Advertisement

ಜಮೀರ್‌  ಕ್ಷಮೆಯಾಚಿಸಲಿ,ಇಲ್ಲದಿದ್ರೆ ಧರಣಿ: ಶರವಣ

05:08 PM Jun 23, 2021 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಶಾಸಕ ಜಮೀರ್‌ಅಹಮ್ಮದ್‌ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ತೀವ್ರಹೋರಾಟ ನಡೆಸಬೇಕಾಗುತ್ತದೆ ಎಂದು ವಿಧಾನ ಪರಿಷತ್‌ಮಾಜಿ ಸದಸ್ಯ ಟಿ.ಎ. ಶರವಣ ಎಚ್ಚರಿಸಿದ್ದಾರೆ.

Advertisement

ಸಮುದಾಯಗಳನ್ನು ಎತ್ತಿಕಟ್ಟುವುದು,ನಾಯಕರ ಓಲೈಕೆಗೆಪಲ್ಟಿಹೊಡೆಯುವುದು,ಕುಮಾರಸ್ವಾಮಿ ಅವರ ಬಗ್ಗೆ ಪದೇ ಪದೆಹಗುರವಾಗಿ ಮಾತನಾಡುವುದನ್ನು ತಕ್ಷಣಜಮೀರ್‌ ಅಹಮ್ಮದ್‌ ನಿಲ್ಲಿಸಬೇಕು. ಇಲ್ಲದಿದ್ದರೆ, ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
“ನಮ್ಮ ನಾಯಕರು ನಿಮ್ಮಂತೆ ಚಿಲ್ಲರೆರಾಜಕೀಯ ಮಾಡುವುದಿಲ್ಲ. ಜಮೀರ್‌ ಹೇಳಿದ ತಕ್ಷಣಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ. ಕುಮಾರಸ್ವಾಮಿಅವರು ಮತ್ತೆ ಮುಖ್ಯಮಂತ್ರಿ ಆಗುವುದು ಖಚಿತ. ಜಮೀರ್‌ಅವರಿಗೆ ಈ ಹಿಂದೆ ಕುಮಾರಸ್ವಾಮಿ. ಈಗ ಸಿದ್ದರಾಮಯ್ಯ.ಮುಂದೆ ಯಾರೋ? ರಾಜಕೀಯ ನಿಂತ ನೀರಲ್ಲ  ಎಂಬುದನ್ನುಅರ್ಥ ಮಾಡಿಕೊಳ್ಳಬೇಕು ಎಂದು ತೀಕ್ಷ ¡ವಾಗಿ ಹೇಳಿದರು.

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಜಮೀರ್‌ಅಹಮ್ಮದ್‌ ಮಾತನಾಡುತ್ತಿದ್ದಾರೆ. ಒಂದು ಸಮುದಾಯದನಾಯಕರನ್ನು ಉದ್ದೇಶಪೂರ್ವಕವಾಗಿ ಹೀಗೆ ಟಾರ್ಗೆಟ್‌ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ಪಕ್ಷದಲ್ಲಿ ಮುಂಚೂಣಿಯಲ್ಲಿದ್ದ ರೋಷನ್‌ ಬೇಗ್‌, ಸಿ.ಎಂ.ಇಬ್ರಾಹಿಂ, ತನ್ವೀರ್‌ ಸೇs… ಅವರು ನೇಪಥ್ಯಕ್ಕೆ ಸರಿಯುವಂತೆಮಾಡಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next