದ್ದು, ಇನ್ನೂ ಹೆಚ್ಚುಯಂತ್ರೋಪಕರಣಗಳು ಮತ್ತು ಮಾನವಸಂಪನ್ಮೂಲ ಬಳಸಿಕೊಂಡುಪೂರ್ಣಗೊಳಿಸತಕ್ಕದ್ದು. ಯಾವುದೇಕಾರಣಕ್ಕೂ ಗಡುವು ವಿಸ್ತರಣೆಮಾಡಬಾರದು ಎಂದು ನಿರ್ದೇಶನನೀಡಿದರು.

ಇದೇ ವೇಳೆ ದೊಡ್ಡಬನಹಳ್ಳಿಬಿಡಿಎ ವಸತಿ ಸಂಕೀರ್ಣಗಳಿಗೆ ಭೇಟಿನೀಡಿ ಅಲ್ಲಿನ ನಿವಾಸಿಗಳಿಂದ ಅಹವಾಲುಸ್ವೀಕರಿಸಿದರು.ಸಚಿವ ಅರವಿಂದ ಲಿಂಬಾವಳಿಮಾತನಾಡಿ, ದೊಡ್ಡಬನಹಳ್ಳಿ,ಗುಂಜೂರು, ಬೆಳ್ಳಂದೂರು ಮತ್ತುವರ್ತೂರು ಕೆರೆಗಳು ತಮ್ಮ ಮತಕ್ಷೇತ್ರದವ್ಯಾಪ್ತಿಯಲ್ಲಿದ್ದು, ಇಲ್ಲಿ ಕೈಗೊಂಡಿರುವಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿಪೂರ್ಣಗೊಳಿಸಿ ಸಾರ್ವಜನಿಕರಿಗೆಅನುಕೂಲ ಮಾಡಿಕೊಡುವಂತೆಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next