Advertisement
5 ಕಡೆ ದೊಡ್ಡ ಪ್ರಮಾಣದ ಹಾನಿಯಾಗಿತ್ತು. ನಾಲ್ಕು ಕಡೆ ದುರಸ್ತಿ ಮುಕ್ತಾಯವಾಗಿದೆ. ಆದರೆ ಎಡಕುಮೇರಿ ಸಮೀಪ 63/500 ಕಿ.ಮೀ. ವ್ಯಾಪ್ತಿಯಲ್ಲಿ ಗುಡ್ಡ ಜರಿದು ಹಳಿಯೇ ಕೊಚ್ಚಿ ಹೋದ ಕಡೆ ಮಾತ್ರ ಕೊನೆ ಹಂತದ ಕಾಮಗಾರಿ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಅದು ಮುಕ್ತಾಯವಾಗಲಿದ್ದು ಆ. 25ರಿಂದ ಮಾರ್ಗ ಸಂಚಾರಕ್ಕೆ ಮುಕ್ತವಾಗುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ಆ. 24ರಂದು ರದ್ದಾಗಿದೆ. ಕಣ್ಣೂರು/ಕಾರವಾರ- ಕೆಎಸ್‌ಆರ್ ಬೆಂಗಳೂರಿಗೆ ತೆರಳುವ ಎಕ್ಸ್‌ಪ್ರೆಸ್ ರೈಲು ಆ. 23 ಮತ್ತು 24ರಂದು ಸಂಪೂರ್ಣ ರದ್ದಾಗಿದೆ. ಕೆಎಸ್‌ಆರ್ ಬೆಂಗಳೂರು-ಕಣ್ಣೂರು/ಕಾರವಾರ ತೆಳುವ ಎಕ್ಸ್‌ಪ್ರೆಸ್ ರೈಲು ಆ. 23 ಮತ್ತು 24ರಂದು ರದ್ದಾಗಿದೆ. ಯಶವಂತ ಪುರ-ಮಂಗಳೂರು ಜಂಕ್ಷನ್ ತೆರಳುವ ಎಕ್ಸ್‌ಪ್ರೆಸ್ ರೈಲು ಆ. 25ರಂದು ರದ್ದಾಗಿದೆ. ಯಶವಂತಪುರ- ಮಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ಆ. 25ರಂದು ರದ್ದಾಗಿದೆ. ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರವು ಆ. 25ರಂದು ಭಾಗಶಃ ರದ್ದಾಗುವ ಸಾಧ್ಯತೆ ಇದೆ.