Advertisement

ಬೆಂಗಳೂರಿಗೆ ಬೇಕಿದೆ ಸುಸ್ಥಿರ ಸಾರಿಗೆ ವ್ಯವಸ್ಥೆ: ಗ್ರೀನ್ ಪೀಸ್ ಇಂಡಿಯಾ ಆಗ್ರಹ

03:41 PM Sep 27, 2022 | Team Udayavani |

ಬೆಂಗಳೂರು: ನಗರದಲ್ಲಿ ಈ ತಿಂಗಳ ಆರಂಭದಲ್ಲಿ ಸುರಿದ ಭಾರೀ ಮಳೆ ನಗರಕ್ಕೆ ಮತ್ತು ನಾಗರಿಕರಿಗೆ ಉಂಟು ಮಾಡಿರುವ ಅಗಾಧ ನಷ್ಟದ ಹಿನ್ನಲೆಯಲ್ಲಿ, ಪ್ರವಾಹ ನಿಯಂತ್ರಣಕ್ಕೆ ದೀರ್ಘಾವಧಿಯ ಹಾಗು ಸುಸ್ಥಿರ ಪರಿಹಾರ ಕ್ರಮಗಳನ್ನು ರೂಪಿಸುವಂತೆ ಸರ್ಕಾರವನ್ನು ಗ್ರೀನ್ ಪೀಸ್ ಇಂಡಿಯಾ ಆಗ್ರಹಿಸಿದೆ. ಈ ಸಂಬಂಧ ಅದು ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ತೆರೆದ ಪತ್ರವನ್ನು ಬರೆದಿದೆ.

Advertisement

“ನಿರ್ದಿಷ್ಟವಾಗಿ ಹವಾಮಾನ ವೈಪರೀತ್ಯಗಳು ಸಾಮಾನ್ಯ ಎನ್ನುವಂತಾಗಿರುವ ಈ  ಕಾಲಘಟ್ಟದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಗ್ರೀನ್ ಪೀಸ್ ಉದ್ದೇಶಿಸಿದೆ. ಇದರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಈ ಬಿಕ್ಕಟ್ಟಿಗೆ ಸ್ಥಳೀಯವಾಗಿ ಕೈಗೊಳ್ಳಬೇಕಾದ ಪರಿಹಾರೋಪಾಯಗಳ  ಕುರಿತು ಚರ್ಚಿಸಲು ಜನಪ್ರತಿನಿಧಿಗಳನ್ನು, ನಾಗರಿಕರನ್ನು ಮತ್ತು ವಿವಿಧ ವಲಯದ ಹೂಡಿಕೆದಾರರನ್ನು ಚರ್ಚೆಗೆ ಆಹ್ವಾನಿಸುತ್ತದೆ,” ಎಂದು ಸಂಘಟನೆ ತಿಳಿಸಿದೆ.

ಬೆಂಗಳೂರು ಪ್ರಸ್ತುತ ತೀವ್ರತರದ ಸವಾಲನ್ನು ಎದುರಿಸುತ್ತಿದೆ. ಆದರೆ ಇದಕ್ಕೆ  ನಗರದ ಅಭಿವೃದ್ಧಿ ಪಾಲುದಾರರ  ಪ್ರತಿಕ್ರಿಯೆ ಸೂಕ್ತವಾಗಿ ದಾಖಲಾಗುತ್ತಿಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರ ಸೆಪ್ಟೆಂಬರ್ ಮೊದಲ ವಾರಗಳಲ್ಲಿ ಬೆಂಗಳೂರಿನಲ್ಲಿ ಸುರಿದ ಮಹಾ ಮಳೆ ಮತ್ತು ಪ್ರವಾಹದಿಂದಾಗಿ 2,000 ಮನೆಗಳು ಜಲಾವೃತಗೊಂಡವು ಮತ್ತು 22,000 ವಾಹನಗಳಿಗೆ ಹಾನಿಯುಂಟಾಗಿದೆ. ಇದರ ಮಧ್ಯೆ ನಿರ್ಲಕ್ಷಕ್ಕೊಳಗಾದ ನೂರಾರು ಸಮುದಾಯಗಳು ಎದುರಿಸುತ್ತಿರುವ ಕಷ್ಟಗಳು, ಅವರ ಚೂರು ಪಾರು ಕೂಡಿಟ್ಟ- ಉಳಿತಾಯ ಮಾಡಿದ ಹಣ ಮತ್ತು ವಸ್ತುಗಳಿಗೆ ಉಂಟಾದ ಹಾನಿಗಳು ಇನ್ನೂ  ಅಧಿಕೃತ  ಲೆಕ್ಕಕ್ಕೆ ಸಿಕ್ಕಿಲ್ಲ. ಅವರಲ್ಲಿ ಅನೇಕರು ತಮ್ಮ ಜೀವನೋಪಾಯ ಮತ್ತು ಆಶ್ರಯಗಳನ್ನು ಕಳೆದುಕೊಂಡಿದ್ದಾರೆ. ಈ ಬಿಕ್ಕಟ್ಟಿನ ಮಧ್ಯೆ, ಐಪಿಸಿಸಿ (IPCC) ವರದಿ 2022,  ಭಾರತದಲ್ಲಿ ಮಳೆ ಹೆಚ್ಚು ನಿರಂತರವಾಗಿ  ಮತ್ತು ಅನಿಯಮಿತವಾಗಿ ಸುರಿಯುವದರೊಂದಿಗೆ ಪ್ರವಾಹಕ್ಕೆ ಕಾರಣವಾಗಲಿದೆ ಎಂದಿದೆ. ಇದರೊಂದಿಗೆ ಈ ಅಧಿಕ ಮಳೆಯಿಂದಾಗಿ ಪ್ರಸ್ತುತ ಸಂಭವಿಸಿದ್ದಕ್ಕಿಂತಲೂ ಶೇಕಡಾ 20 ರಷ್ಟು ಹೆಚ್ಚಿನ ಮಳೆಹಾನಿಗಳು ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿದೆ,” ಎಂದು ಸಂಘಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next