ಬೆಂಗಳೂರು: ಭಾಷೆಗಳಕಲಿಕಾ ತರಬೇತಿಯಲ್ಲಿ ಲೋಕಸಭಾಸಚಿವಾಲಯದ “ಪಾರ್ಲಿಮೆಂಟರಿ ರಿಸರ್ಚ್ ಆಂಡ್‌ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ’ (ಪ್ರೈಡ್)ಯುಕನ್ನಡವನ್ನುಕಡೆಗಣಿಸಿದ್ದು,ಕನ್ನಡಭಿಮಾನವಿಲ್ಲದ25ಮಂದಿಯನ್ನು ಲೋಕಸಭೆಗೆ ಆರಿಸಿ ಕಳುಹಿಸಿದ್ದರ ಫಲವಿದುಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಟೀಕಿಸಿದ್ದಾರೆ.
ಇದೇ 22ರಿಂದಭಾಷೆಗಳಕಲಿಕಾ ತರಬೇತಿ ಆನ್‌ಲೈನ್‌ನಲ್ಲಿ ಆರಂಭವಾಗುತ್ತಿದೆ.ಇದರಲ್ಲಿ ವಿವಿಧ ರಾಜ್ಯಗಳಸಂಸದರು, ಶಾಸಕರು,ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ತರಬೇತಿಯಲ್ಲಿ ಪ್ರೈಡ್ ಸಂಸ್ಥೆಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು,ತೆಲುಗಿಗೆ ಆದ್ಯತೆ ನೀಡಿದೆ. ಫ್ರೆಂಚ್, ಜರ್ಮನ್, ಜಪಾನೀಸ್,ಪೊರ್ಚುಗೀಸ್, ರಷ್ಯನ್, ಸ್ಪಾ Âನಿಷ್ ಅನ್ನುಕೂಡಕಲಿಸಲಾಗುತ್ತಿದೆ. ಇದರಲ್ಲಿಕನ್ನಡವನ್ನು ಸೇರಿಸಬೇಕು.ಇಲ್ಲವೇ ನಾವೆಲ್ಲರೂ ಇದನ್ನು ಧಿಕ್ಕರಿಸಬೇಕು ಎಂದು ಟ್ವೀಟ್‌ಮೂಲಕ ಆಗ್ರಹಿಸಿದ್ದಾರೆ. ಕೇಂದ್ರ ಪ್ರತಿ ಬಾರಿ ಕನ್ನಡವನ್ನುನಿರ್ಲಕ್ಷಿಸುತ್ತಿದೆ. ಇದರ ವಿರುದ್ಧ ನಾವೇಕೆಲವರುಮಾತನಾಡುವಂತಾಗಿದೆ.
ಕನ್ನಡ ಭಾಷೆ ವಿಚಾರದಲ್ಲಿನಕೇಂದ್ರದ ಇಂತಹ ನಡವಳಿಕೆಗಳ ವಿರುದ್ಧ ಎಲ್ಲರೂಹೋರಾಡಬೇಕು. ಅವರು ನಿರ್ಲಕ್ಷಿಸುವುದು ನಾವುಎಚ್ಚರಿಸುವುದು, ಅತ್ತುಕರೆದು ಔತಣ ಪಡೆಯುವುದುನಿಲ್ಲಬೇಕು.ಕನ್ನಡ ಮರೆತರೆಕಷ್ಟ ಎಂಬ ಸಂದೇಶರವಾನಿಸಬೇಕು. ಕೇಂದ್ರ ಸರ್ಕಾರಕನ್ನಡದ ವಿಚಾರದಲ್ಲಿನಿರ್ಲಕ್ಷÂ ತಳೆದಿದ್ದರೂ ಬಿಜೆಪಿಯ ಯಾವೊಬ್ಬ ಸಂಸದರೂಇದರ ಬಗ್ಗೆ ಮಾತನಾಡಿದ್ದನ್ನು ನಾನಂತೂ ನೋಡಿಲ್ಲ.ಇಷ್ಟರಲ್ಲೇ ಬಿಜೆಪಿಯು ಮೂಲಭೂತವಾಗಿ ಕನ್ನಡ ವಿರೋಧಿಎಂಬುದು ಗೊತ್ತಾಗುತ್ತದೆ. ತಾವುಕನ್ನಡ ವಿರೋಧಿಗಳಲ್ಲಎಂದಾದರೆ ಈಗ ಆಗಿರುವ ಪ್ರಮಾದವನ್ನು ತಾಕತ್ತಿದ್ದರೆಬಿಜೆಪಿ ಸರಿಪಡಿಸಲಿ ಎಂದು ಸವಾಲು ಹಾಕಿದ್ದಾರೆ.