Advertisement
ಮಾ.8 ರಂದು ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಮಂಜುನಾಥನ ದರ್ಶನ ಪಡೆಯಲು ಲಕ್ಷಾಂತರ ಮಂದಿ ಪಾದಯಾತ್ರೆ ಮೂಲಕ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಂಡೋಪ ತಂಡವಾಗಿ ತೆರಳುತ್ತಿದ್ದಾರೆ. ಹಲವೆಡೆ ಸ್ಥಳೀಯರು ದಾರಿಯಲ್ಲಿ ಸಾಗುವ ಭಕ್ತರಿಗೆ ಮಜ್ಜಿಗೆ, ನೀರು, ತಿಂಡಿ ನೀಡುವ ಮೂಲಕ ಭಕ್ತರಲ್ಲಿ ದೇವರನ್ನು ಕಾಣುತ್ತಿದ್ದಾರೆ.
Related Articles
Advertisement
ಹರಕೆ ಹೊತ್ತವರೇ ಹೆಚ್ಚಿನ ಸಂಖ್ಯೆಯಲ್ಲಿ: ಯಾವುದೇ ವಯೋಮಿತಿ ಇಲ್ಲದೇ ಪಾದಯಾತ್ರೆಯಲ್ಲಿ ಪಾಲ್ಗೊಂಡು ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ನಡೆದುಕೊಂಡು ಸಾಗುತಿದ್ದು, ಮಾ.7ಸಂಜೆಯ ವೇಳೆಗೆ ಎಲ್ಲಾ ಭಕ್ತರು ಶ್ರೀಕ್ಷೇತ್ರ ತಲುಪಲಿದ್ದಾರೆ. ಕಂಕಣ, ಸಂತಾನ ಭಾಗ್ಯ, ಕಂಟಕ, ದೋಷ ಪರಿಹಾರ ಹಾಗೂ ರೋಗ-ರುಜಿನಗಳ ನಿವಾರಣೆಗಾಗಿ ಹರಕೆ ಹೊತ್ತವರು, ಇಷ್ಟಾರ್ಥ ಫಲಿಸಿದ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗಿ ಮುಡಿ ನೀಡುವ ಹರಕೆ ತೀರಿಸುತ್ತಾರೆ.
ಕಳೆದ 15 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡು ಶಿವರಾತ್ರಿ ಮಹೋತ್ಸವದಲ್ಲಿ ಮಂಜುನಾಥನ ದರ್ಶನ ಪಡೆಯುತಿದ್ದೇನೆ. ವಿದ್ಯೆ ಹಾಗೂ ಸ್ವ-ಉದ್ಯೋಗ ಹೊಂದಿದ್ದು, ತಾಯಿಯ ಆಶಯದಂತೆ ಈ ಬಾರಿ ಮದುವೆ ವಿಚಾರವಾಗಿ ಹರಕೆ ಹೊತ್ತು ಶ್ರೀಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡಿದ್ದೇನೆ. ●ಸುನೀಲ್, ಕಣ್ಣೂರು, ಬೆಂಗಳೂರು ಪೂರ್ವ ತಾಲೂಕು
ದಶಕಗಳ ಹಿಂದೆ ಹಿಂದೆ ಕಾಶಿಯತ್ರೆ ಹೆಸರಿನಲ್ಲಿ ವಯೋವೃದ್ದರು ಧಾರ್ಮಿಕ ಕ್ಷೇತ್ರಗಳ ಯಾತ್ರೆ ಮಾಡುತ್ತಿದ್ದು, ನಂತರ ನಿಂತು ಹೋಯಿತು. ಈಗ ತಿರುಪತಿ, ಧರ್ಮಸ್ಥಳ, ಶಬರಿಮಲೆಗೆ ಪ್ರತಿ ವರ್ಷ ಸಾವಿರಾರು ಮಂದಿ ಪಾದಯಾತ್ರೆ ಮೂಲಕ ದೇವರ ದರ್ಶನಕ್ಕೆ ತೆರಳುತ್ತಾರೆ. ಇವರ ಸೇವೆ ಮಾಡುವುದರಿಂದ ಆ ಭಗವಂತ ನಮಗೂ ಒಳಿತು ಮಾಡಲಿದ್ದಾನೆ. ●ತೇಜಸ್, ಹೆದ್ದಾರಿಯಲ್ಲಿ ಪಾದಯಾತ್ರಿಕರಿಗೆ ಹಣ್ಣು ನೀರು ವಿತರಿಸುವ ವ್ಯಕಿ
ನಾಸ್ತಿಕನಾಗಿದ್ದ ನಾನು ಯಾವುದೇ ದೇವರು, ಪೂಜೆ ಪುನಸ್ಕಾರ ನಂಬುತ್ತಿರಲಿಲ್ಲ. ನನ್ನ ಬದುಕಿನಲ್ಲಿ ಅಸಾಧ್ಯವಾದ ಘಟನೆ ನಡೆದು ಜೀವನ ಮುಗಿಯಿತು ಎನ್ನುವಾಗ ಹಿರಿಯರ ಮಾತಿನಂತೆ ಕಳೆದ 18 ವರ್ಷಗಳ ಹಿಂದೆ ಪಾದಯಾತ್ರೆ ಪ್ರಾರಂಭಿಸಿದೆ, ಎಲ್ಲವೂ ಒಳ್ಳೆಯದಾಯಿತು. ಬದುಕಿರುವವರೆಗೂ ಮಂಜುನಾಥನ ದರ್ಶನಕ್ಕೆ ಪಾದಯಾತ್ರೆ ಮುಂದುವರಿಸುತ್ತೇನೆ. ●ಲಕ್ಷ್ಮಣ, ಪಾದಯಾತ್ರಿ, ಚಿಂತಲ ಮಡಿವಾಳ ಗ್ರಾಮ
– ಶಾಮಸುಂದರ್ ಕೆ. ಅಣ್ಣೇನಹಳ್ಳಿ